Breaking News

ಟಿಪಿಜೆಪಿ ನಡೆ ಹುಬ್ಬಳ್ಳಿ ಕಡೆ ಬಡವರ ಹಣ ಮರುಪಾವತಿಗಾಗಿ ಹೋರಾಟಕ್ಕೆ ಕೈ ಜೋಡಿಸಿ

ಎ

ಕಲ್ಯಾಣಸಿರಿ,ಕೊಪ್ಪಳ: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರ ಕಛೆರಿ ಮುಂಭಾಗದಲ್ಲಿ ೨ ತಿಂಗಳ ನಿರಂತವಾಗಿ ಟಿಪಿಜೆಪಿ ಸಂಘಟನೆಯಿಂದ ರಾಜ್ಯದ ಪ್ರತಿಯೊಂದು ಜಿಲ್ಲೇಯ ಅದ್ಯಕ್ಷರು ಹಾಗು ತಾಲೂಕು ಅದ್ಯಕ್ಷರು, ಪದಾಧಿಕಾರಿಗಳು, ರೈತ ಮುಖಂಡರು, ವಿವಿಧ ಜನಪರ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಅನಿರ್ದಿಷ್ಟ ಹೋರಾಟವನ್ನು ಮಾಡುವದರ ಜೋತೆಗೆ ನಿರಂತವಾಗಿ ನಮ್ಮ ಸಂಘಟನೆ ೨ ವರ್ಷಗಳಿಂದ ಹೋರಾಟದ ಹಾದಿಯಲ್ಲಿ ಸಾಗಿಬಂದಿದೆ ಬಡವರಿಗೆ ಹಣ ಕೊಡಿಸುವದೆ ನಮ್ಮ ಗುರಿ ಎಂದು ಟಿಪಿಜೆಪಿ ಸಂಘಟನೆಯ ರಾಜ್ಯ ಅದ್ಯಕ್ಷ ಅಪ್ಪಾಸಾಹೇಬ ಬುಗಡೆ ಅವರು ಮಾ.೨೭ ರಂದು ಕೊಪ್ಪಳದ ಈಶ್ವರ ಪಾರ್ಕ್‌ನಲ್ಲಿ ಪೂರ್ವಭಾವಿ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಂದಿನ ತಿಂಗಳ ಎಪ್ರಿಲ್ ೯ ರಂದು ಬುದುವಾರ ಪವರ ಟಿವಿ ಎರ್ಪಡಿಸಿದ ಬೃಹತ್‌‌ ಸಮಾವೇಶದಲ್ಲಿ ೫ ಲಕ್ಷ ಗ್ರಾಹಕರು ಭಾಗವಹಿಸಿ ಸರ್ಕಾರದ ಗಮನ ಸೆಳೆದು ಹಣ ಪಡೆಯುವ ಬಗ್ಗೆ ತಿಳಿಸಿದರು. ಬಡವರಿಗೆ ೧೦ ವರ್ಷ ಕಳೆದರು ಹಣ ಇದುವರೆಗೂ ಮರುಪಾವತಿಯಾಗಿಲ್ಲ ಆದ್ದರಿಂದ ಪಲ್ಸ, ಸಮೃದ್ದ ಜೀವನ, ಗ್ರೀನ್ ಬಡ್ಸ ,ವ್ಹಿತ್ರಿ, ಗುರುಟೀಕ್ ಹಿಗೇ ವಿವಿಧ ಕಂಪನಿಗಳಲ್ಲಿ ಎಜೇಂಟರು ಗ್ರಾಹಕರು ಮೋಸ ಹೋಗಿದ್ದಾರೆ ನಾವೇಲ್ಲರು
ಹೋರಾಟದ ಮೂಲಕ ನಮ್ಮ ನಮ್ಮ ಸಮಸ್ಯೆಯ ಪರಿಹಾರಕ್ಕೆ ಹಗಲು ರಾತ್ರಿ ಚಿಂತನೆ ಮಾಡುತ್ತಿದ್ದೇವೆ ,ಗ್ರಾಹಕರ ಹಣ ಮರುಪಾವತಿಗಾಗಿ ನಾವೇಲ್ಲರೂ ನಮ್ಮ ಸಂಕಲ್ಪ ದೊಂದಿಗೆ ಹೋರಾಡುತ್ತಿದ್ದೇವೆ,ನಮಗೆಲ್ಲರಿಗೂ ನಿರುದ್ಯೋಗ ಸಮಸ್ಸೆಯಿದ್ದರು ಹೋರಾಟದ ಹಾದಿಯನ್ನು ಬಿಟ್ಟಿಲ್ಲ ಕೇಲವು ಏಜೇಂಟರು ಗ್ರಾಹಕರನ್ನು ನಡು ನಿರಿನಲ್ಲಿ ಬಿಟ್ಟು ಹೋಗಿದ್ದಾರೆ , ಈ ರೀತಿ ಮಾಡುವದು ಸಮಂಜಸವಾದುದುದಲ್ಲ, ಬಡ ಗ್ರಾಹಕರು ಯಾವದೇ ಕಂಪನಿಗಳ ಎಂಡಿ ಮುಖವನ್ನು ನೋಡಿ ಹಣ ಕಟ್ಟಿಲ್ಲ ,ನಮ್ಮನ್ನು ನೋಡಿ ಹಣ ಕಟ್ಟಿದ್ದಾರೆ ಆದ್ದರಿಂದ ಎಜೇಂಟರಾದವರು ಗ್ರಾಹಕರ ಋಣ ತೀರಿಸ ಬೇಕಾದರೆ ಹೋರಾಟದ ಹಾದಿಯಲ್ಲಿ ಸಾಗಿದಾಗ ಪ್ರತಿಫಲ ಸಿಕ್ಕೆ ಸಿಗುತ್ತದೆ.
ಒಗ್ಗಟ್ಟಿನಿಂದ ಪ್ರತಿಯೊಬ್ಬರೂ ಹೋರಾಟದಲ್ಲಿ ಕೈಜೋಡಿಸಿದರೆ ಮಾತ್ರ ಯಶಸ್ಸು ಹಾಗೂ ಹಣ ಮರುಪಾವತಿ ಮಾಡಿಸಲು ಸಾಧ್ಯ ಎಂದು ಸಂಘಟನೆಯ ಮುಖಂಡ ಹಾಗು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ವಾಸುದೇವ ಮೇಟಿ ಬಣದ ಯಲಬುರ್ಗಾ ತಸಲೂಕ ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಮಾತನಾಡಿದರು. ೨೦೨೫ ಏಪ್ರಿಲ್ ೯ ರಂದು ಬುದವಾರ ದಿವಸ ಗ್ರಾಹಕರು ತಮ್ಮ ದಾಖಲೆ ಸಮೇತ ಬಂದು ತಮ್ಮ ದಾಖಲೆಗಳನ್ನು ಹುಬ್ಬಳ್ಳಿಯಲ್ಲಿ ಜರುಗುವ ಸಮಾವೇಶದಲ್ಲಿ ಒದಗಿಸಬೇಕು ಎಂದು ಟಿಪಿಜೆಪಿ ಸಂಘಟನೆಯ ಜಿಲ್ಲಾ ಅದ್ಯಕ್ಷ ಹನುಮೇಶ ಕಲ್ಮಂಗಿ ಅವರು ಮಾತನಾಡಿದರು. ಸಮಾವೇಶದಲ್ಲಿ ಭಾಗವಹಿಸಿದ ಗ್ರಾಹಕರು ತಮ್ಮ ಕಂಪನಿಗಳ ಕೌಂಟರ್ ತೆರೆಯಲಾಗುತ್ತದೆ ಆದ್ದರಿಂದ ದಾಖಲೆ ತೆಗೆದುಕೊಂಡು ನೋಂದಾಯಿಸಬೇಕು ಎಂದು ಟಿಪಿಜೆಪಿ ಸಂಘಟನೆಯ ಮುಖಂಡ ಅಂದಪ್ಪ ಸಂಗನಾಳ ಮಾತನಾಡಿ ತಮ್ಮ ದಾಖಲೆಗಳು ನೇರವಾಗಿ ಸಿಎಂ ಅವರ ಸರಕಾರಕ್ಕೆ ಕಳಿಸಲಾಗುವದು ಎಂದರು.
ಈ ವೇಳೆ ಟಿಪಿಜೆಪಿ ಸಂಘಟನೆಯ ಮುಖಂಡರಾದ ಗವಿಸಿದ್ದಪ್ಪ ಪಲ್ಲೇದ, ಪ್ರಭರಾಜ ಅಂಗಡಿ, ಶಿವಯ್ಯ ರಾವಣಕಿಮಠ, ಕೆ.ಸಂಗಮೇಶ, ರಮೇಶಗೌಡ ಹಾಲಕೇರು, ಶಿವಕುಮಾರ ಮೇಟಿ, ಶರಭಯ್ಯ ಶಿರೂರಮಠ, ಬಸವರಾಜ ಗೌರಿಮಠ, ಮಹೇಶ.ಎಂ.ಬನ್ನಿಕೊಪ್ಪ, ಈಶ್ವರ ಮಂಡಲಗೇರಿ, ಗಂಗಮ್ಮ ಕುಂಬಾರ, ಮಿನಾಕ್ಷಿ ಬಿ ಹಾಗು ಮೋಸ ಹೋಗಿರುವ ವಿವಿಧ ಕಂಪನಿಗಳ ಪ್ರತಿನಿಧಿಗಳು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗ್ರಾಹಕರ ಹಣ ಕೊಡಿಸಿ ಪ್ರಾಣ ಉಳಿಸಿ ಘೋಷಣೆ ಕೂಗಿದರು.

ಜಾಹೀರಾತು

About Mallikarjun

Check Also

ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಮಾಡಿ, ಸಮಾಲೋಚನೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಕೆ

Today in Delhi, I met Union Civil Aviation Minister Kinjarapu Ramamohan Naidu, held discussions and …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.