Breaking News

ಶ್ರೇಯಾ ಹಾಗೂ ಸಾಯಿ ಸ್ಟೋನ್ ಅಕ್ರಮ ಗಣಿಗಾರಿಕೆ ವಿರುದ್ದ : ಜೆಡಿಎಸ್ ಹಾಗೂ ಕನ್ನಡ ಪರ ಸಂಘಟನೆಯಿಂದ ಅನಿರ್ಧಿಷ್ಟ ಧರಣಿ,,,

Shreya and Sai Stone against illegal mining: Indefinite sit-in by JDS and pro-Kannada organizations

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ : ಪಂಚಯ್ಯ ಹಿರೇಮಠ,

ಕೊಪ್ಪಳ : ವಜ್ರಬಂಡಿ ಗ್ರಾಮದಲ್ಲಿ ಶ್ರೇಯಾ ಹಾಗೂ ಸಾಯಿ ಸ್ಟೋನ್ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ ಅವುಗಳನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಜೆಡಿಎಸ್ ಕೊಪ್ಪಳ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ ಆಗ್ರಹಿಸಿದರು.

ಅವರು ಯಲಬುರ್ಗಾ ಪಟ್ಟಣದ ತಹಶೀಲ್ದಾರ ಕಛೇರಿಯ ಮುಂಬಾಗದಲ್ಲಿ ಜೆಡಿಎಸ್ ಜಿಲ್ಲಾ ಮತ್ತು ತಾಲೂಕ ಘಟಕ ಹಾಗೂ ಪ್ರವೀಣಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು.

ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಈ ಎರಡು ಸ್ಟೋನ್ ಕ್ರಷರ್ ಅಕ್ರಮ ಗಣಿಗಾರಿಕೆಯಿಂದ ಗ್ರಾಮದ ಸುತ್ತ ಮುತ್ತಲಿನ ನಿವಾಸಿಗಳು ಜೀವ ಭಯದಲ್ಲಿ ವಾಸಿಸುವಂತಾಗಿದೆ ಎಂದರು.

ಗ್ರಾಮದ ಹತ್ತಿರದಲ್ಲಿಯೇ ಗಣಿಗಾರಿಕೆ ನಡೆಯುತ್ತಿದ್ದು ಪಾಲಕರು ಮಕ್ಕಳನ್ನುಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ ಎಂದರು.

ನಂತರದಲ್ಲಿ ವಕೀಲರಾದ ಪ್ರಕಾಶ ಮೇಲಸಕ್ರಿ ಮಾತನಾಡಿ ವಜ್ರಬಂಡಿಯ ಹತ್ತಿರದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಅದರಿಂದ ಹರಡುವ ಧೂಳಿನಿಂದ ರೈತರ ಬೆಳೆಗಳು ನಾಶವಾಗುತ್ತಿರುವುದಲ್ಲದೇ, ಮೊನ್ನೆ ನವೆಂಬರ್ 13 ರಂದು ಗಣಿಗಳಲ್ಲಿ ಕಲ್ಲುಗಳನ್ನು ಒಡೆಯಲು ಸ್ಪೋಟಕ ಬಳಸಿದ್ದು ಗಣಿಯಿಂದ ಸುಮಾರು ದೂರದಲ್ಲಿರುವ ಮನೆಗಳ ಮೇಲೆ ಕಲ್ಲು ಹಾರಿ ಬಿದ್ದಿದ್ದು ಅದೃಷ್ಟವಶಾತ್ ಬಾರಿ ಅನಾಹುತ ತಪ್ಪಿದೆ ಎಂದರು.

ಇಲ್ಲಿ ಸುಮಾರು 4ರಿಂದ5 ವರ್ಷದಿಂದ ಗಣಿಗಾರಿಕೆ ನಡೆಯುತ್ತಿದ್ದು, ಈ ಕುರಿತು ಹಲವಾರು ಬಾರಿ ಸಂಬಂಧಿಸಿದ ಇಲಾಖೆಗಳಿಗೆ ಹಾಗೂ ಪೋಲಿಸ್ ಇಲಾಖೆಗಳಿಗೆ ತಿಳಿಸಿದರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲಾ ಎಂದು ಆರೋಪಿದರು.

ಗಣಿ ಮಾಲಕರನ್ನು ಪ್ರಶ್ನೀಸಿದರೇ ಗೂಂಡಾ ವರ್ತನೆ,,,

ನಂತರದಲ್ಲಿ ಪ್ರವೀಣಶೆಟ್ಟಿ ಬಣದ ಕರವೇ ತಾಲೂಕಾಧ್ಯಕ್ಷ ಶಿವಕುಮಾರಗೌಡ್ರ ಮಾತನಾಡಿ ವಜ್ರಬಂಡಿಯಲ್ಲಿ ನಡೆಯುತ್ತಿರುವ ಅನ್ಯಾದ ವಿರುದ್ದ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ, ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಲ್ಲಿರುವ ಗಣಿಗಾರಿಕೆಗಳು ಸಕ್ರಮವಾಗಿದ್ದರೇ ಗ್ರಾಮವನ್ನು ಸ್ಥಳಾಂತರ ಮಾಡುವ ಕೆಲಸವನ್ನು ಮಾಡದೇ, ಕೇವಲ ಬಾಯಿ ಮಾತಿನಿಂದ ಸಕ್ರಮ ಎಂದರೇ ಹೇಗೆ ಎಂದು ಪ್ರಶ್ನೀಸಿದರು.

ಈ ಕುರಿತು ಗಣಿ ಮಾಲಕರಿಗೆ ಕೇಳಲು ಹೋದರೇ ಗೂಂಡಾ ವರ್ತನೆ ತೋರಿಸುತ್ತಾರೆ. ನಾವು ಯಾರ ಗೊಡ್ಡ ಬೆದರಿಕೆಗೂ ಅಂಜುವುದಿಲ್ಲಾ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಇಲ್ಲಿ ನಮಗೆ ನ್ಯಾಯ ಸಿಗದಿದ್ದರೇ ಮುಂದೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತರಾದ ಮಾರುತಿ ಇಳಗೇರ, ಲಕ್ಷ್ಮಣ ವಡ್ಡರ್, ಶರಣಪ್ಪ ಜಂತ್ಲಿ, ಭೀಮಪ್ಪ ವಡ್ಡರ್ ಹಾಗೂ ಕುಕನೂರು ಜೆಡಿಎಸ್ ತಾಲೂಕಾಧ್ಯಕ್ಷ ಕೆಂಚಪ್ಪ ಹಳ್ಳಿ, ಶರಣಪ್ಪ ರಾಂಪೂರ, ಕಲ್ಲಪ್ಪ ಕುರನಾಳ, ಮುತ್ತು ಕುರನಾಳ, ಶ್ರೀಧರ ಸುರಕೋಡ, ಗಣೇಶ ಚನ್ನದಾಸರ, ಕರವೇ ಪದಾಧಿಕಾರಿಗಳಾದ ಆರ್.ಎಕ್ಸ್ ಸೂರಿ ಕೋನಸಾಗರ, ಮಂಜುನಾಥ ನೆರೆಗಲ್ ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *