Breaking News

ಸಾಹಿತಿ ಭದ್ರಾವತಿ ರಾಮಾಚಾರಿ ಸಮ್ಮೇಳನಾಧ್ಯಕ್ಷತೆಯಲ್ಲಿಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನ (11ನೇ ಅವೃತ್ತಿ)

Sahiti Bhadravathi Ramachari presided over the conference All India Kannada Poets Conference (11th Edition)

ಜಾಹೀರಾತು
Badravathi Ramachari



 ಬೆಂಗಳೂರು: ಕನ್ನಡ ಕಾವ್ಯ ಲೋಕದಲ್ಲಿ ಈಗಾಗಲೇ, ಹತ್ತು ಜನ ಹಿರಿಯ ಕವಿಗಳ ಸಮ್ಮೇಳನಾಧ್ಯಕ್ಷತೆಯಲ್ಲಿ “ಅಖಿಲ ಕರ್ನಾಟಕ ಕವಿ ಸಮ್ಮೇಳನ” ನಡೆಯಿಸಿರುವ ಸುರ್ವೆ ಕಲ್ಚರಲ್ ಅಕಾಡೆಮಿ ಮತ್ತು ವಿಶ್ವೇಶ್ವರಯ್ಯ ಪ್ರತಿಷ್ಠಾನಗಳು, ಜಂಟಿಯಾಗಿ ದಿನಾಂಕ 26 (ಗುರುವಾರ) 27 (ಶುಕ್ರವಾರ)-ಡಿಸೆಂಬರ್-2024ರ ಪೂರ್ಣ ಎರಡು ದಿನಗಳ ಕಾಲ, ಬೆಂಗಳೂರು ನಗರದ ನಯನ ರಂಗಮಂದಿರದಲ್ಲಿ ಅಖಿಲ ಭಾರತ ಕನ್ನಡ ಕವಿಗಳ 11ನೇ ಸಮ್ಮೇಳನ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ 71ನೇ ಸಾಂಸ್ಕøತಿಕ ಪ್ರತಿಭೋತ್ಸವ ಹಾಗೂ 10ನೇ ರಾಷ್ಟ್ರೀಯ ನೃತ್ಯ ಕಲಾಮೇಳವನ್ನು ಜಂಟಿಯಾಗಿ ಆಯೋಜಿಸಿ, ಕನ್ನಡದ ಹೆಸರಾಂತ ಲೇಖಕ, ಪ್ರಕಾಶಕ ಮತ್ತು ಚಿತ್ರಕಲಾವಿದ, ವರ್ಣ ಕಲಾವಿದ ಶ್ರೀ ಭದ್ರಾವತಿ ರಾಮಾಚಾರಿ ಯವರನ್ನು, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಅವರ ನೇತೃತ್ವದಲ್ಲಿ ಬಹುಮುಖಿ ಕವಿ ಸಮ್ಮೇಳನ ಆಯೋಜಿಸಿದೆ. ಸಮ್ಮೇಳನದ ವೇದಿಕೆ ಅಂತರಾಷ್ಟ್ರೀಯ ಮಟ್ಟದ್ದಲ್ಲಿದ್ದು, ಅನೇಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಕವಿಗಳು, ನೃತ್ಯ ಕಲಾವಿದರು, ಗಾಯಕರು, ಜನಪದ ಗಾಯಕರು, ಚಿತ್ರ ಕಲಾವಿದರು ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ನಯನ ರಂಗಮಂದಿರದ ಒಳ ಮತ್ತು ಹೊರಾಂಗಣದಲ್ಲಿ, ಪುಸ್ತಕ ಪ್ರಕಾಶಕರಿಂದ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು 2 ದಿನವು ಕಲ್ಪಿಸಲಾಗಿದೆ. ಇದು ಪುಸ್ತಕ ಓದುವ ಸಂಸ್ಕøತಿಗೆ ಪೂರಕವಾಗಿರುತ್ತದೆ.
ಹಿರಿಯ ಲೇಖಕ ಭದ್ರಾವತಿ ರಾಮಾಚರಿ ಈಗಾಗಲೇ ಕಥೆ, ಕಾದಂಬರಿ, ವ್ಯಕ್ತಿ ಚರಿತ್ರೆ ಆಧಾರಿತ, 24ಕ್ಕೂ ಹೆಚ್ಚು ಪ್ರಮುಖ ಕೃತಿಗಳನ್ನು ರಚನೆ ಮಾಡಿದ್ದಾರೆ. ಅವರದೇ ಮಂದಾರ ಪ್ರಕಾಶನದ ಮೂಲಕ, 120ಕ್ಕೂ ಹೆಚ್ಚು ವಿವಿಧ ಪ್ರಾಕಾರದ ಪುಸ್ತಕಗಳನ್ನು ಪ್ರಕಟಿಸಿ, ಹಿರಿಯ ಮತ್ತು ಕಿರಿಯ ಲೇಖಕರನ್ನು ಪ್ರೋತ್ಸಾಹಿಸಿ ಯೂಥ್ ಐಕಾನ್ ಆಗಿದ್ದಾರೆ. ಅವರ ಅನೇಕ ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯದಲ್ಲಿಯೇ ಸಮಗ್ರ ಕವಿತಾ ಸಂಕಲನ ಲೋಕಾರ್ಪಣೆ ಗೊಳ್ಳಲಿದೆ. ಅವರ ಇತ್ತೀಚಿನ ಕೃತಿಗಳು ದಾಖಲೆ ಮಾರಾಟ ಕಂಡಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ಎಸ್.ಪಿ. ಬಾಲಸುಬ್ರಮಣ್ಯಂ, ಪುನೀತರಾಜ್ಕುಮಾರ್, ದೊಡ್ಡರಂಗೇಗೌಡರು ಆತ್ಮ ಚರಿತ್ರೆಗಳು, ತಾಯಿಯನ್ನು ಕುರಿತ ಅಮ್ಮ ಕಾದಂಬರಿಗಳ ಮೂಲಕ, ಕನ್ನಡದ ಪ್ರಮುಖ ಸೂಕ್ಷ ಸಂವೇದಿ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಚಲನಚಿತ್ರ ರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಗ್ರಂಥಾಲಯ ಇಲಾಖೆ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣಾ ಸಂಪಾದಕೀಯ ವಿಭಾಗದ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಪ್ರಸ್ತುತ 11ನೇ ಕವಿಗಳ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಎರಡು ದಿನವು ಕವಿಗಳೊಂದಿಗೆ ಮುಖಾಮುಖಿಯಾಗಲಿದ್ದಾರೆ. ಅವರನ್ನು ಅಭಿನಂದಸಿ (ಭದ್ರಾವತಿ ರಾಮಾಚಾರಿ, ಮೊ : 8861495610)

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.