Breaking News

ಒಣ ಗಾಂಜಾ ಸಹಿತ ಆರೋಪಿ ಬಂಧನ

Accused arrested with dry ganja

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾನ ಹೊಸಹಳ್ಳಿ: ಸಮೀಪದ ಬಣವಿಕಲ್ಲು ಗ್ರಾಮದ ಹೆದ್ದಾರಿ 50ರ ಬಳಿ ಶುಕ್ರವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಗಾಂಜಾ ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ರಂಗಸ್ವಾಮಿ ಎಂಬಾತ ಬಂಧಿತ ಆರೋಪಿ. ಆರೋಪಿಯ ಬಳಿಯಲ್ಲಿದ್ದ 2.10 ಕಿ. ಗ್ರಾಂ ಬೀಜ ಸಹಿತ ಒಣ ಗಾಂಜಾ ಹಾಗೂ ದ್ವಿಚಕ್ರವಾಹನ ಜಪ್ತಿ ಮಾಡಿ ಆರೋಪಿಯನ್ನು ದಸ್ತಗಿರಿ, ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ, ಅಬಕಾರಿ ಜಂಟಿ ಆಯುಕ್ತರು ಹೊಸಪೇಟೆ ವಿಭಾಗ, ಅಬಕಾರಿ ಉಪ ಆಯುಕ್ತರು ವಿಜಯನಗರ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ವಿಭಾಗದ ನಿರೀಕ್ಷಕರಾದ ಲೋಕೇಶ್, ಸಿಬ್ಬಂದಿಗಳಾದ ಸಂತೋಷ್, ಬಸವರಾಜು ಬಂಗಾರಿ, ಶಂಕರ್ ಗುರುವ ಹಾಗೂ ಚಾಲಕರಾದ ಪ್ರಸನ್ನಕುಮಾರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *