Breaking News

ಶಾಸಕ ಕೆ.ನೇಮಿರಾಜ್ ನಾಯ್ಕ ಅವರಿಂದ ಕೊಟ್ಟೂರು-ಕೂಡ್ಲಿಗಿ ರಸ್ತೆ ಕಾಮಗಾರಿ ಭೂಮಿ ಪೂಜೆ ಚಾಲನೆ

MLA K.Nemiraj Nayka started Kottur-Koodligi road work for Bhoomi Puja

ಜಾಹೀರಾತು



ಕೊಟ್ಟೂರು: ಕೊಟ್ಟೂರುನಿಂದ ಕೂಡ್ಲಿಗಿಗೆ ಸಂಪರ್ಕ ನೀಡುವ ಹೆದ್ದಾರಿ ತಗ್ಗು ಗುಂಡಿಗಳಾಗಿ ರಸ್ತೆಗಳಾಗಿದ್ದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಇದನ್ನು ಮನಗಂಡು ಸಾರ್ವಜನಿಕರ ಮನವಿಯ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಹಗರಿಬೊಮ್ಮನಹಳ್ಳಿ ಶಾಸಕರಾದ ಕೆ.ನೇಮಿರಾಜ್ ನಾಯ್ಕ ರವರ ಇಚ್ಛಾಶಕ್ತಿ ಮತ್ತು ಕ್ರಿಯಾಶೀಲತೆಯ ಪರಿಣಾಮವಾಗಿ ಕೊಟ್ಟೂರು-ಕೂಡ್ಲಿಗಿ ಸಂಪರ್ಕಿಸುವ ರಸ್ತೆಯನ್ನು ಪಟ್ಟಣದ ಅಗ್ನಿಶಾಮಕ ಕಛೇರಿಯ ಮುಂಭಾಗದಲ್ಲಿ ಭೂಮಿಪೂಜೆಯನ್ನು  ಲೋಕೋಪಯೋಗಿ ಇಲಾಖೆಯಿಂದ ೨೦೨೩-೨೪ನೇ ಸಾಲಿನ ಸಿ.ಆರ್.ಎಫ್-ಕೆ.ಎನ್.ಸಿ. ಯೋಜನೆ ಅಡಿಯಲ್ಲಿ ಬುಧವಾರದಂದು ಭೂಮಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಹಗರಿಬೊಮ್ಮನಹಳ್ಳಿ ಶಾಸಕರು ಕೊಟ್ಟೂರು-ಗಜಾಪುರ ಸಂಪರ್ಕಿಸುವ ರಸ್ತೆ ನವೀಕರಣವನ್ನು ಸುಮಾರು ೪.೮೫ ಕೋಟಿ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಹಾಗೆ ಕೊಟ್ಟೂರು ತಾಲೂಕಿನ ಸಂಪರ್ಕಿಸುವ ವಿವಿಧ ರಸ್ತೆಗಳನ್ನು ಈಗಾಗಲೇ ಇಟಗಿ ರಸ್ತೆಯು ೧೦ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದ್ದು ಹಾಗೆಯೇ ಹರಾಳು ಕ್ರಾಸ್‌ನಿಂದ ಕೊಟ್ಟೂರಿನವರೆಗೂ ೫.೦೦ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಎಪಿಎಂಸಿ ರಸ್ತೆಯಿಂದ ಕೊಟ್ಟೂರು ಗಡಿಭಾಗವಾದ ಹಗರಿ ಗಜಾಪುರವರಿಗೂ ಮೂರು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದರು.
ದೂಪದಹಳ್ಳಿ, ಮೋತಿಕಲ್ ತಾಂಡ, ಸಂಗಮೇಶ್ವರ, ಕುಡುತಿನ ಮಗ್ಗಿ, ರಸ್ತೆಗಳು ಶೀಘ್ರದಲ್ಲೇ  ಪ್ರಾರಂಭವಾಗುತ್ತದೆ. ಹಾಗೆ ಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ೫೦ ಲಕ್ಷ ಅನುದಾನವನ್ನು ನೀಡಲಾಗುತ್ತದೆ. ನನ್ನ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡುವುದೇ ನನ್ನ ಧ್ಯೇಯ ಎಂದು ಹೇಳಿದರು.
ಕ್ಷೇತ್ರನಾಥ ಶ್ರೀಗುರುಬಸವೇಶ್ವರ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಿವಿಧ ಕಡೆಯಲ್ಲಿ ಶೌಚಾಲಯ ನಿರ್ಮಿಸಲು ಹಾಗೂ ಮಾರ್ಚ್‌ನಲ್ಲಿ ಅನುದಾನ ತಂದು ಕ್ರೀಡಾಂಗಣ ಅಭಿವೃದ್ಧಿ ಪಡಿಸಲಾಗುವುದು. ಕೊಟ್ಟೂರಿನಲ್ಲಿ ಹೊಸದಾಗಿ ಕೋರ್ಟ್ ಕಟ್ಟಡ ಪ್ರಾರಂಭಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು. ಲೋಕೋಪಯೋಗಿ ಸಚಿವರು ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿರುವುದು ಗಮನಾರ್ಹ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರು ಹಾಗೂ ಉಜ್ಜಯಿನಿ ಪೀಠದ ಕಾರ್ಯದರ್ಶಿಗಳಾದ  ಎಂ.ಎಂ.ಜೆ.  ಹರ್ಷವರ್ಧನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮೊರಬ ಕೊಟ್ರೇಶ್, ಮುಖಂಡರ ತಿಮ್ಲಾಪುರದ ಕೊಟ್ರೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬೂದಿ ಶಿವಕುಮಾರ್, ಬಿ.ಎಸ್.ಆರ್. ಮೂಗಣ್ಣ, ಅಲಬೂರು ಹೇಮಣ್ಣ , ಇನ್ನು ಅನೇಕ ಪ್ರಮುಖ ಮುಖಂಡರು ಉಪಸಿತರಿದ್ದರು.

About Mallikarjun

Check Also

ದೆಹಲಿಗಣರಾಜ್ಯೋತ್ಸವ ಸ್ತಬ್ಧಚಿತ್ರ:ನೆರೆದಜನಸ್ತೋಮದಮನಸೂರೆಗೊಂಡಸ್ತಬ್ಧಚಿತ್ರಪೂರ್ವಾಭ್ಯಾಸದಲ್ಲಿಅತ್ಯಾಕರ್ಷಕವಾಗಿಮೂಡಿಬಂದ ಸ್ತಬ್ಧಚಿತ್ರ : ರಾಜ್ಯದ ಸ್ತಬ್ಧಚಿತ್ರಕ್ಕೆಪ್ರಶಸ್ತಿಲಭಿಸುವವಿಶ್ವಾಸಆಯುಕ್ತ ಹೇಮಂತ ನಿಂಬಾಳ್ಕರ್

Delhi Republic Day Stills: Enthusiastic stills from the crowd Exciting stills at rehearsals: Confident of …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.