Breaking News

ಸಹಕಾರಿ ರಂಗವು ಬೆಳೆಯಲು ಎಲ್ಲರ ಸಹಕಾರ ಅಗತ್ಯ : ಸಚಿವಶಿವರಾಜತಂಗಡಗಿ,,

Cooperation of all is necessary for cooperative sector to grow: Minister Shivraj Thangadagi

ಜಾಹೀರಾತು
ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.

ಕುಕನೂರು : ಕೊಪ್ಪಳ ಜಿಲ್ಲೆಯಲ್ಲಿ ಆರು ಲಕ್ಷ ಜನ ಸದಸ್ಯರ ಸಂಖ್ಯೆ ಇದ್ದು ಕೇವಲ ಮೂರು ಲಕ್ಷ ಸದಸ್ಯರು ನೊಂದಣಿಯಾಗಿದ್ದು ಮುಂದಿನ ದಿನ ಮಾನದಲ್ಲಿ ಇದರ ಕುರಿತು ಜಾಗೃತಿ ಮೂಡಿಸುವ ಮೂಲಕ ಸದಸ್ಯರ ಸಂಖ್ಯೆ ಹೆಚ್ಚಿಸಲಾಗುವುದು ಎಂದು ರಾಯಚೂರ-ಕೊಪ್ಪಳ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್ ತೋರಣದಿನ್ನಿ ಹೇಳಿದರು.

ಅವರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರದಂದು ಆಯೋಜಿಸಿದ್ದ ಸಹಕಾರ ಜಾಗೃತ ಸಮಾವೇಶ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಹಕಾರಿ ಸಂಘಗಳಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿ ರೈತರ ಆರ್ಥಿಕ ಸಬಲತೆಗೆ ಆಧ್ಯತೆ ನೀಡುವುದರ ಜೊತೆಗೆ ಯಶಸ್ವಿನಿಯಲ್ಲಿ ಆರೋಗ್ಯಕ್ಕೆ ಆರ್ಥಿಕ ನೆರವು ಇದ್ದು ಯಶಸ್ವಿನಿ ನೊಂದಣಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ದುರುಪಯೋಗ ಪಡಿಸಿಕೊಂಡ ಸಹಕಾರಿ ಸಂಘದ 104 ಪ್ರಕರಣಗಳನ್ನು ದಾಖಲಿಸಲಾಗಿದೆ. ದುರುಪಯೋಗವಾದ ಹಣವನ್ನು ಮರು ಪಾವತಿ ಮಾಡಿಕೊಳ್ಳಲು ಸಚಿವರ ಮಾರ್ಗದರ್ಶನದಲ್ಲಿ ಕಾರ್ಯ ಪ್ರವೃತ್ತರಾಗಲಾಗುವುದು ಎಂದರು.

ಹಾಲು ಉತ್ಪಾದನೆಯಲ್ಲಿ 2ಲಕ್ಷ 13 ಸಾವಿರವಿದ್ದು, ಇದರಲ್ಲಿ 1ಲಕ್ಷ 30 ಸಾವಿರ ಮಾತ್ರ ಮಾರಾಟವಾಗುತ್ತಿದೆ ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.

ಈ ವೇಳೆ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ ಸಹಕಾರಿ ರಂಗ ಬೆಳೆದರೇ ರೈತನ ನೆಮ್ಮದಿ ಸಾಧ್ಯವಾಗುತ್ತದೆ. ಸಹಕಾರಿ ರಂಗವು ಬೆಳೆಯಬೇಕಾದರೇ ಎಲ್ಲರ ಸಹಕಾರ ಅಗತ್ಯ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ ರಾಯರಡ್ಡಿಯವರು ಹೊಸ ಸಂಚಲನವನ್ನು
ಮೂಡಿಸಿದ್ದಾರೆ. ರಾಯರಡ್ಡಿಯವರು ಅಭಿವೃದ್ದಿಯಲ್ಲಿ ಸಾಕಷ್ಟು ಮುಂದಿದ್ದಾರೆ ಆದರೆ ನಾನು ಅವರಷ್ಟು ಅಭಿವೃದ್ದಿ ಮಾಡಿಲ್ಲಾ ಎಂದ ಅವರು ಮೊದಲು ಸಹಕಾರಿ ಸಂಘಗಳು ಸೀಮಿತ ವರ್ಗಕ್ಕೆ ಮೀಸಲಾಗಿದ್ದು ಸರಕಾರ ಈಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರ ಕ್ಷೇತ್ರವನ್ನು ಮುನ್ನೆಡೆಸುತ್ತಿದೆ ಎಂದರು.

ರಾಯಚೂರಿನಿಂದ ಕೊಪ್ಪಳ ಜಿಲ್ಲೆಗೆ ಸಹಕಾರ ಕ್ಷೇತ್ರವನ್ನು ಬೇರೆಯಾಗಿ ವಿಂಗಡನೆ ಮಾಡುವಂತೆ ಸಚಿವ ರಾಜಣ್ಣನವರಿಗೆ ಮನವಿ ಮಾಡಿದರು.

ನಂತರ ಎಸ್. ಎಸ್ ಪಾಟೀಲ್ ಮಾತನಾಡಿ ಎಲ್ಲಿ ಪ್ರಾಮಾಣಿಕರು ಇರುತ್ತಾರೋ ಅಲ್ಲಿ ಸಹಕಾರಿ ಸಂಘಗಳು ಅಭಿವೃದ್ದಿ ಹೊಂದುತ್ತವೆ. ಇಂತಹ ಸಮಯದಲ್ಲಿ ಹಾಲಪ್ಪ ಆಚಾರ್ ಅವರನ್ನು ನೆನೆಯಲೇಬೇಕು ಅವರು ಸಹಕಾರಿ ಕ್ಷೇತಾರದ ಅಭಿವೃದ್ದಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ರೈತರು ಎಲ್ಲಿಯವರೆಗೆ ದುಡಿದು ಸಾಲ ಮರುಪಾವತಿ ಮಾಡುವದಿಲ್ಲವೋ ಅಲ್ಲಿಯವರೆಗೆ ಅವರು ಉದ್ದಾರ ಆಗುವುದಿಲ್ಲಾ ಎಂದರು. ಸಹಕಾರಿ ಕ್ಷೇತ್ರದವರು ಬಲಿಷ್ಠವಾದರೇ ನಮ್ಮದೇ ಒಂದು ಸರಕಾರ ರಚನೆಯಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡೀಸಿದರು.

ನಂತರ ಎಚ್. ಕೆ ಪಾಟೀಲ್ ಮಾತನಾಡಿ ವೆಂಕಟರಾವ್ ಅವರು ರಾಯಚೂರು ಸಹಕಾರಿ ಕ್ಷೇತ್ರ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.

ಸಹಕಾರಿ ಸಂಸ್ಥೆ ಬೆಳಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು ಯುವಕರು ಹಿಂದೇಟು ಹಾಕುತ್ತಿದ್ದಾರೆ. ಯುವಕರನ್ನು ಓಲೈಸುವ ಕೆಲಸ ಮಾಡುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಹಾಗೂ ತುಳಿತಕ್ಕೆ ಒಳ ಪಟ್ಟವರು ಈ ಸಹಕಾರಿ ರಂಗಕ್ಕೆ ಬರಬೇಕು, ಅವರನ್ನು ಎಲ್ಲಾ ರೀತಿಯಲ್ಲೂ ಸಮಾಜಿಕವಾಗಿ ಎತ್ತಿ ಹಿಡಿಯುವ ಕೆಲಸ ಮಾಡಲಾಗುವುದು ಎಂದರು.

ಸಹಕಾರಿ ಕ್ಷೇತ್ರದ ಬದಲು ಖಾಸಗಿ ಕ್ಷೇತ್ರದವರು ಸಾಲಗಾರರ ಮನೆ ಬಾಗಿಲು ಕಾಯ್ದು ಹಣ ವಸೂಲಿ ಮಾಡತ್ತಾರೆ. ಸಹಕಾರಿಗಳು ಇಂತಹ ಮಾಡುವುದಿಲ್ಲಾ, ಸಹಕಾರಿಗಳು ಜನ ಹಿತ ಮಾಡುತ್ತಿವೆ. 75ವರ್ಷದಿಂದಲೂ ನಾವು ಹಿಂದೂಳಿದಿದ್ದೇವೆ ಎಂದರು.

ರಾಯರಡ್ಡಿ ಏನಾದರೂ ಮಾಡಿದರೇ ಹೊಸದನ್ನೇ ಮಾಡತಾರೇ, ಸಹಕಾರಿ ಸಚಿವರು ಕರೆದರೂ ಕೇಲವೊಂದ ಕಡೆ ಕಾರ್ಯಕ್ರಮ ತಪ್ಪಿಸತಾರೇ ಆದರೆ ರಾಯರಡ್ಡಿಯವರ ಅಟ್ರ್ಯಾಕ್ಟಿವ್ ನಿಂದ ಇಂದು ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದರು.

ನಂತರದಲ್ಲಿ ಸಹಕಾರ ಸಚಿವ ರಾಜಣ್ಣ ಮಾತನಾಡಿ ರೈತರು ಬೆಳೆದ ಬೆಳೆಗಳಿಗೆ ರೈತನೇ ಬೆಲೆ ಕಟ್ಟಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವವರೆಗೂ ರೈತ ಅಭಿವೃದ್ದಿಯಾಗಲು ಸಾಧ್ಯವಿಲ್ಲಾ ಎಂದು ಹೇಳಿದರು.

ವಿದ್ಯಾವಂತರು ಸಹಕಾರಿ ಕ್ಷೇತ್ರಕ್ಕೆ ಬರಬೇಕು ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರಿ ರಂಗವನ್ನು ಬಲಪಡಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಗೆ ಒಂದರಂತೆ ಸಹಕಾರ ಸಂಘವನ್ನು ಮಾಡುವ ಮೂಲಕ ಎಲ್ಲರೂ ಈ ರಂಗದಲ್ಲಿ ತೋಡಗುವಂತೆ ಮಾಡಲಾಗುವುದು ಎಂದರು.

ಸಹಕಾರ ಸಂಘದ ಕುರಿತು ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಮಾಹಿತಿ ನೀಡಲು ಪಠ್ಯ ಪುಸ್ತಕದ ಮೂಲಕ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಸಹಕಾರ ಸಂಘದಲ್ಲಿ ಷೇರುದಾರರ ಬೆಳವಣಿಗೆಗೆ ಶ್ರಮಿಸಬೇಕು. ಸಹಕಾರ ಆಂದೋಲನದಲ್ಲಿ ಅಸಹಾಯಕರಿಗೆ ಸಹಾಯ ಮಾಡಿದಕ್ಕೆ ನಾವು ಇಂದು ಹಣ. ಜಾತಿ ಇಲ್ಲದೇ ನಿಮ್ಮ ಆಶಿರ್ವಾದದಿಂದ ವಿಧಾನಸಭೆ ಪ್ರವೇಶ ಮಾಡಿದ್ದೇವೆ ಎಂದರು.

ರಾಜ್ಯದಲ್ಲಿ ಯಾರು ಹಸಿವಿನಿಂದ ಬಳಲ ಬಾರದು ಎಂದು ಸಿಎಂ ಸಿದ್ರಾಮಯ್ಯ ನವರು ಅನ್ನಭಾಗ್ಯ ಯೋಜನೆ ಜಾರಿ ಮಾಡಿರುವದರಿಂದ ಇಂದು ಬಿಕ್ಷುಕರ ಸಂಖ್ಯೆ ಈಗ ವಿರಳವಾಗಿದೆ ಎಂದು ಸಿಎಂ ಅವರ ಪರ ಹೆಮ್ಮೆಯ ಮಾತುಗಳನ್ನಾಡಿದರು.

ಕೊನೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ರಾಯರಡ್ಡಿ ಮಾತನಾಡಿ ಸಹಕಾರ ಕ್ಷೇತ್ರವನ್ನು ಉನ್ನತಿಕರಿಸಿ, ಸದಸ್ಯರನ್ನು ಹೇಗೆ ದ್ವೀಗುಣಗೊಳಿಸಬೇಕು ಹಾಗೂ ಇದಕ್ಕೆ ಸಮಾವೇಶದಲ್ಲಿ ಕೇಲವು ನಿರ್ಣಯಗಳನ್ನು ಮಂಡಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ವಾಧ್ಯಮೇಳಗಳೊಂದಿಗೆ ಸಹಕಾರ ಪಿತಾಮಹಾ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರ ಭಾವಚಿತ್ರ ಮೆರವಣಿಗೆಯೊಂದಿಗೆ ಸಹಕಾರ ಇಲಾಖೆ ಸಚಿವರನ್ನು ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ, ವೆಂಕಟರಾವ್ ನಾಡಗೌಡ, ಹಸನ್ ಸಾಬ ದೋಟಿಹಾಳ, ಶಿವಶಂಕರ್ ಗೌಡ ಪಾಟೀಲ್, ಅಮರೇಗೌಡ ಬಯ್ಯಾಪೂರ, ಶೇಖರಗೌಡ ಮಾಲಿಪಾಟೀಲ್, ಸುರೇಶರಡ್ಡಿ ಮಾದಿನೂರು, ವೃಷಬೇಂದ್ರಯ್ಯ ಜೆ.ಎಂ, ಶಿವಪ್ಪ ವಾದಿ, ಬಸವರಾಜ ರಾಜೂರು, ಲಲಿತಮ್ಮ ಯಡಿಯಾಪೂರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ, ಚಂದ್ರಶೇಖರಯ್ಯ ಹಿರೇಮಠ, ಬಸವರಾಜ ಉಳ್ಳಾಗಡ್ಡಿ ಹಾಗೂ ತಹಶೀಲ್ದಾರರು ಪಟ್ಟಣ ಪಂಚಾಯತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು, ಮುಖಂಡರು ಇದ್ದರು.

About Mallikarjun

Check Also

ಗ್ರಾಮಗಳಲ್ಲಿ ಪ್ರತ್ಯಕ್ಷವಾದ ಚಿರತೆಗಳು ಪ್ರಾಣ ಭಯದಲ್ಲಿರುವ ಜನರು

People are in fear of their lives when leopards are seen in villages. ವರದಿ:ಬಂಗಾರಪ್ಪ ಸಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.