Breaking News

ವಕ್ಫ್ ಮಂಡಳಿ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಲಿ -ಶರಣಪ್ಪ ದೊಡ್ಡಮನಿ

Let the Waqf Board withdraw the notice given to the farmers – Sharanappa Doddamani.

ಜಾಹೀರಾತು
ಜಾಹೀರಾತು

ಕನಕಗಿರಿ ,ನ-06; ವಕ್ಫ್ ಮಂಡಳಿಯವರು ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಲಿ -ಶರಣಪ್ಪ ದೊಡ್ಡಮನಿ ಆಗ್ರಹ.

ಕೆಲವು ತಿಂಗಳಿಂದ ವಕ್ಫ್ ಮಂಡಳಿಯಿಂದ ರಾಜ್ಯದಂತ ರೈತರಿಗೆ ನೀಡುತ್ತಿರುವ ನೋಟಿಸ್ ಅನ್ನು ಕಂಡು ರೈತರು ಕಂಗಲಾಗಿದ್ದಾರೆ. ನೂರಾರು ವರ್ಷಗಳಿಂದ ಬೇಸಾಯ ಮಾಡಿಕೊಂಡು ಬಂದಂತಹ ರೈತರಿಗೆ ಆತಂಕ ಶುರುವಾಗಿದೆ. ಇದರಿಂದ ಕೊಪ್ಪಳ ಜಿಲ್ಲೆಯ ಹಲವು ತಾಲೂಕುಗಳಲ್ಲಿ ನೋಟಿಸ್ ಕಳಿಸಿದ್ದು ರೈತರಲ್ಲಿ ಆತಂಕಗಳನ್ನು ಸೃಷ್ಟಿ ಮಾಡಿ ಮಾಡಿದಂತಹ ಈ ವಕ್ಫ್ ಮಂಡಳಿಯು ಅವಾಂತರ ಮಾಡಿದೆ. ಇದರಿಂದ ಎಲ್ಲಾ ರೈತರು ತೊಂದರೆಯಾಗಿದ್ದು ಕೂಡಲೇ ಇದನ್ನು ನಿಲ್ಲಿಸಿ ರೈತರ ಪಹಣಿಯಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ಇದನ್ನು ತೆರವು ಗೊಳಿಸಬೇಬೇಕೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಸಂಸ್ಥಾಪಕರು ಹಾಗೂ ರಾಜ್ಯಧ್ಯಕ್ಷರಾದ ಶರಣಪ್ಪ ದೊಡ್ಡಮನಿ ಇವರು ಆಗ್ರಹಿಸಿದರು.
ವಕ್ಫ್ ಬೋರ್ಡ್,ರಾಜ್ಯದಲ್ಲಿ ರೈತರ ಭೂಮಿ ಮತ್ತು ದೇವಸ್ಥಾನ , ಶಾಲೆಗಳು, ಮಠ ಮಂದಿರಗಳ ಆಸ್ತಿಗಳನ್ನು ಕಬಳಿಕೆ ಮಾಡುತ್ತಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರ 1974ರಲ್ಲಿ ಬೋರ್ಡ್ ಸ್ಥಾಪನೆಯಾಗಿದ್ದು, ಅದರ ರದ್ದುಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಕಾರಟಗಿ ನವಲಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ 1995 ರಂದು ಕೇಂದ್ರದಲ್ಲಿ ಹೊರಡಿಸಿದ್ದು 2013ರಲ್ಲಿ ಜಾರಿಗೆ ಬಂದಿರತಕ್ಕಂತ ಸಂದರ್ಭದಲ್ಲಿ ಈ ಕೂಡಲೇ ಬೋರ್ಡ್ ಅನ್ನ ರದ್ದುಪಡಿಸಿ ರೈತರ ಜಮೀನಿನಲ್ಲಿ ಒಕಲೆಬ್ಬಿಸುವುದು ನಿಲ್ಲಿಸಬೇಕೆಂದು ಪ್ರತಿಭಟನೆ ಮಾಡಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಂಘಟನೆಗಳ ಹಕ್ಕುತಾಯಗಳು ಬಗೆಹರಿಸಲು ತಿಳಿಸಿದರು. ರೈತರ ಪಹಣಿಗಳಲ್ಲಿ ಅಕ್ರಮವಾಗಿ ಕಾನೂನು ಬಹಿರವಾಗಿ ವಕ್ಫ್ ಆಸ್ತಿ ಎಂದು ಹೆಸರು ನಮೂದಿಸಿದ್ದು ತಕ್ಷಣ ಅದನ್ನು ತೆಗೆದು ಹಾಕಬೇಕು. ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನೋಂದಾಯಿಸಿ ಮತ್ತು ನೋಟಿಸ್ ನೀಡಿದ ಅಧಿಕಾರಿಗಳನ್ನು ಸರ್ಕಾರ ಕೂಡಲೇ ವಜಾ ಮಾಡಬೇಕು. ವಕ್ಫ್ ಇಲಾಖೆಯ 1974 ರ ಗೆಜೆಟ್ ನಲ್ಲಿರುವ ರೈತರ ಆಸ್ತಿಗಳನ್ನು ತೆಗೆದು ಹಾಕಬೇಕು. ವಕ್ಫ್ ಇಲಾಖೆಯಿಂದ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲಾ ರೈತರ ಜಮೀನುಗಳಿಗೆ ತೊಂದರೆ ನೀಡುವುದಿಲ್ಲ ಯಾವುದೇ ಖಾತೆಯನ್ನು ಬದಲಾವಣೆ ಮಾಡುವುದಿಲ್ಲ ಎಂದು ಆದೇಶ ಮತ್ತು ಮಾರ್ಗಸೂಚಿಯನ್ನು ಸರ್ಕಾರ ಕೂಡಲೇ ಹೊರಡಿಸಬೇಕು. ರಾಜ್ಯದಲ್ಲಿರುವ ಕೆಲ ರೈತರ ಜಮೀನಿನಲ್ಲಿ ಇನಾಂ, ವಕ್ಫ್, ಸರ್ಕಾರ ಎಂದು ನಮೂದಿಸಿದ್ದನ್ನು ತಕ್ಷಣ ತೆಗೆದು ಹಾಕಬೇಕು. ವಕ್ಫ್ ಹೆಸರಿನಲ್ಲಿನ ರೈತರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಇದರಿಂದ ರಾಜ್ಯದಲ್ಲಿ ಅಶಾಂತಿ ಉಂಟಾಗುತ್ತಿದ್ದು ಇದನ್ನು ಇಲ್ಲಿಗೆ ಕೈಬಿಡಬೇಕು ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ರೈತರಲ್ಲೇ ಕ್ಷಮೆಯನ್ನು ಕೇಳಬೇಕು. ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ 257 ಎಕರೆ ಗಂಗಾವತಿಯಲ್ಲಿ 167 ಎಕರೆ ಕಾರ್ಟಿಗೆ ತಾಲೂಕಿನಲ್ಲಿ 149 ಎಕರೆ ಜಮೀನು ಇದ್ದು ತಾಲೂಕಿನಲ್ಲಿ 997 ಎಕರೆ ಕುಕುನೂರು ತಾಲೂಕಿನಲ್ಲಿ 974 ಎಕರೆ ಕುಷ್ಟಗಿ ತಾಲೂಕಿನಲ್ಲಿ 67 ಎಕರೆ ಯಲಬುರ್ಗಾ ತಾಲೂಕಿನಲ್ಲಿ 324 ಎಕರೆ ಇದೆ ಎಂದು ಕೊಪ್ಪಳ ಜಿಲ್ಲಾ ವಕ್ಫ್ ಇಲಾಖೆ ಹೇಳುತ್ತಿದೆ. ಕೊಪ್ಪಳ ಜಿಲ್ಲೆಯ ಎಲ್ಲಾ ಆಸ್ತಿಗಳನ್ನು ವಕ್ಫ್ ಇಲಾಖೆಯಿಂದ ಕೈಬಿಡಬೇಕು ಮತ್ತು ಇಲಾಖೆಯಿಂದ ಕೈ ಬಿಟ್ಟ ಬಗ್ಗೆ ರೈತರಿಗೆ ಆದೇಶ ಪ್ರತಿಯನ್ನು ನೀಡಿ ಮಾರ್ಗಸೂಚನೆ ಹೊರಡಿಸಬೇಕು ಮಣ್ಣಿನ ಮಕ್ಕಳ ಬಾಯಲ್ಲಿ ಮಣ್ಣು ಹಾಕಲು ಯಾವುದೇ ಸರ್ಕಾರ ಪ್ರಯತ್ನ ಪಟ್ಟರೆ ಅವರ ಮುಂದಿನ ರಾಜಕೀಯ ಜೀವನದಲ್ಲಿ ಮಣ್ಣಿನ ಮಕ್ಕಳು ಅವರಿಗೆ ಮಣ್ಣುಮುಕ್ಕಿಸುತ್ತಾರೆ ಎಂದು ಈ ಮೂಲಕ ಎಚ್ಚರಿಕೆ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಒಂದು ವೇಳೆ ಇದರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ರಾಜ್ಯಮಟ್ಟದಲ್ಲಿ ರಾಜ್ಯದ ಸಂಘದ ಮೂಲಕ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಆಗ್ರಹಿಸಿದರು. ರಾಜ್ಯದ ರೈತರ ಹಿತ ಕಾಪಾಡಲು ಮನವಿಯನ್ನು ಮಾಡಿಕೊಳ್ಳಲಾಯಿತು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮುಸ್ತಫ ಮುಲ್ಲಾ, ಪಂಪಣ್ಣ ನಾಯಕ್ ,ಮರಿಸ್ವಾಮಿ, ಬರ್ಮಣ್ಣ ದೊಡ್ಡನಗೌಡ, ಸಿದ್ದು ,ರಾಮಣ್ಣ, ಜಡಿಯಪ್ಪ ಮತ್ತು ಹಲವಾರು ರೈತರುಗಳು ಹಾಗೂ ರೈತ ಮುಖಂಡರು ಭಾಗಿಯಾಗಿದ್ದರು.

About Mallikarjun

Check Also

ಬೆಳಗಾವಿ ಮಹಾತ್ಮ ಗಾಂಧೀಜಿಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದ ಶತಮಾನೋತ್ಸವಸಂದರ್ಭ ನಿಮಿತ್ತ ವಿಶೇಷ ಲೇಖನ

A special article on the occasion of the centenary of Congress convention held under the …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.