Breaking News

ವಿದೇಶಿ ಮಹಿಳೆ ಮತ್ತು ಸ್ಥಳಿಯ ಹೊಮ್ ಸ್ಟೇ ಮಾಲಕಿ ಮೇಲೆ ಆಗಿರುವ ಅತ್ಯಾಚಾರ ಅತ್ಯಂತ ಖಂಡನೀಯ- ಮಾಜಿ ಶಾಸಕ ಪರಣ್ಣ ಮುನವಳ್ಳಿ

The rape of a foreign woman and a local homestay owner is highly condemnable – Former MLA Paranna Munavalli

ಜಾಹೀರಾತು
Screenshot 2025 03 10 19 14 55 03 680d03679600f7af0b4c700c6b270fe7

ಗಂಗಾವತಿ ತಾಲೂಕಿನ ಆನೆಗುಂದಿ ಭಾಗದ ಸಾಣಾಪುರ ಕೆರೆಯ ಹತ್ತಿರ ವಿದೇಶಿ ಮಹಿಳೆ ಮತ್ತು ಸ್ಥಳಿಯ ಹೊಮ್ ಸ್ಟೇ ಮಾಲಕಿ ಮೇಲೆ ಆಗಿರುವ ಅತ್ಯಾಚಾರ ಅತ್ಯಂತ ಖಂಡನಾರ್ಹ. ಘಟನೆಯಾಗಿದ್ದು, ಇಂತಹ ಹೇಯಾ ಕೃತ್ಯಾವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಭಾಗದ ಅಂಜನಾದ್ರಿ, ಪಂಪಾಸರೋವರ, ಸಾಣಾಪೂರ ಪ್ರದೇಶಗಳು ದೇಶ ಮತ್ತು ವಿದೇಶಿ ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ಪ್ರವಾಸಿ ತಾಣವಾಗಿದ್ದು, ದಿನನಿತ್ಯ ದೇಶ ಮತ್ತು ವಿದೇಶದಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರ ರಕ್ಷಣೆ ಮಾಡುವುದು ಪೋಲಿಸರ ಮತ್ತು ಸರಕಾರದ ರ‍್ತವ್ಯವಾಗಿರುತ್ತದೆ. ಆದರೆ ದಿನಾಂಕ ೬೧೩\೨೦೨೫ ರಂದು ಇಬ್ಬರು ವಿದೇಶಿ ಪ್ರವಾಸಿಗರು ಮತ್ತು ಮೂವರು ದೇಶಿ ಪ್ರವಾಸಿಗರು ಆನೆಗುಂದಿ ಭಾಗದ ಸಾಣಾಪುರ ಕೆರೆ ವ್ಯಾಪ್ತಿ ಪ್ರದೇಶದಲ್ಲಿ ಬಂದಿರುತ್ತಾರೆ. ಈ ಸಂರ‍್ಭದಲ್ಲಿ ಮೂರು ಜನ ದರ‍್ಷ್ಕಮಿಗಳು ಹಲ್ಲೆ ಮಾಡಿ ಮೂರು ಜನರನ್ನ ಕಾಲುವೆಗೆ ತಳ್ಳಿ, ಒಬ್ಬ ವಿದೇಶಿ ಮಹಿಳೆ ಮತ್ತು ಇನ್ನೊಬ್ಬ ಸ್ಥಳೀಯ ಹೋಮ್ ಸ್ಟೇ ಮಾಲಕಿ ಮೇಲೆ ಅತ್ಯಾಚಾರ ಮಾಡಿ ದರ‍್ಷ್ಕಮಿಗಳು ಘಟನ ಸ್ಥಳದಿಂದ ಓಡಿ ಹೊಗಿದ್ದು ಈಗಾಗಲೇ ಪೊಲಿಸ ಅಧಿಕಾರಿಗಳು ದರ‍್ಷ್ಕಮಿಗಳನ್ನು ಬಂಧಿಸಿರುವದನ್ನು ಶ್ಲಾಗಿಸುತ್ತೇನೆ. ಈ ಘಟನೆಯಲ್ಲಿ ರ‍್ವ ಪ್ರವಾಸಿಗ ಮೃತ ಪಟ್ಟಿದ್ದು, ಘಟನೆಗೆ ಕಾರಣರಾದ ದರ‍್ಷ್ಕಮಿಗಳು ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಹಾಗು ಇತ್ತಿಚಿನ ದಿನಗಳಲ್ಲಿ ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಮಾದಕ ವಸ್ತು ಸರಭರಾಜು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೂಳುವುದ ಅವಶ್ಯವಾಗಿರುತ್ತದೆ. ಇಂತಹ ಘಟನೆಯಿಂದ ದೇಶ ಮತ್ತು ವಿದೇಶಿ ಪ್ರವಾಸಿಗರಿಗೆ ರಕ್ಷಣೆ ಮಾಡಲು ಆನೆಗುಂದಿ ಭಾಗದ ಅಂಜನಾದ್ರಿ ಬೆಟ್ಟದ ಹತ್ತಿರ ಒಂದು ಪೋಲಿಸ್ ಠಾಣೆ ನರ‍್ಮಾಣ ಮಾಡಿ ಹಾಗು ಒಂದು ಜಿಲ್ಲಾ ಪೋಲಿಸ್ ಮೀಸಲು ಪಡೆ ನಿಯೊಜಿಸಿ ದೇಶ, ವಿದೇಶಿ ಪ್ರವಾಸಿಗರಿಗೆ ಸೂಕ್ತ ಭದ್ರತೆ ಒದಗಿಸಿ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಬೇಕೆಂದು ಈ ಮೂಲಕ ತಮಗೆ ತಿಳಿಸುತ್ತಾ ಈ ವಿಷಯದ ಬಗ್ಗೆ ಅಗತ್ಯ ತರ‍್ತು ಕ್ರಮಕೈಗೊಳ್ಳಬೇಕೆಂದು ಮಾನ್ಯ ಗೃಹಮಂತ್ರಿಗಳಾದ ಶ್ರೀ ಜಿ.ಪರಮೇಶ್ವರ. ಕರ್ನಾಟಕ ಸರ್ಕಾರ, ಇವರಿಗೆ ವತ್ತಾಸಿ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.

About Mallikarjun

Check Also

20251009 183022 collage.jpg

ಗಂಗಾವತಿ ತಾಲೂಕಿನಲ್ಲಿ ನಡೆಯುತ್ತಿರುವಇಸ್ಪೀಟ್ ಜೂಜಾಟವನ್ನು ಶಾಶ್ವತ ತಡೆಹಿಡಿಯಲು ಒತ್ತಾಯ: ರಮೇಶ ವಿಠಲಾಪುರ

Demand for permanent ban on Ispeet gambling in Gangavathi taluk: Ramesh Vithalapur ಗಂಗಾವತಿ: ತಾಲೂಕಿನ ಮಲ್ಲಾಪುರ, …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.