Breaking News

ಸಾರ್ವಜನಿಕರ ಸಹಕಾರವು ಬಹಳ ಮುಖ್ಯ :ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ “

Public cooperation is very important: DySP Malleshappa Mallapur.

ಜಾಹೀರಾತು
IMG 20241128 WA0189 1024x450

ಜನ ಸಂಪರ್ಕ ಸಭೆಯಲ್ಲಿ  ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವ ಕೆಲವರನ್ನು ಗಡಿಪಾರು ಮಾಡಲು ಕ್ರಮವಹಿಸಲಾಗಿದೆ:ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ

ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಹೇಳಿಕೆ ಅಪರಾಧ ತಡೆಗೆ ಸಿಸಿ ಕ್ಯಾಮರ ಅಳವಡಿಸಿ, ಅಕ್ರಮ ದಂಧೆಗಳಿಗೆ ಕಡಿವಾಣ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದು ಹೇಳಿದರು “

IMG 20241128 WA0190

ಕೊಟ್ಟೂರು: ಪಟ್ಟಣದ ಪೋಲೀಸ್ ಠಾಣೆ ಆವರಣದಲ್ಲಿಬುಧವಾರ ರಂದು ಪೋಲೀಸ್ ಇಲಾಖೆಯು ಜನ ಸಂಪರ್ಕ ಸಭೆಯನ್ನು  ಏರ್ಪಡಿಸಿದ ಹಿನ್ನೆಲೆಯಲ್ಲಿ ಸಭೆ ಉದ್ದೇಶಿಸಿ ಕುಂದು ಕೊರತೆಗಳ  ಆಲಸಿ ಕೂಡ್ಲಿಗಿ ವಿಭಾಗ ಡಿವೈಎಸ್ಪಿ ಅವರ ನೇತೃತ್ವದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು ಕೊಟುರೇಶ್ವರ ಕಾಲೇಜ್ ,ಜ್ಯೂನಿಯರ್ ಕಾಲೇಜ್‌ನಲ್ಲಿ ಈಗಾಗಲೆ ಸಿಸಿ ಟಿವಿ ಅಳವಡಿಸಿದ್ದಾರೆ. ಪಟ್ಟಣದಲ್ಲಿ ಸಿಸಿ ಟಿವಿ ಅಳವಡಿಕೆಗೆ ಪಪಂ ಮುಂದಾಗಬೇಕು. ಕಳ್ಳತನ ಹಾಗೂ ಇತರೆ ಅಪರಾದಗಳನ್ನು ತಡಿಯಲು ಅನುಕೂಲವಾಗುತ್ತೆ. ಇನ್ಸ್ಪೆಟ್ , ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ದಂಧೆ,ಮಟ್ಕಾ, ಜೂಜಾಟ ಕ್ಯಾನ್ಸರ್  ಗಡ್ಡೆ ಇದ್ದಂತೆ  ಇದನ್ನು ತಡೆಯುವಲ್ಲಿ ಇಲಾಖೆ ಅನೇಕ ಕ್ರಮ ಕೈಗೊಂಡಿದೆ. ಕೆಲವರನ್ನು ಗಡಿಪಾರು ಮಾಡಲು ಕ್ರಮವಹಿಸಲಾಗಿದೆ. ಎಂದರು.

ಸಿಪಿಐ ವೆಂಕಟಸ್ವಾಮಿ ಮಾತನಾಡಿ, ಕೊಟ್ಟೂರು ಪಟ್ಟಣ ವೇಗವಾಗಿ ಬೆಳೆಯುತ್ತಿರುವುದರಿಂದ ಪಟ್ಟಣದ ವ್ಯಾಪಾರಿಗಳು ಸುರಕ್ಷತೆ ಹಿತ ದೃಷ್ಟಿಯಿಂದ ಅಂಗಡಿ ಮಾಲೀಕರು ಹಾಗೂ ಜನಸಂದಣಿ ಇರುವ ಜಾಗದಲ್ಲಿ ಸಿ.ಸಿ ಕ್ಯಾಮರ ಅಳವಡಿಕೆಗೆ ಮುಂದಾಗಬೇಕೆಂದರು.

ಮುಖಂಡರಾದ ಬದ್ದಿ ಮರಿಸ್ವಾಮಿ ಮಾತನಾಡಿ, ಯುವಕರು ವೇಗವಾಗಿ ಗಾಡಿಗಳನ್ನು ಓಡಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಇಂತಹ ಯವಕರ ನಿಯಂತ್ರಣಕ್ಕೆ ಮುಂದಾಗ ಬೇಕೆಂದರು. ರೈತ ಸಂಘದ ಭರಮ್ಮಣ್ಣ ಹಾಗೂ ಜಯ
ಪ್ರಕಾಶ ನಾಯ್ಕ ಅವರು ಮಾತನಾಡಿ ಹಲವು ಬಾರಿ ಪೊಲೀಸ್ ಠಾಣೆಗೆ ಟ್ರಾಫಿಕ್ ಬಗ್ಗೆ ನಾನೇ ದೂರವಾಣಿ ಮೂಲಕ ತಿಳಿಸಿರುವೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬೆಳಿಗ್ಗೆ ಸಂಜೆ ಸಮಯದಲ್ಲಿ ಅತಿ ಹೆಚ್ಚು ಜನಸಂದಣಿ ವಾಹನ ಸಂಚಾರದಿಂದ ಟ್ರಾಫಿಕ್ ಆಗುವುದರಿಂದ ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು

ಉಜ್ಜಿನಿ ರುದ್ರಪ್ಪ ಮಾತನಾಡಿ, ಪಿಎಸ್‌ಐ ಶಿಂಧೆ ಅವರಿಂದ ತಾಲೂಕಿನ ಹಳ್ಳಿಗಳಲ್ಲಿ ಗಲಾಬೆ  ನಿಯಂತ್ರಿಸಬೇಕು.ಕೆ ಕೊಟ್ರೇಶ್ ಮಾತನಾಡಿ ಇನ್ಸ್ಪೆಟ್ , ಅಕ್ರಮ ಮದ್ಯ ಮಾರಾಟ, ಅಕ್ರಮ ಮರಳು ದಂಧೆ,ಮಟ್ಕಾ, ಜೂಜಾಟ ಕಡಿವಾಣ ಹಾಕಬೇಕು ಮತ್ತು ಸ್ಲಂ ವಾರ್ಡ್ ಗಳಲ್ಲಿ ಕಾನೂನು ಅರಿವು ಬಗ್ಗೆ ಮೂಡಿಸಬೇಕು ಎಂದರು

ಕಾಂಗ್ರೇಸ್ ಮುಖಂಡ ಅಡಕೆ ಮಂಜುನಾಥ ಅವರು ಮಾತನಾಡಿ ಪಿ.ಎಸ್.ಐ ಗೀತಾಂಜಿಲಿ ಶಿಂಧೆ ಪಟ್ಟಣದ ಮುಖ್ಯ ರಸ್ತೆ ಮೇನ್ ಬಜಾರ್ ಪಾರ್ಕಿಂಗ್ ನಿಯಮ ಅಳವಡಿಸಿ ಟ್ರಾಫಿಕ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಎಂದರು ಹಾಗೂ ಇತರೆ ಮುಖಂಡ ಬದ್ದಿ ದುರುಗೇಶ್,  ಬಸವರಾಜ್ ಸಭೆಯಲ್ಲಿ ಮಾತನಾಡಿದರು. ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.

ಪಿಎಸ್‌ಐ ಗೀತಾಂಜಲಿ ಶಿಂಧೆ ನಿರ್ವಹಿಸಿದರು ಏರಿಸ್ವಾಮಿ ,ಕಲ್ಲೇಶ್, ಶಿವಪ್ರಕಾಶ್ ಪೊಲೀಸ್ ಸಿಬ್ಬಂದಿ ಇದ್ದರು .

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.