Kasturi Rangan should not cause trouble to the hill country people, Chandrasekharake. Pallattadka

ಸುಳ್ಯ: ಪಶ್ಚಿಮ ಘಟ್ಟವನ್ನು ಉಳಿಸಬೇಕು ಎನ್ನುವ ವಿಷಯಕ್ಕೆ ಮಲೆನಾಡಿನ ಜನರ ಸಹಮತವಿದೆ. ಆದರೆ ಈ ಉದ್ದೇಶ ಈಡೇರಿಕೆಗಾಗಿ ಮಲೆನಾಡಿನ ಜನರ ಬದುಕಿನ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ.ಕಸ್ತೂರಿರಂಗನ್ ವರದಿ ಹೆಸರಿನಲ್ಲಿ ಮಲೆನಾಡಿನ ಜನರ ಬದುಕನ್ನು ಅತಂತ್ರಗೊಳಿಸಲು ಸರ್ಕಾರಗಳು ಮುಂದಾಗಿದೆ ಇದನ್ನು ನಮ್ಮ ಸಂಘಟನೆ ಪಕ್ಷ,ಜಾತಿ ಮರೆತು ವಿರೋಧಿಸುತ್ತೆವೆ. ಕಸ್ತೂರಿರಂಗನ್ ವರದಿ ಸಿದ್ಧಪಡಿಸುವಾಗ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಮಾಡಿದ ವರದಿಯಾಗಿದೆ. ಈ ವರದಿ ಅನುಷ್ಠಾನಗೊಂಡರೆ ಪರಿಸರ ಸಂರಕ್ಷಣೆ ಅಸಾಧ್ಯ. ಪ್ರಸ್ತುತ ಜಾರಿಯಲ್ಲಿ ಇರುವ ಕಾನೂನುಗಳ ಮೂಲಕವೇ ಅರಣ್ಯ ಸಂರಕ್ಷಣೆ ಮಾಡಬಹುದು. ಪಶ್ಚಿಮ ಘಟ್ಟ ಉಳಿಸಬೇಕು ಎಂಬ ಹೋರಾಟ ಮಾಡಿದವರೇ ಮಲೆನಾಡಿಗರು ಮತ್ತು ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಮೂಲನಿವಾಸಿ ಅರಣ್ಯವಾಸಿಗಳೇ ಹೊರತು ಅಧಿಕಾರಿಗಳು ಅಥವಾ ಯಾವುದೇ ಸರ್ಕಾರಗಳು ಅಲ್ಲ. ಆದುದರಿಂದ ಸರಕಾರ ಸರಿಯಾದ ತೀರ್ಮಾನಕ್ಕೆ ಬಂದು ಮಲೆನಾಡಿಗರಿಗೆ ರಕ್ಷಣೆ ಒದಗಿಕೊಡಬೇಕೆಂದು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ.ಕೆ ಪಲ್ಲತ್ತಡ್ಕ ಈ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿದರು