Breaking News

ಅಂತಾರಾಜ್ಯ ಕಳ್ಳರು ಮಾದಪ್ಪನಸನ್ನೀದಿಯಲ್ಲಿ ಪತ್ತೆ ಮಾಡಲಾಗಿದೆ

Interstate thieves have been detected in Sannidhi, Madappa.

ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಹನೂರು : ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ
ಮಲೆ ಮಹದೇಶ್ವರ ಬೆಟ್ಟದಲ್ಲಿ‌ ಅಂತಾರಾಜ್ಯ ಕಳ್ಳರನ್ನು ಪತ್ತೆ ಹಚ್ಚಿದ್ದು , ಒಟ್ಟು 14 ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ‌.
ಇವರೆಲ್ಲರು
ತಮಿಳುನಾಡು ಮೂಲದ ಕೊಡಂಗು ಸ್ವಾಮಿ (58) ಇಂದಿರರಾಜ್ @ ಇಂದ್ರರಾಜ್ (35) ಕೇರಳ ಮೂಲದ ಅಜಿತ್ (23)ಜೇಸುದಾಸ್ @ ಯೇಸುದಾಸ್ (39) ಬಂಧಿತರು‌ ಎನ್ನಲಾಗಿದೆ .

ಹನೂರು ಪಟ್ಠಣದ
ಒಂದು ಕೇಸ್​ನಿಂದ 14 ಕೇಸ್ ಬೆಳಕಿಗೆ : ಹನೂರಿನ ಆಶ್ರಯ ಬಡಾವಣೆ ನಿವಾಸಿ ಸಾಬೀರ್ ಅಹಮದ್ ಮನೆಯಲ್ಲಿ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಪ್ರಕರಣದ ಬೆನ್ನಟ್ಟಿದ ಪೊಲೀಸರು ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲು ಖದೀಮರ ಗ್ಯಾಂಗ್ ಇರುವ ಮಾಹಿತಿ ಅರಿತು ಬಂಧಿಸಿದ್ದಾರೆ.

ವಿಚಾರಣೆಗೆ ಒಳಪಡಿಸಲಾಗಿ ಹನೂರು, ದೊಡ್ಡಿಂದುವಾಡಿ, ಗುಂಡೇಗಾಲ, ಕೊಳ್ಳೇಗಾಲ ಪಟ್ಟಣ, ಚಾಮರಾಜನಗರ ಪಟ್ಟಣ, ಗುಂಡ್ಲುಪೇಟೆ ಮತ್ತು ಬೇಗೂರು ಮತ್ತು ಕೋಲಾರದಲ್ಲಿ ಒಟ್ಟು 14 ಕಡೆ ಕಳ್ಳತನ ಮಾಡಿರುವುದನ್ನು ಬಾಯಿಬಿಟ್ಟಿದ್ದಾರೆ.

ಬಂಧಿತರಿಂದ 41,69,000 ರೂ. ಬೆಲೆ ಬಾಳುವ 514.16 ಗ್ರಾಂ ಚಿನ್ನಾಭರಣಗಳು, ಮೂರು ಕೆಜಿ ಬೆಳ್ಳಿ ಆಭರಣಗಳು, 4,400 ನಗದು ಹಣ, ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ಕಾರು, ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

About Mallikarjun

Check Also

2ನೂತನಅಂಗನವಾಡಿಯನ್ನು ನಗರಸಭೆ ಸದಸ್ಯ ಶ್ರೀ ಮತಿ “ಹುಲಿಗೆಮ್ಮ ಕಿರಿಕಿರಿ” ಇವರಿಂದ ಅಂಗನವಾಡಿ ಕೇಂದ್ರಗಳ ಉದ್ಘಾಟನೆ

2 New Anganwadi Centers Inaugurated by Municipal Council Member Shri Mati “Huligemma Yara” ಕರ್ನಾಟಕ ಸರ್ಕಾರಜಿಲ್ಲಾ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.