Breaking News

ಯುವಕರಿಗೆ ಕ್ರೀಡಾ ಮನೋಭಾವ  ಬೆಳೆಸುವ ವೀರು ಸ್ಪೋರ್ಟ್ಸ್ ಅಕಾಡೆಮಿಯ ಕಾರ್ಯ ಪ್ರಶಂಶನೀಯ: ಮಾಜಿ ಶಾಸಕ ಪರಣ್ಣ ಮುನವಳ್ಳಿ 

The work of Veeru Sports Academy in instilling sportsmanship in the youth is commendable: Former MLA Paranna Munavalli

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ದೇಶ ಸೇರಿದಂತೆ ವಿಶ್ವಾದ್ಯಂತ ಕ್ರಿಕೆಟ್ ಯುವ ಜನರಿಗೆ ಸ್ಪೂರ್ತಿದಾಯಕವಾಗಿದೆ. ಇಂತಹ ಸಂದರ್ಭದಲ್ಲಿ ದಾಸನಾಳ ಗ್ರಾಮ ದಂತಹ ಗ್ರಾಮೀಣ ಪ್ರದೇಶದಲ್ಲಿ ವೀರು ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಸಮ್ಮರ್ ಕ್ಯಾಂಪ್ ಸ್ಥಾಪಿಸುವುದರ ಮೂಲಕ. ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಮುಂದಾಗಿರುವ ಅಕಾಡೆಮಿಯ ಅಧ್ಯಕ್ಷ ದೇವಾನಂದ್ ಹಾಗೂ ತಂಡದವರ ಕಾರ್ಯ ಅತ್ಯಂತ ಪ್ರಶಂಶಿಯವಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ದಾಸನಾಳ ಗ್ರಾಮದಲ್ಲಿ  ವೀರು ಸ್ಪೋರ್ಟ್ಸ್ ಅಕಾಡೆಮಿ ಹಾಗೂ  ಸಮ್ಮರ್ ಕ್ಯಾಂಪ್ ಜ್ಯೋತಿ ಬೆಳಗಿಸುವುದರ ಮೂಲಕ ಸಮಾರಂಭವನ್ನು  ಉದ್ಘಾಟಿಸಿ ಮಾತನಾಡಿದರು.

 ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡಾ ಮನೋಭಾವನೆ ಬೆಳೆಸುವುದು ಗಮನಿಸಿದರೆ ಅವರಲ್ಲಿನ ಆಸಕ್ತಿ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕ್ರಿಕೆಟ್ ಜ್ವರ ಕಾಣಬಹುದಾಗಿದೆ. ಅಂತಹ ಮಹತ್ವವಾದ ಕ್ರಿಯೆಗೆ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಸೆಂಟರ್ ವರದಾನವಾಗಲಿದೆ ಎಂದು ತಿಳಿಸಿದರು.

 ಅಕಾಡೆಮಿಯ ಅಧ್ಯಕ್ಷ ದೇವಾನಂದ್  ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿನ ಯುವಕರಿಗೆ ಕ್ರೀಡಾ  ಮನೋಭಾವನೆ ಹೆಚ್ಚು ಹೊಂದಿದ್ದು, ಅಂತಹ ಯುವಕರಿಗೆ ಸೂಕ್ತವಾದ ತರಬೇತಿ ನೀಡುವ ಉದ್ದೇಶ ಅಕಾಡೆಮಿ ಹೊಂದಿದೆ. ಜೊತೆಗೆ ಇನ್ನುಳಿದ ಕ್ರೀಡೆಗಳು ಹಾಗೂ ಸಮ್ಮರ್ ಕ್ಯಾಂಪ್ ಮೂಲಕ ಶೈಕ್ಷಣಿಕ ಚಟುವಟಿಕೆಗಳಿಗೆ ವಸತಿ ಸಹಿತ ತರಬೇತಿಗೊಳಿಸಲಾಗುತ್ತದೆ ಎಂದು ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ದಿವ್ಯಸಾನಿದ್ಯ ಬಸವಣಯ್ಯಸ್ವಾಮಿ ಹಿರೇಮಠ, ವೀರಭದ್ರಪ್ಪ, ವೀರೇಶ್ ಹಿರೇಮಠ, ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಶರಣಯ್ಯಸ್ವಾಮಿ ಉಡುಮಕಲ್,ಬಿಜೆಪಿ ಯುವ ಮುಖಂಡ ಸಂಗಮೇಶ ಸುಗ್ರೀವ, ಮನೋಹರಗೌಡ ಹೇರೂರು,ಚನ್ನವೀರಗೌಡ,ಬಸವನಗೌಡ ಬಸಾಪಟ್ಟಣ,ವೀರನಗೌಡ,ಬಸವರಾಜಪ್ಪ,ಮಲ್ಲಿಕಾರ್ಜುನ, ಹನುಮೇಶ, ಯಲ್ಲಪ್ಪ,ಭೀಮೇಶ ನಾಯಕ,ಮಾರುತಿ,ರುದ್ರೇಶ,ಗಣೇಶ ರಾಚನಗೌಡ್ರು,ಶರಣೆಗೌಡ ಮಾಲಿಪಾಟೀಲ್,

ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಪಾಲ್ಗೊಂಡಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *