Breaking News

ಪಕ್ಷಿಗಳ ಗಣತಿಯಲ್ಲಿ ಪಾಲ್ಗೊಂಡುಅನುಭವವನ್ನು ಹಂಚಿಕೊಂಡ ಸಾಲೂರು ಶ್ರೀ ಗಳು

Mr. Salur who participated in bird census and shared his experience.

ಜಾಹೀರಾತು


ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ ಶ್ರೀ
ಮಲೆಮಹದೇಶ್ವರ ಸಂರಕ್ಷಿತ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಕಾಲ ನಡೆದ ಪಕ್ಷಿಗಳ ಗಣತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇವರು ಸಹ ಪರಿಸರದ ಮೇಲೆ ಸಾಮಾನ್ಯ ಜನರಿಂದ ಆಗುವ ದಬ್ಬಾಳಿಕೆಯಿಂದ ಪಕ್ಷಿಗಳ ಸಂತತಿಯು ನಶಿಸಿ ಹೋಗುವುದನ್ನು ನಾವುಗಳು ತಡೆಯಬೇಕು ಎಂದು ಸಾಲೂರು ಮಠದ ಶ್ರೀ ಡಾ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ತಿಳಿಸಿದರು.
ಗಣತಿದಾರರ ಜೋತೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಮ್ಮ ಕಾಡಿನಲ್ಲಿ
ಸುಮಾರು 115ಕ್ಕೂ ಹೆಚ್ಚು ಮಂದಿ ಮತ್ತು ಮಲೆಮಹದೇಶ್ವರ ವನ್ಯಧಾಮ ಎ. ಸಿ.ಎಫ್ ಸಹ ಪಾಲ್ಗೊಂಡಿದ್ದರು.

ನಾವು ನಮ್ಮ ಸುತ್ತಲಿನ ಪರಿಸರದಲ್ಲಿ ದಿನನಿತ್ಯ ಕಾಣಸಿಗುವ ಹಲವು ಪಕ್ಷಿಗಳನ್ನು ನೋಡಿರುತ್ತೇವೆ. ಆದರೆ ಅಪರೂಪದ ಪಕ್ಷಿಗಳು ನೋಡಲು ಸುಲಭವಾಗಿ ಸಿಗುವುದಿಲ್ಲ. ಅವು ಕಾಡುಗಳು, ಹಸಿರು ಮತ್ತು ನೀರು ಇರುವ ಪ್ರದೇಶಗಳಲ್ಲಿ ಇರುತ್ತವೆ. ಹಕ್ಕಿ ಪಕ್ಷಿಗಳಿಗೆ ಸಹಜವಾಗಿ ಕೀಟಗಳು, ಜೇಡಗಳು, ಇಂತಹ ಆಹಾರಗಳು ಬೇಕು. ಮೊದಲು ಮನೆಯ ಸುತ್ತ ಮುತ್ತ ಮರಗಿಡಗಳು ಇತ್ತು. ಈಗ ಎಲ್ಲ ಗಿಡಮರಗಳನ್ನು ಕಡಿದು ಹಾಕಿ ಬಿಲ್ಡಿಂಗ್ ಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ. ಮೊಬೈಲ್ ರೇಡಿಯೇಷನ್, ಟವ‌ರ್ ನಿಂದ ಕೂಡ ಪಕ್ಷಿಗಳು ಕಡಿಮೆಯಾಗುತ್ತಿವೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಕಾಡನ್ನು ನಾವು ಕಡಿಮೆ ಮಾಡಿಕೊಳ್ಳುತ್ತಿದ್ದೇವೆ. ಈಗೆಲ್ಲ ಮನೆಯ ಸುತ್ತ ಮುತ್ತ ಮರಗಳನ್ನು ಬೆಳೆಸಲು ಯಾರೂ ಇಷ್ಟಪಡಲ್ಲ. ರಸ್ತೆಗಳನ್ನೆಲ್ಲ ಕಾಂಕ್ರಿಟ್ ಮಾಡಿಕೊಳ್ಳುತ್ತಿದ್ದೇವೆ.

ಹಕ್ಕಿಗಳ ಜಗತ್ತಿನಲ್ಲಿ ಆಗುವ ಬದಲಾವಣೆಗಳ ಬಗ್ಗೆ ಅರಿತುಕೊಳ್ಳಲು ಪಕ್ಷಿ ಸಮೀಕ್ಷೆ ನೆರವಾಗಲಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಪಕ್ಷಿಗಳ ಸಂಖ್ಯೆ ಏರಿಳಿತದ ಮಾಹಿತಿ ಈ ಸಮೀಕ್ಷೆಯಿಂದ ಗೊತ್ತಾಗುತ್ತದೆ. ಮುಂದಿನ 10 ವರ್ಷಗಳಲ್ಲಿ ಆ ಪ್ರದೇಶದಲ್ಲಿ ಏನೇನು ಬದಲಾವಣೆಗಳಾದವು ಎಂಬುದಕ್ಕೆ ನಿಖರ ಕಾರಣಗಳು ಗೊತ್ತಾಗಲಿವೆ ಇದೇ ಮೊದಲ ಬಾರಿಗೆ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಪಕ್ಷಿ ಸಮೀಕ್ಷೆ ನಡೆದಿದೆ. ಇಲ್ಲಿನ ಪಕ್ಷಿಗಳ ಆವಾಸಸ್ಥಾನಗಳ ರಕ್ಷಣೆ ಹಾಗೂ ಸಂಶೋಧನೆಗೆ ಈ ಸಮೀಕ್ಷೆ ನೆರವಾಗಲಿದೆ. ಅರಣ್ಯಾಧಿಕಾರಿಗಳಾದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು .

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.