Breaking News

ಉತ್ಪನ್ನ ಮಾರಾಟ ಮಾಡುವುದೂ ಕಲೆ: ರೂಪಾ

Selling a product is also an art: Rupa

ಜಾಹೀರಾತು

     ಕೊಪ್ಪಳ: ಇಂದು ಮಾರುಕಟ್ಟೆಯಲ್ಲಿ ಉತ್ಪನ್ನವೊಂದನ್ನು ಗ್ರಾಹಕರಿಗೆ ತಲುಪಿಸುವುದು ಸವಾಲಿನ ಕೆಲಸ. ಅದಕ್ಕೂ ಕ್ರಿಯಾಶೀಲತೆ, ಜನರನ್ನು ತಲುಪುವ ಕಲೆ ಗೊತ್ತಿರಬೇಕು ಎಂದು ಮರಿಯಮ್ಮನಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ರೂಪಾ.ಪಿ.ಸಿ ಹೇಳಿದರು.

     ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ವಾಣಿಜ್ಯ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ಶುಕ್ರವಾರ ನಡೆದ ರತನ್ ಟಾಟಾ ವ್ಯಕ್ತಿತ್ವ ಮತ್ತು ಸಾಧನೆ ಕುರಿತ ಕಾರ್ಯಕ್ರಮ ಉದ್ಘಾಟನೆ ಹಾಗೂ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

       ಸರಕೊಂದು ಗ್ರಾಹಕನಿಗೆ ತಲುಪಬೇಕೆಂದರೆ ಹಲವು ಮಾರ್ಗಗಳಿವೆ. ಕರಪತ್ರ, ಜಾಹೀರಾತು, ಸೆಲೆಬ್ರಿಟಿಗಳ ಶಿಫಾರಸು, ಬಾಯಿ ಮಾತಿನ ಪ್ರಚಾರದ ಮೂಲಕ ಉತ್ಪನ್ನ ಗ್ರಾಹಕನಿಗೆ ತಲುಪುತ್ತದೆ. ಉತ್ಪನ್ನದ ಉತ್ತರೋತ್ತರ ಬೆಳವಣಿಗೆಗೆ ಗುಣಮಟ್ಟ, ಜನಸಾಮಾನ್ಯರಿಗೆ ಹೊರೆಯಾಗದ, ಉದ್ಯಮಿಗೆ ನಷ್ಟವಾಗದಂತೆ ದರ‌‌ ನಿಗದಿಯೂ ಮುಖ್ಯ ಎಂದು ರೂಪಾ ಅಭಿಪ್ರಾಯಪಟ್ಟರು.

       ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಟಿ.ವಿ.ವಾರುಣಿ ಪ್ರಾಸ್ತಾವಿಕ ಮಾತನಾಡಿ, ರತನ್ ಟಾಟಾ ಬಡತನದಲ್ಲಿ ಹುಟ್ಟಿ ಬೆಳೆದು ಅನೇಕ ಸವಾಲುಗಳನ್ನು ಎದುರಿಸಿ ಉದ್ಯಮಿಯಾಗಿ ಸಾಧನೆ ಮಾಡಿದವರು. ಯಶಸ್ಸಿನ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ರೂಪಿಸಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿದ ವ್ಯಕ್ತಿತ್ವ ಅವರದ್ದು ಎಂದು ಸ್ಮರಿಸಿದರು. 

      ಟಾಟಾ ಅವರು ಬದುಕು ಯುವಪೀಳಿಗೆಗೆ, ಯುವ ಉದ್ಯಮಿಗಳಿಗೆ ಪ್ರೇರಣೆ. ಉದ್ಯಮದ ಕೌಶಲ್ಯಗಳನ್ನು ಕಲಿಸುವ ಯತ್ನವಾಗಿ ಉತ್ಪನ್ನ ಮಾರಾಟ ಮಾಡುವ ಬಗೆ, ನಾನು ಉದ್ಯಮಿಯಾದರೆ ಎನ್ನುವ ವಿಷಯಗಳ ಮೇಲೆ ಭಾಷಣ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಲಾಗಿಧ ಎಂದರು.

      ಶಿವಮೂರ್ತಿಸ್ವಾಮಿ ಗುತ್ತೂರು ನಿರೂಪಿಸಿದರು. ಡಾ.ವೀರಣ್ಣ ಸಜ್ಜನರ ಸ್ವಾಗತಿಸಿದರು. ಪವಿತ್ರಾ ಹೊಸೂರು ಪ್ರಾರ್ಥಿಸಿದರು. ಬಿ‌.ಡಿ.ಮಾಳೆಕೊಪ್ಪ ವಂದಿಸಿದರು. ಜ್ಞಾನೇಶ್ವರ ಪತ್ತಾರ, ಡಾ.ಗಿರಿಜಾ ತುರಮುರಿ, ಬಾಲಾಜಿ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಆಗಮಿಸಿದ್ದರು. ಕಲ್ಲೇಶ್ ಅಬ್ಬಿಗೇರಿ, ಫಾಹೀಮಾ ಬೇಗಂ, ಅಶೋಕ ಯಕ್ಲಾಸಪುರ, ಶಿವರಾಮ, ಬಸವರಾಜ ಕರುಗಲ್ ಮತ್ತು ವಿದ್ಯಾರ್ಥಿಗಳು ಇದ್ದರು.

About Mallikarjun

Check Also

ಶ್ರೀ ಶಂಕರ ಬಿದರಿ ರಾಜ್ಯಾಧ್ಯಕ್ಷ ಅಭಾವಿಲಿಮಹಾಸಭಾ ಬಸವ ಜಯಂತಿ ಆಚರಣೆ ಆದೇಶ ಗೊಂದಲ ಬಗ್ಗೆ:

Regarding confusion regarding the order of celebration of Basava Jayanti by Shri Shankar Bidari, State …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.