Breaking News

ಹನೂರಿನಲ್ಲಿ ಸರಳವಾಗಿ ನಡೆದಶ್ರೀಯೋಗಿನರೇಯಣ ಜಯಂತಿ.

Sri Yoginareyana Jayanti was celebrated simply in Hanur

ಜಾಹೀರಾತು
ಜಾಹೀರಾತು

ವರದಿ : ಬಂಗಾರಪ್ಪ .ಸಿ.
ಹನೂರು : ಕಳೆದ ಸಮಯದಲ್ಲಿ ಸರ್ಕಾರದಿಂದ ಯಾವುದಾದರು ಸಂಘಕ್ಕೆ ಒಂದು ಕೊಟಿ ರೂ ಅನುದಾನ ಬಿಡುಗಡೆ ಮಾಡಿಸಿದ ಕೀರ್ತಿ ಇದ್ದರೆ ಅದು ನಮ್ಮ ಯೋಗಿನರೇಯೆಣ ಬಣಜಿಗ ಸಂಘವಾಗಿದೆ ಮಾಜಿ ಶಾಸಕರಾದ ಆರ್ ನರೇಂದ್ರ ಹಾಗೂ ಎಮ್ ಆರ್ ಸೀತರಾಮ್ ಹಾಗೊ ಆರ್ ದೃವನಾರಯಣ್ ರವರ ಅಧಿಕಾರದ ಅವಧಿಯಲ್ಲಿ ನಮಗೆ ನೀಡಿದ್ದಾರೆ ,ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ನಿರ್ವಹಿಸಿದೆ ಪಧಾದಿಕಾರಿಗಳು ಸ್ವಂತ ಇಚ್ಛೆಯಿಂದ ಸೇವೆ ಸಲ್ಲಿಸಿದ್ದಾರೆ ಅದ್ದರಿಂದ ನಮ್ಮ ಕಾರ್ಯವನ್ನು ನಿರ್ವಹಿಸುತ್ತೆವೆ . ಸಂಘದ ಸೇವೆಗೆ ಸದಾ ನಾವು ಸಿದ್ದ ಎಂದು ಹನೂರು ತಾಲ್ಲೂಕು ಶ್ರೀ ಯೋಗಿನರೇಯಣ ಬಣಿಜಿಗ ಸಂಘದ ಅಧ್ಯಕ್ಷರಾದ ಎಸ್ ಆರ್ ರಂಗಸ್ವಾಮಿ ತಿಳಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯಲ್ಲಿ ನ ವಸತಿ ಗೃಹದಲ್ಲಿ ಮತನಾಡಿದ ಎಇಇ ರಂಗಸ್ವಾಮಿ ಯವರು ನಮ್ಮ ಜನಾಂಗದವರು ಇಂದು ಯೋಗಿ ನರೇಯಣ ಜಯಂತಿಯನ್ನು ಆಚರಿಸುವುದು ಸಂತೋಷದ ವಿಷಯ ಇವರಿಗೆ ನಾನು ಸದಾ ಚಿರರುಣಿಯಾಗಿರುತ್ತನೆ , ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಹೋರಾಟವು ಬಹುಮುಖ್ಯವಾಗಿದೆ, ನಮ್ಮ ಜನಾಂಗದ ಶಿಕ್ಷಣಕ್ಕೆ ಎರಡು ಎ ಪ್ರಮಾಣ ಪತ್ರ ಮಾಡಿಕೊಟ್ಟಿದ್ದಾರೆ . ಇದರಿಂದ ನಮಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ , ನಮ್ಮಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಇಡಿ ರಾಜ್ಯದಲ್ಲಿ ಬಣಜಿಗ ಜನಾಂಗ ಹೆಚ್ಚಿದ್ದಾರೆ , ಮುಂದಿನ ದಿನಗಳಲ್ಲಿ ಜಯಂತಿಯನ್ನು ಅದ್ದೂರಿಯಾಗಿ ಮಾಡೋಣ ಮುಂದೆಯು ಮುಂದುವರಿಸುತ್ತ ಹೊಗುಬೇಕು ನಮ್ಮಲ್ಲಿರುವವರಿಗೆ ಸಮಾಜ ಸೇವೆ ಮಾಡಲು ಅವಕಾಶವನ್ನು ಮಾಡಿಕೊಟ್ಟರೆ ಸಹಾಯವಾಗುತ್ತದೆ . ಒಬ್ಬ ವಿದ್ಯಾರ್ಥಿ ಶುಲ್ಕವನ್ನು ಭರಿಸಲು ನಾನು ಸಹಾಯ ಮಾಡಿದರ ಪರಿಣಾಮವಾಗಿ ಇಂದು ಅವನ ವಿದ್ಯಾಭ್ಯಾಸವನ್ನು ಮುಂದುವರಿಲಾಗಿದೆ . ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ಮುಂದಾಗಬೇಕು ನಮ್ಮವರು ಎಂಬ ಮನೋಭಾವ ಬೆಳೆಸುಕೊಳ್ಳಬೇಕು ಎಂದರು . ನಮಗೆ ಹಿತ ಬಯಸುವವರಿಗೆ ಚುನಾವಣೆಯಲ್ಲಿ ಜನಾಂಗದ ಒಗ್ಗಟ್ಟು ಪ್ರದರ್ಶನವನ್ನು ಮಾಡಬೇಕು ,ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಮಾಡಬೇಕು ಎಂದರು‌.
ಶಿಕ್ಷಕರಾದ ಮಹೇಶ್ ಮಾತನಾಡಿ ನಮ್ಮ ಜನಾಂಗದವರಿಗೆ ಶಿಕ್ಷಣ ಇಲಾಖೆಯಲ್ಲಿ ಜನಾಂಗದ ಜಾತಿ ಪ್ರಮಾಣಪತ್ರವನ್ನು ಬದಲಾವಣೆ ಮಾಡಬೇಕಾಗಿದೆ ಹಲವಾರು ನ್ಯೂನತೆಗಳಿವೆ ಇದರಿಂದ ಸರ್ಕಾರದಿಂದ ಪಡೆಯುವ ಸೌಲಭ್ಯಗಳನ್ನು ಪಡೆಯಲು ಕಷ್ಟವಾಗಿದೆ, ಗ್ರಾಮಗಳಲ್ಲಿ ಸರಿಯಾದ ವಿಳಾಸ ನೀಡಿ ತಂದೆ ತಾಯಿಯಾದವರು ಜನನ ಪ್ರಮಾಣ ಪತ್ರವನ್ನು ಪಡೆದು ವಿದ್ಯಾಭ್ಯಾಸ ಮಾಡಬೇಕಾಗಿದೆ ,ನಮ್ಮಲ್ಲಿ ಗೌಡ ಬಣಜಿಗ ,ಶೆಟ್ಟಿ ಬಣಜಿಗ ,ಬಳೆ ಬಣಜಿಗ ಈಗೆ ಹಲವಾರು ಪಂಗಡಗಳಿದ್ದು ಎಲ್ಲಾವು ಒಂದೆ ಜಾತಿಯಾಗಿದೆ . ಜನಾಂಗದ ಕೆಲವರು ತಾಳ್ಮೆಯಿಂದ ಇದ್ದಷ್ಟು ನಮಗೆ ಒಗ್ಗಟ್ಟು ಬಹು ಮುಖ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಶಿಲ್ದಾರರಾದ ವೈ ಕೆ ಗುರುಪ್ರಸಾದ್ , ಆರ್ ಐ ಶೇಷಣ್ಣ , ಸಂಘದ ಉಪಾಧ್ಯಕ್ಷರಾದ ಜೈರಾಮ್ ,ಕಾರ್ಯದರ್ಶಿ ರಂಗಶೇಟ್ಟಿ ,ಖಜಾಂಚಿ ಶ್ರೀರಂಗಶೇಟ್ರು .ಉಪಾಕಾರ್ಯದರ್ಶಿ ಬಸವರಾಜು . ಸಂಘಟನೆ ಕಾರ್ಯದರ್ಶಿ ಪ್ರಕಾಶ್ . ಸದಸ್ಯರುಗಳಾದ ಚಂದ್ರು .ಮಾದೇಶ್ ,ಬಾಲು ,ಗೋವಿಂದು ,ನಾಗೇಶ್ ,ಪಟ್ಟಣ ಪಂಚಾಯತಿ ಸದಸ್ಯರು ಪವಿತ್ರ ಪ್ರಸನ್ನ ಕುಮಾರ್ . ಮುಖಾಡರುಗಳಾದ ನಾಗರಾಜು .ಶಿವಕುಮಾರ್ . ನಾಗರಾಜು .ಮುನಿಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಹೊಸಕೇರಾ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿಬರುವಕೋಟಯ್ಯಕ್ಯಾಂಪ್ ಗ್ರಾಮದಲ್ಲಿ ಅಕ್ರಮ ಮಧ್ಯಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ.

Protest demanding an end to illegal middlemen in Kotayya Camp village, which falls under the …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.