Breaking News

ದಾವಣಗೆರೆ ಮತ್ತು ಬೆಂಗಳೂರು ರೇಲ್ವೆ ಸೌಲಭ್ಯಕ್ಕಾಗಿ ಸಂಸದರಲ್ಲಿ ಮನವಿ.

Appeal to MP for Davangere and Bangalore railway facility.

ಜಾಹೀರಾತು
ಜಾಹೀರಾತು

ಕೊಪ್ಪಳ : ವಿವಿಧ ರೇಲ್ವೆ ಸೌಲಭ್ಯಗಳನ್ನು ಒದಗಿಸುವಂತೆ
ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೊಪ್ಪಳ ಸಂಸದರಿಗೆ ಮನವಿ ಮಾಡಲಾಗಿದೆ.

ದಾವಣಗೆರೆ-ಹೊಸಪೇಟೆ ರೇಲ್ವೆ ಸಂಖ್ಯೆ: 07395 ಮತ್ತು 07396 ಅಥವಾ ಹರಿಹರ-ಹೊಸಪೇಟೆ ರೇಲ್ವೆ ಸಂಖ್ಯೆ:56529 ಮತ್ತು 56530 ಹಾಗೂ ಬೆಂಗಳೂರು-ಹೊಸಪೇಟೆ ರೇಲ್ವೆ ಸಂಖ್ಯೆ 06243 ಮತ್ತು 06244 ಅಥವಾ ಯಶವಂತಪುರ-ಹೊಸಪೇಟೆ ರೇಲ್ವೆ ಸಂಖ್ಯೆ:56519 ಮತ್ತು 56520 ಈ ರೇಲ್ವೆಗಳನ್ನು ಹೊಸಪೇಟೆಯಿಂದ ಸಿಂಧನೂರು ನಗರದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳುವಂತೆ ಸಂಸದ ರಾಜಶೇಖರ ಹಿಟ್ನಾಳ ಅವರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಯಿತು.

ಲೋಕಸಭಾ ಸದಸ್ಯರ ನೂತನ ಕಚೇರಿಯನ್ನು ಸೋಮವಾರ ಜಿಲ್ಲಾ ಆಡಳಿತ ಭವನದಲ್ಲಿ ಉದ್ಘಾಟಿಸಲಾಯಿತು.ಈ ಸಮಾರಂಭದಲ್ಲಿ ಭಾಗವಹಿಸಿದ್ದ ವಾಣಿಜ್ಯೊಧ್ಯಮ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ನಗರಸಭಾ ಹಿರಿಯ ಸದಸ್ಯ ಮನೋಹರಸ್ವಾಮಿ ಮುದೇನೂರ ಹಿರೇಮಠ ಮತ್ತು ಕೊಪ್ಪಳ ಪಿಕಾರ್ಡ ನಿರ್ದೇಶಕ ಸಂಗನಗೌಡ ಪಾಟೀಲ್ ಅವರು ಈ ಮನವಿ ಸಲ್ಲಿಸಿದರು.

ಈ ಕೂಡಲೇ ಈ ಬಗ್ಗೆ ರೇಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣನವರಿಗೆ ಪತ್ರ ಬರೆಯುವುದಾಗಿ ಹಾಗೂ ಅವರನ್ನು ಖುದ್ದಾಗಿ ಭೇಟಿಯಾಗಿ ಈ ಬಗ್ಗೆ ಗಮನ ಸೆಳೆಯುವುದಾಗಿ ಸಂಸದರು ಭರವಸೆ ನೀಡಿದರು.

About Mallikarjun

Check Also

ಜೆ ಎಸ್ ಬಿ ಪ್ರತಿಷ್ಠಾನ, ಕೊಳ್ಳೇಗಾಲ ವತಿಯಿಂದ ರೈತರಿಗೆ ತರಬೇತಿ ಕಾರ್ಯಕ್ರಮ.

Training program for farmers by JSB Foundation, Kollegala. ವರದಿ : ಬಂಗಾರಪ್ಪ .ಸಿ.ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಹೋಬಳಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.