Breaking News

ಹೃದಯಾಘಾತ:ಸ್ಪೂರ್ತಿ ನರ್ಸಿಂಗ್ಪ್ಯಾರಾಮೆಡಿಕಲ್ಕಾಲೇಜುವಿದ್ಯಾರ್ಥಿಗಳಿಂದ ಮೂಕಾಭಿನಯದ ನೃತ್ಯರೂಪಕ

Heart attack: A silent choreography by students of Spurti Nursing Paramedical College.

ಜಾಹೀರಾತು

ಗಂಗಾವತಿ: 16 ಹೃದಯಾಘಾತ ಎನ್ನುವುದು ಇಂದು ಭಾರತೀಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ವಯೋಮಿತಿಯ ಯಾವುದೇ ಭೇದವಿಲ್ಲದೇ ಕಿರಿ ಜೀವಗಳನ್ನೂ ಆಪೋಶನ ಪಡೆಯುತ್ತಿರುವ ಈ ಖಾಯಿಲೆಗೆ ಏನು ಕಾರಣ?. ನಿಯಂತ್ರಣ ಹೇಗೆ ಎಂಬುದನ್ನು ನಗರದಲ್ಲಿ ವಿದ್ಯಾರ್ಥಿಗಳು ಮೂಕಾಭಿನಯದ ನೃತ್ಯ ರೂಪಕದಲ್ಲಿ ಪ್ರದರ್ಶಿಸಿದರು.ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರೋತ್ಸವ ಧ್ವಜಾರೋಹಣದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಗರದ ಸ್ಪೂರ್ತಿ ನರ್ಸಿಂಗ್​ ಮತ್ತು ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯರೂಪಕ&ಗಮನ ಸೆಳೆಯಿತು.”ಹೃದಯಾಘಾತ, ಕಾರ್ಡಿಯಾಕ್ ಅರೆಸ್ಟ್, ಹೃದಯ ಸ್ತಂಭನ ಎಂಬ ಕಾಯಿಲೆ ಭಾರತವನ್ನು ಪಿಡುಗಾಗಿ ಕಾಡುತ್ತಿದೆ. ವಿಧಿಯಾಟವನ್ನು ಯಾರೂ ಬಲ್ಲವರಿಲ್ಲ. ನಾವು ಅಂದುಕೊಂಡಂತೆ ಯಾವುದೂ ಆಗೋದಿಲ್ಲ” ಎಂಬ ಹಿನ್ನೆಲೆ ಧ್ವನಿಯೊಂದಿಗೆ ನೃತ್ಯರೂಪಕ ಆರಂಭವಾಗುತ್ತದೆ. ನಟ ಪುನೀತ್ ರಾಜ್​ಕುಮಾರ್​, ಚಿರಂಜೀವಿ ಸರ್ಜ, ಸ್ಪಂದನಾ, ವಿದ್ಯಾರ್ಥಿನಿ ಪೊಲೀಸ್ ಬಸವರಾಜ ಮಾಲಿಪಾಟೀಲ್ ಆಗೋಲಿ ಇತರರು ಹೃದಯಾಘಾತದಿಂದ ಸಾವನ್ನಪ್ಪಿದವರು. ಈ ಹೃದಯ ಸ್ತಂಭನಕ್ಕೆ ಏನು ಕಾರಣವಾಗುವ ಅಂಶಗಲೇನು ಎಂಬ ವಿಷಯವನ್ನು ನೃತ್ಯರೂಪಕದಲ್ಲಿ ವಿದ್ಯಾರ್ಥಿಗಳು ಸಾದರಪಡಿಸಲು ಪ್ರಯತ್ನಿಸಿದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.