Breaking News

ಹುಂಡಿ ಹಣದಲ್ಲೆ ಕೊಟ್ಯಾದೀಶರಾದ ಮಾದಪ್ಪ .

Madappa became a millionaire in Hundi money.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ ; ಬಂಗಾರಪ್ಪ . ಸಿ .
ಹನೂರು : ಹನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಈ ದಿನ ಬೆಳಿಗ್ಗೆ 6.30 ಗಂಟೆಯಿಂದಶ್ರೀಶ್ರೀಶಾಂತಮಲ್ಲಿಕಾರ್ಜುನಸ್ವಾಮಿಗಳು, ಶ್ರೀ ಸಾಲೂರು ಬೃಹನ್ಮಠಾಧ್ಯಕ್ಷರು ರವರ ದಿವ್ಯಸಾನಿದ್ಯದಲ್ಲಿ ಶ್ರೀ ರಘು, ಎ. ಈ, ಕ.ಆ.ಸೇ, (ಹಿ.ಶ್ರೇಣಿ) ಮಾನ್ಯ ಕಾರ್ಯದರ್ಶಿಗಳು ರವರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು 28 ದಿನಗಳಲ್ಲಿ ಒಟ್ಟು ಮೊತ್ತ ರೂ.2,00,80,844.00ಗಳು (ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ 30 ಗ್ರಾಂ, ಬೆಳ್ಳಿ 1 ಕೆ.ಜಿ 865 ಗ್ರಾಂ ಹುಂಡಿಯಲ್ಲಿ ದೊರೆತಿದೆ. ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಶ್ರೀ ಚಂದ್ರಶೇಖರ.ಜಿ.ಎಲ್, ಚಾಮರಾಜನಗರ ಜಿಲ್ಲಾಡಳಿತ ಕಛೇರಿಯ ಕು. ಶ್ವೇತಾ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಪ್ ಬರೋಡ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *