Breaking News

ರಾಯರಡ್ಡಿಯವರು ದ್ವೇಷದರಾಜಕಾರಣಿಯಲ್ಲಾ ತಾಲೂಕ ಅಭಿವೃದ್ದಿ ರಾಜಕಾರಣಿ : ನವಲಿ ಹಿರೇಮಠ ಹೇಳಿಕೆ,,

Rayardi is a politician of hate and a taluk development politician: Navali Hiremath statement.

ಜಾಹೀರಾತು
ಜಾಹೀರಾತು

ಗೂಂಡಾ ವರ್ತನೆ ಮಾಡುವ ಪ್ರವೃತ್ತಿ ರಾಯರಡ್ಡಿಯವರಿಗಾಗಲಿ ನಮಗಾಗಲಿ ಇಲ್ಲಾ : ನವಲಿ ಹಿರೇಮಠ,

ವರದಿ : ಪಂಚಯ್ಯ ಹಿರೇಮಠ.

ಕೊಪ್ಪಳ : ವಜ್ರಬಂಡಿಯಲ್ಲಿ ನಡೆಸುತ್ತಿರುವ ಶ್ರೇಯಾ ಕ್ರಷರ್ ಗಣಿಗಾರಿಕೆಗೂ ನಮಗೂ ರಾಯರಡ್ಡಿಯವರಿಗೂ
ಯಾವುದೇ ಸಂಬಂಧವಿಲ್ಲಾ ಆದರೆ
ಶಿವಶರಣಪ್ಪ ಗೌಡರು ಯಾರದೋ ಮಾತಿನಿಂದ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಾದ ಬೆಳವಣಿಗೆ ಅಲ್ಲಾ ಎಂದು ಮುಖಂಡ ಎಸ್. ಆರ್
ನವಲಿ ಹಿರೇಮಠ ತಿರುಗೇಟು ನೀಡಿದರು.

ಅವರು ಕುಕನೂರು ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಶನಿವಾರದಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೆಯಾ ಕ್ರಷರ್ ನವರು ವಜ್ರಬಂಡಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ, ಸಿಡಿ ಮದ್ದು ಬಳಸಿ ಸ್ಪೋಟಕ ಮಾಡಿದ್ಥರಿಂದ ಸಮೀಪದ ಮನೆಗಳ ವ್ಯಕ್ತಿಗಳು, ಗ್ರಾಮದವರು ವಿವಿಧ ಸಂಘಟನೆಯವರು ಆವರ ವಿರುದ್ದ ದ್ವನಿ ಎತ್ತಿ ಅಕ್ರಮ ಗಣಿಗಾರಿಕೆ ಕ್ರಷರ್ ಮಷೀನ್ ಗಳನ್ನು ಬಂದ್ ಮಾಡಿಸಿದರೇ ವಿನಃ ಇದರಲ್ಲಿ ನಮ್ಮ ಹಾಗೂ ರಾಯರಡ್ಡಿಯವರ ಪಾತ್ರ ಏನು ಇಲ್ಲಾ ಎಂದು ಸ್ಪಷ್ಟವಾಗಿ ಹೇಳಿದರು.

ನಾವು ಕಷ್ಟದಿಂದ ಮೇಲೆ ಬಂದವರು, ನಾನು ಹಲವಾರು ವರ್ಷಗಳಿಂದ ಜಿಲ್ಲಾದ್ಯಂತ ಗುತ್ತಿಗೆ ಕೆಲಸಗಳಿಂದ ಮೇಲೆ ಬಂದವರೇ ಹೊರತು, ಬೆನಾಮಿಯಾಗಿ ಗಳಿಕೆ ಮಾಡಿದವರಲ್ಲಾ ಎಂದು ಅವರು
ಹೇಳಿದರು.

ಶರಣಪ್ಪಗೌಡರೇ ನೀವು ಸಹ ಇದೇ ತಾಲೂಕಿನವರಾಗಿದ್ದು, ನೀವು ಸಾಕಷ್ಟು ಆಸ್ತಿಯನ್ನ ಸಂಪಾದಿಸಿದ್ದೀರಿ ನಾನು ಸಹ ನಿಮ್ಮ ಬಗ್ಗೆ ಬಲ್ಲೆ. ನಿಮ್ಮ ಆಸ್ತಿಯು ಬೇನಾಮಿ ಆಸ್ತಿಯೇ ಎಂದು ಪ್ರಶ್ನೀಸಿದ ಅವರು ಒಬ್ಬರ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ತಿಳಿದು ಮಾತನಾಡಿ ಎಂದು ಎಚ್ಚರಿಸಿದರು.

ರಾಯರಡ್ಡಿಯವರು ಇಂತಹ ಸಣ್ಣತನ ತೋರುವ ವ್ಯಕ್ತಿಯಲ್ಲಾ, ಸುಖಾ ಸುಮ್ಮನೆ ಯಾರದೋ ಮಾತಿನ ಮೇಲೆ ಇನ್ನೋಬ್ಬರಿಗೆ ಮಾತನಾಡುವಾಗ ತಿಳಿದು ಮಾತನಾಡಬೇಕು ಎಂದರು.

ರಾಯರಡ್ಡಿಯವರು ಸಚಿವರಾಗಿ ಶಾಸಕರಾಗಿ, ಯಲಬುರ್ಗಾ ತಾಲೂಕಿಗೆ ಮಾಡಿದಷ್ಟು ಅಭಿವೃದ್ದಿಯನ್ನು ಯಾವ ಶಾಸಕರು ಮಾಡಿಲ್ಲಾ ಇದನ್ನು ಸ್ವತಃ ಸಿಎಂ ಅವರೇ ಹೇಳಿದ್ದರು. ಆದರೆ ಅವರ ಅಭಿವೃದ್ದಿಯ ಕಾರ್ಯಗಳನ್ನು ಸಹಿಸದ ಕೇಲವರು ಏನು ಬೇಕಿದ್ದರು ಹೇಳುತ್ತಾರೆ ಅದಕ್ಕೆ ರಾಯರಡ್ಡಿಯವರಾಗಲಿ ನಾನಾಗಲಿ ತಲೆ ಕೆಡಿಸಿಕೊಳ್ಳುವುದಿಲ್ಲಾ ಎಂದರು.

ವಿಂಡ್ ಫ್ಯಾನ್ ಗೆ ಅರವಿಂದಗೌಡರು ಹಾಗೂ ನಾವು ಕ್ರಷರ್ ಮೂಲಕ ಕಡಿಗಳನ್ನು ಸರಬರಾಜು ಮಾಡುತ್ತಿದ್ದು, ಕಂಪನಿಯವರು ಯಾರ ಹತ್ತಿರವಾದರೀ ಖರೀದಿಸಲಿ ನಾವು ಯಾವತ್ತು ಕಂಪನಿಗಳ ಮೇಲೆ ರಾಜಕೀಯ ನಡೆಸಿಲ್ಲಾ,ಮತ್ತು ಒತ್ತಡವನ್ನು ತಂದಿಲ್ಲಾ ಬೇಕಿದ್ದರೇ ಹೋಗಿ ಕಂಪನಿಯವರನ್ನು ಪ್ರಶ್ನೀಸಿ ಎಂದು ಹೇಳಿದರು.

ನಮ್ಮ ವಾಹನಗಳ ಮೂಲಕ ವಿಂಡ್ ಕಂಪನಿಗಳಿಗೆ ಕಡಿಗಳನ್ನು ಸರಬರಾಜು ಮಾಡುವ ಸಂದರ್ಭದಲ್ಲಿ ಶ್ರೇಯಾ ಕ್ರಷರ್ ನ ಮಾಲಕ ಅರವಿಂದ ಗೌಡರೇ ನಮ್ಮ ವಾಹನ ನಿಲ್ಲಿಸಿದ ಉದಾಹರಣೆ ಇದೆ.
ನಾವು ಯಾರ ಜೊತೆಗೂ ಪೈಪೋಟಿ ಮಾಡಿ ಉದ್ಯೋಗಕ್ಕೆ ನಿಂತವರಲ್ಲಾ ಎಂದು ಹೇಳಿದರು.

ರಾಯರಡ್ಡಿಯವರು ತಾಲೂಕಿನ ಅಭಿವೃದ್ದಿ ಜೊತೆಗೆ ಸಾರ್ವಜನಿಕ ವಲಯದಲ್ಲಿ ಗಾಂಭಿರ್ಯತೆಯನ್ನು ಹೊಂದಿದವರು, ಅಂತವರು ಯಾವತ್ತು ಇಂತಹ ಸಣ್ಣತನದ ಕೆಲಸಕ್ಕೆ ಕೈ ಹಾಕುವುದಿಲ್ಲಾ ಎಂದರು.

ಶರಣಪ್ಪಗೌಡರೇ ನಿಮ್ಮ ಹತ್ತಿರ ಶಾಸಕರ ರಾಯರಡ್ಡಿಯವರ ಹಾಗೂ ನಮ್ಮ ಬಗ್ಗೆ ದಾಖಲೆಗಳಿವೆ ಎಂದಿದ್ದಿರಲ್ಲಾ ಅವುಗಳನ್ನು ಬಹಿರಂಗ ಪಡಿಸುವ ಮೂಲಕ ಪ್ರೇಸ್ ಮಿಟ್ ಮಾಡಬಹುದಿತ್ತಲ್ಲಾ, ಅಲ್ಲಿವೇ ಇಲ್ಲಿವೇ ನಾಳೆ ಬಿಡುಗಡೆಗೊಳಿಸಿ ಮಾತನಾಡುತ್ತೇನೆ ಎಂದು ಹೇಳುವುದು ನಿಮ್ಮ ಹಿರಿತನಕ್ಕೆ ದಕ್ಕೆ ಮಾತುಗಳಾಗಿವೆ ಎಂದರು.

ಈ ಸಂದರ್ಭದಲ್ಲಿ ಶರಣಪ್ಪ ಗಾಂಜಿ, ಸಂಗಪ್ಪ ಗುತ್ತಿ, ರಾಘವೇಂದ್ರ ಕಾತರಕಿ ಇನ್ನಿತರರು ಇದ್ದರು.

About Mallikarjun

Check Also

ತಿಂಗಳುಗಳು ಕಳೆಯುತ್ತಾ ಬಂದರೂ ಸಂಘಟನೆಯವರ ದೂರಿಗೆ ಸ್ಪಂದಿಸದ ಗಂಗಾವತಿ ನಗರಸಭೆಯ ಪೌರಾಯುಕ್ತರು.

The Gangavathi Municipal Commissioner has not responded to the organization’s complaint even after months have …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.