Acceptance of power in APMC

ಕೊಟ್ಟೂರು.. ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಗೆ ಸರಕಾರದಿಂದ ನಾಮ ನಿರ್ದೇಶಿತರಾದ ಅದ್ಯಕ್ಷ ಉಪಾಧ್ಯಕ್ಷರು ಮತಮ್ತು ನಿರ್ದೇಶಕರು ಬುಧವಾರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ಕಾಂಗ್ರೆಸ್ ಮುಖಂಡರಾದ ಹರಾಳು ಗ್ರಾಮದ ಎ.ನಂಜಪ್ಪ ಅಧ್ಯಕ್ಷರಾಗಿ, ಕೊಟ್ಟೂರಿನ ಎಂ.ಶಿವಣ್ಣ ಉಪಾಧ್ಯಕ್ಷರಾಗಿ ಇತರೆ ೧೫ ನಿರ್ದೇಶಕರೊಂದಿಗೆ ಅಧಿಕಾರ ವಹಿಸಿದರು. ಕಾಂಗ್ರೆಸ್‌ನ ೧೭ ಮುಖಂಡರನ್ನು ಎಪಿಎಂಸಿ ಆಡಳಿತ ಮಂಡಳಿಗೆ ಸರಕಾರ ನಾಮ ನಿರ್ದೇಶನಗೊಳಿಸಿ ಅ.೧೯ರಂದು ಆದೇಶ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಎಲ್ಲ ನಾಮ ನಿರ್ದೇಶಿತರು ಹಾಜರಾಗಿ ಅಧಿಕಾರ ಪಡೆದುಕೊಂಡರು. ಎಪಿಎಂಸಿ ಕಾರ್ಯದರ್ಶಿ ಎಚ್.ಕೆ.ವೀರಣ್ಣ, ಕಾಂಗ್ರೆಸ್‌ನ ಅನೇಕ ಮುಖಂಡರುಗಳು ಹಾಜರಿದ್ದರು.