Constitution Day celebration on the banks of Gaddi Amrita Sarovar

ಗಂಗಾವತಿ: ತಾಲೂಕಿನ ವೆಂಕಟಗಿರಿ ಗ್ರಾಪಂ ವ್ಯಾಪ್ತಿಯ ಗಡ್ಡಿ ಅಮೃತ ಸರೋವರ ಬಳಿ ಸಂವಿಧಾನ ದಿನ ಅಂಗವಾಗಿ ಕೂಲಿಕಾರರಿಂದ ಸಂವಿಧಾನ ಪೀಠಿಕೆ ಓದಿಸಲಾಯಿತು.
ಇದಕ್ಕೂ ಮುನ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ನಂತರ ಗ್ರಾಪಂ ಕಾರ್ಯದರ್ಶಿಗಳಾದ ಪ್ರಭುರಾಜ ಮಾಲಿಪಾಟೀಲ್ ಅವರು ಸಂವಿಧಾನ ದಿವಸ್ ಆಚರಣೆ ಮಹತ್ವ ಕುರಿತು ಕೂಲಿಕಾರರಿಗೆ ಮಾಹಿತಿ ನೀಡಿದರು.
ವೆಂಕಟಗಿರಿ ಗ್ರಾ.ಪಂ. ಅಧ್ಯಕ್ಷರಾದ ಅಕ್ಕಮ್ಮ ಪರಸಪ್ಪ ಕಂದಕೂರ, ಗ್ರಾಪಂ ಉಪಾಧ್ಯಕ್ಷರಾದ ಹುಲಿಗೆಮ್ಮ ತಿರುಪತೆಪ್ಪ, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸದಸ್ಯರಾದ ರಾಘವೇಂದ್ರ, ಗ್ರಾಪಂ ಸಿಬ್ಬಂದಿಗಳು, ಬಿಎಫ್ ಟಿ, GKM, ಕಾಯಕಬಂಧುಗಳು, ಕೂಲಿಕಾರರು ಇದ್ದರು.