State team visit to Galaga village; Verification of NREGA work files
ರಾಯಚೂರು,ಅ.23,:- ಇಂದು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮ ಪಂಚಾಯತಿಗೆ ರಾಜ್ಯ ತಂಡದವರು 2024-25ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಸಾಮಾಗ್ರಿ ಬಿಲ್ಲುಗಳ ಎಫ್.ಟಿ.ಒಗಳ ಪರಿಶೀಲನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತಾಲಯದ ಸಹಾಯಕ ನಿರ್ದೇಶಕರಾದ ತ್ಯಾಗರಾಜ್ ಮತ್ತು ಲೆಕ್ಕ ಸಂಯೋಜಕರು ಚಿಕ್ಕಣ್ಣ ಅವರು ಪರಿಶೀಲನೆ ಮಾಡಿದರು.
ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆಯನ್ನು ಮೂಲ ಪ್ರತಿಯನ್ನು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿನರು ನೀಡಬೇಕು. ಶಾಲಾ ಸಮತಟ್ಟು ಮಾಡುವ ಸಂದರ್ಭದಲ್ಲಿ ಪ್ರತಿ ಕಡತಕ್ಕೆ ಪುಟ ಸಂಖ್ಯೆಯನ್ನು ಸಮೂದಿಸಬೇಕು. ಕೂಲಿ ಕಾರ್ಮಿಕ ಸಹಿ ಅಥವಾ ಹೆಬ್ಬೆರಳು ನೀಲಿ ಶಾಹಿ ಪಡೆದ ನಂತರ ಅವರ ಹೆಸರು ಬರೆಯಬೇಕೆಂದು ಸ್ಥಳದಲ್ಲಿದ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಮಯದಲ್ಲಿ ದೇವದುರ್ಗ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಗಳಾದ ಅಣ್ಣರಾವ್, ಹನುಮಂತಪ್ಪ, ಜಿಲ್ಲಾ ಪಂಚಾಯತ ಎ.ಡಿ.ಪಿ.ಸಿ ಮಲ್ಲಮ್ಮ, ಜಿಲ್ಲಾ ಪಂಚಾಯತ್ ಡಿಎಮ್, ಐಎಸ್ ವೆಂಕಟೇಶ್, ಅಕೌಂಟ್ ಮ್ಯಾನೇಜರ್ ಬಸವರಾಜ್, ಸಾಗರ, ಉಮೇಶ ಸೇರಿದಂತೆ ತಾಲೂಕಿನ ಎಲ್ಲಾ ನರೇಗಾ ತಾಂತ್ರಿಕ ಸಹಾಯಕರು ಹಾಗೂ ಗ್ರಾಮ ಪಂಚಾಯಿತಿಗಳು ಸಿಬ್ಬಂದಿ ಉಪಸ್ಥಿತರಿದ್ದರು.