Breaking News

ದರೋಜಿ ರೇಲ್ವೆ ಲೈನ್ ರಚನೆಗೆಸಿಗದಅನುದಾನ ಅಶೋಕಸ್ವಾಮಿ ಹೇರೂರ ಅಸಮದಾನ.

Ashokaswamy Heroor Asamada who did not get the grant for the construction of Daroji Railway Line.

ಜಾಹೀರಾತು
ಜಾಹೀರಾತು

ಗಂಗಾವತಿ:ಫ಼ೆಬ್ರುವರಿ 1 ರಂದು ಮಂಡಿಸಲಾದ ಕೇಂದ್ರ ಸರಕಾರದ ಆಯ-ವ್ಯಯ ಪಟ್ಟಿಯಲ್ಲಿ ದರೋಜಿ-ಗಂಗಾವತಿ-ಬಾಗಲಕೋಟ್ ನೂತನ ರೇಲ್ವೆ ಮಾರ್ಗ ರಚನೆಗೆ ಅನುದಾನ ಸಿಗದಿರುವುದಕ್ಕೆ ರಾಜ್ಯ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಮಹಾ ಮಂಡಳದ ನಿಕಟಪೂರ್ವ ನಿರ್ದೇಶಕ ಅಶೋಕಸ್ವಾಮಿ ಹೇರೂರ ತಮ್ಮ ಅಸಮದಾನ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿಗೆ ಕೊಪ್ಪಳಕ್ಕೆ ಆಗಮಿಸಿದ್ದ ರೇಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರು ಅನುದಾನದ ನೀಡುವ ಆಶ್ವಾಸನೆ ನೀಡಿದ್ದರು,ಆದರೂ ಅನುದಾನ ದೊರೆತಿಲ್ಲ.ಆದ್ದರಿಂದ ಹೆಚ್ಚುವರಿ ಆಯ-ವ್ಯಯ ಪಟ್ಟಿಯಲ್ಲಿ ಈ ಯೋಜನೆಗೆ ಅನುದಾನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮುಂದೆ ರಾಜ್ಯ ಸರಕಾರ ಮಂಡಿಸುವ ಆಯ-ವ್ಯಯ ಪಟ್ಟಿಯಲ್ಲಿ ರಾಜ್ಯದಿಂದ ಅರ್ಧದಷ್ಟು ಅನುದಾನ ನೀಡಲು, ಸಚಿವರು ಮತ್ತು ಶಾಸಕರಲ್ಲಿ ಮನವಿ ಮಾಡುವುದಾಗಿ ತಿಳಿಸಿದ್ದಾರೆ.ಇದರಿಂದ ಉಳಿದ ಹಣವನ್ನು ಕೇಂದ್ರದಿಂದ ಪಡೆಯಲು ಅನುಕೂಲವಾಗುತ್ತದೆ ಎಂದಿದ್ದಾರೆ.

ಮುನಿರಾಬಾದ್-ಮಹಿಬೂಬ್ ನಗರ ರೇಲ್ವೆ ಕಾಮಗಾರಿಗೆ ರೂ.214.05 ಕೋಟಿ ಅನುದಾನ ನೀಡಿರುವುದನ್ನು ಅವರು ಸ್ವಾಗತಿಸಿದ್ದಾರೆ.ಸಿಂಧನೂರ ನಿಂದ ರಾಯಚೂರು ಸಂಪರ್ಕಿಸಿರುವ ರೇಲ್ವೆ ಕಾಮಗಾರಿ ತೀವ್ರಗತಿಯಲ್ಲಿ ಸಾಗಲು ಇದರಿಂದ ಸಾಧ್ಯವಾಗಲಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

ಗದಗ-ವಾಡಿ ಮಾರ್ಗದ ಯೋಜನೆಗೆ ರೂ.549.45 ಕೋಟಿ ಮತ್ತು ಹೊಸಪೇಟೆ-ಹುಬ್ಬಳ್ಳಿ-ಲೊಂಡಾ-ತಿನೈಘಾಟ-ವಾಸ್ಕೋ ಡಿ ಗಾಮಾ ರೇಲ್ವೆ ಮಾರ್ಗದ ಯೋಜನೆಗೆ ರೂ.413.73 ಕೋಟಿ ಅನುದಾನ ನೀಡಿರುವ ಬಗ್ಗೆ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಅಶೋಕಸ್ವಾಮಿ ಹೇರೂರ ಸಂತೋಷ ವ್ಯಕ್ತಪಡಿಸಿದ್ದಾರೆ.

About Mallikarjun

Check Also

ತಿಂಗಳುಗಳು ಕಳೆಯುತ್ತಾ ಬಂದರೂ ಸಂಘಟನೆಯವರ ದೂರಿಗೆ ಸ್ಪಂದಿಸದ ಗಂಗಾವತಿ ನಗರಸಭೆಯ ಪೌರಾಯುಕ್ತರು.

The Gangavathi Municipal Commissioner has not responded to the organization’s complaint even after months have …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.