Petition for cancellation of fake Kayaka Mitra Building Workers Union

ನವಲಿ : ಸ್ಥಳಿಯವಾಗಿ ಇತಿಚಿಗೆ ಹಮಾಲರೇಲ್ಲರೂ ಸೇರಿ ರಚಿಸಿಕೊಂಡಿದ್ದ ಕಾಯಕ ಮಿತ್ರ ಕಟ್ಟಡ ಮತ್ತು ಇತರೆ ನಿಮಾರ್ಣ ಕೂಲಿ ಕಾರ್ಮಿಕರ ಸಂಘ ನೋಂದಣಿ ಸಂಖ್ಯೆ ಪಿ-61001857 ಸಂಘವು ನಕಲಿಯಾಗಿದ್ದು ಇದನ್ನು ರದ್ದುಪಡಿಸುವಂತೆ ಸಹಾಯಕ ಕಾರ್ಮಿಕ ಆಯುಕ್ತರು ಕಲಬುರಗಿ ವಿಭಾಗದ ಅಧಿಕಾರಿಗಳಾದ ಮೊಹಮ್ಮದ್ ಅನ್ಸಾರಿ ರವರು ಕೊಪ್ಪಳಕ್ಕೆ ಆಗಮಿಸಿದ್ದ ಸಂದರ್ಬದಲ್ಲಿ

ಹಮಾಲರ ಸಂಘದ ಅಧ್ಯಕ್ಷರಾದ ಮುದಿಯಪ್ಪ ಕುದರಿ ಕುಣಸರ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಹೊನ್ನುಸಾಬ ವಾಲೆಕಾರ ನವಲಿ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಹಮಾಲರ ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನುಸಾಬ ವಾಲೆಕಾರ ನವಲಿ ಹೊಬಳಿ ವ್ಯಾಪ್ತಿಯಲ್ಲಿ ರಚನೆಯಾದ ಕಾಯಕ ಮಿತ್ರ ಕಟ್ಟಡ ಮತ್ತು ಇತರೆ ನಿಮಾರ್ಣ ಕೂಲಿ ಕಾರ್ಮಿಕರ ಸಂಘವು ನಕಲಿಯಾಗಿದ್ದು ಇದನ್ನು ಸರಕಾರದ ಅನುದಾನ ಪಡೆಯುವ ಸಲುವಾಗಿ ಸ್ವತಃ ನಾವೇ ಹಮಾಲರೇಲ್ಲರು ಸೇರಿ ಕಟ್ಟಡ ಕಾರ್ಮಿಕ ಸಂಘವನ್ನು ರಚಿಸಿಕೊಂಡಿರುತ್ತೇವೆ, ಅದರಲ್ಲಿ ಇರುವರ ಪದಾದೀಕಾರಿಗಳೆಲ್ಲಾ ಹಮಾಲರು ಆಗಿದ್ದು ಜೋತೆಗೆ ಹಮಾಲರ ಸಂಘದ ಪದಾಧಿಕಾರಿಗಳು ಆಗಿರುತ್ತಾರೆ, ಇದರಿಂದ ನಮಗೆ ಮುಂದೆ ಯಾವುದೇ ತೊಂದರೆಯಾಗ ಬಾರದು ಎಂಬ ದೃಷ್ಠಿಯಿಂದ ನಾವೇ ತಪ್ಪೋಪ್ಪಿಕೊಂಡು ಕಾಯಕ ಮಿತ್ರ ಕಟ್ಟಡ ಮತ್ತು ಇತರೆ ನಿಮಾರ್ಣ ಕೂಲಿ ಕಾರ್ಮಿಕರ ಸಂಘದ ರದ್ದತಿಗೆ ಎಲ್ಲಾ ಸದಸ್ಯರು ಸಭೆ ಸೇರಿ ನಿರ್ಣಯಿಸಿ ಇಂದು ಸಹಾಯಕ ಕಾರ್ಮಿಕ ಆಯುಕ್ತರು ಕಲಬುರಗಿ ವಿಭಾಗದ ಅಧಿಕಾರಿಗಳಿಗೆ ಹಾಗೂ ಕೊಪ್ಪಳ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಂಬಂದ ಪಟ್ಟ ನೋಂದವಣಿ ಎಲ್ಲಾ ದಾಖಲೆಗಳನ್ನು ಮರಳಿಸಿದ್ದೇವೆ, ರಾಜ್ಯದಲ್ಲಿ ಇಂತ ಅನೇಕ ನಕಲಿ ಕಟ್ಟಡ ಕಾರ್ಮಿಕರ ಸಂಘಗಳು ಇರಬಹುದಾಗಿದ್ದು ಸರಕಾರವು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡಿದ್ದಲ್ಲಿ ನೀಜವಾದ ಫಲಾನುಭವಿಗಳಿಗೆ ಸಹಾಯಕವಾಗಲಿದೆ ಮತ್ತು ನವಲಿ ಹೊಬಳಿ ವ್ಯಾಪ್ತಿಯಲ್ಲಿ ಭಾರತ ಮಾತ ಕಟ್ಟಡ ಕಾರ್ಮಿಕರ ಸಂಘವೊಂದೆ ನೈಜ ಕಟ್ಟಡ ಕಾರ್ಮಿಕರ ಸಂಘವಾಗಿದೆ ಎಂದರು,