Breaking News

ನರೇಗಾಕ್ರಿಯಾಯೋಜನೆ ಮಾಡೆಲ್ ಸಾ ಫ್ಟ್‌ವೇರ್ ಬಗ್ಗೆ ಜಾಗೃತಿ ಮೂಡಿಸಿ

Create awareness about Narega Action Model Software

ಜಾಹೀರಾತು

ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಮಹಾಂತಸ್ವಾಮಿ ಸಲಹೆ

ಮಾಡೆಲ್ ಸಾಫ್ಟ್‌ವೇರ್ ಬಳಕೆ ಬಗ್ಗೆ ತರಬೇತಿ ಕಾರ್ಯಾಗಾರ

ಗಂಗಾವತಿ : 2025-26 ನೇ ಆರ್ಥಿಕ ಸಾಲಿನ ನರೇಗಾ ಕ್ರಿಯಾಯೋಜನೆಯನ್ನು ಸಾಫ್ಟ್‌ವೇರ್ ನಲ್ಲಿ ಅಪ್ಲೋಡ್ ಮಾಡಬೇಕಿದ್ದು, ಈ ಕುರಿತು ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಜಿ.ಪಂ‌ ಸಂಪನ್ಮೂಲ ವ್ಯಕ್ತಿಗಳು ಹಾಗೂ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಮಹಾಂತಸ್ವಾಮಿ ಅವರು ತಿಳಿಸಿದರು.

ನಗರದ ತಾ.ಪಂ‌ ಮಂಥನ ಸಭಾಂಗಣದಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ಮೂರು ತಾಲೂಕಿನ ಎಲ್ಲ ಗ್ರಾ.ಪಂ ಅಧಿಕಾರಿಗಳು, ಸಿಬ್ಬಂದಿಗಳಿಗೆ 2025-26ನೇ ಸಾಲಿನ ನರೇಗಾ ಕಾರ್ಮಿಕ ಆಯವ್ಯಯ ತಯಾರಿಕೆ ಕುರಿತು
ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಅವರು ಮಾತನಾಡಿ, ಎಎಂಸಿ (ಪ್ರಧಾನ ವಾರ್ಷಿಕ ನರೇಗಾ ಸುತ್ತೋಲೆ ) ಪ್ರಕಾರ ಕಾಮಗಾರಿಗಳನ್ನು ಆಯ್ಕೆ ಮಾಡಬೇಕು. ನರೇಗಾ ಸಿಬ್ಬಂದಿಗಳು, ಅನುಮೋದಿಸಿದ ಕಾಮಗಾರಿಗಳ ಕ್ಷೇತ್ರ ಭೇಟಿ ಮಾಡಿ ಪರಿಶೀಲಿಸಬೇಕು. ನಂತರ ಅಂದಾಜು ಪತ್ರಿಕೆ ತಯಾರಿಸಿ, ಕ್ರಿಯಾಯೋಜನೆ ಸಿದ್ಧಪಡಿಸಿ ತಾಪಂ ಕಾರ್ಯಾಲಯಕ್ಕೆ ತಂತ್ರಾಂಶ ಮೂಲಕ ಮಾಹಿತಿ ಸಲ್ಲಿಸಬೇಕು ಎಂದರು.

ವೈಯಕ್ತಿಕ ಕಾಮಗಾರಿಗಳು ಹಾಗೂ ಸಾಮುದಾಯಿಕ ಕಾಮಗಾರಿಗಳನ್ನು ಕ್ಯೂಆರ್ ಕೋಡ್ ಮೂಲಕ ಫಲಾನುಭವಿಗಳು ಬೇಡಿಕೆ ಸಲ್ಲಿಸಬಹುದು ಎಂದು ತಿಳಿಸಿದರು.

ಈ ಬಗ್ಗೆ ಹಳ್ಳಿಗಳಲ್ಲಿ ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನದಡಿ ವ್ಯಾಪಕ ಪ್ರಚಾರ ಕೈಗೊಂಡು ಜಾಗೃತಿ ಮೂಡಿಸಬೇಕು.

ಎಫ್ ಇಸಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ವಾಸುದೇವ ಮೂರ್ತಿ ಅವರು ಮಾತನಾಡಿ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸ್ಥಳದ ಸೂಕ್ತತೆಗೆ ಕ್ಲಾರ್ಟ್ ಆ್ಯಪ್ ( ಕಾಂಪೋಸಿಟ್ ಲ್ಯಾಂಡ್ ಸ್ಕೇಪ್ ಟೂಲ್)
ಬಳಕೆ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪರಿಸರ ಅಭಿವೃದ್ಧಿ ಮತ್ತು ನಿರ್ವಹಣೆ ಸಮಿತಿಗಳ ರಚನೆಯಿಂದ ಪರಿಸರ ಸಂರಕ್ಷಣೆ ಬಗ್ಗೆ ತಿಳಿಸಿದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಾರಟಗಿ ತಾಲೂಕು ಎಂಐಎಸ್ ಸಂಯೋಜಕರಾದ ಚನ್ನಬಸವ ಅವರು, 2025-26ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಕೆಯ ಕುರಿತು ಮಾಡೆಲ್ ಸಾಫ್ಟವೆರ್ ನಲ್ಲಿ ಮಾಹಿತಿ ಅಳವಡಿಸುವ ಬಗ್ಗೆ ತರಬೇತಿ ನೀಡಿದರು.

ಸದರಿ ತರಬೇತಿಯಲ್ಲಿ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ತಾಪಂ ಯೋಜನಾ ಅಧಿಕಾರಿಗಳಾದ ಗುರುಪ್ರಸಾದ
ತಾಲೂಕು ಮಟ್ಟದ ಅನುಷ್ಠಾನ ಇಲಾಖೆ ಅಧಿಕಾರಿಗಳು, ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ತಾಲೂಕ ಮಟ್ಟದ ನರೇಗಾ ಸಿಬ್ಬಂದಿಗಳು, ತಾಂತ್ರಿಕ ಸಹಾಯಕರು (ಸಿವಿಲ್, ತೋಟಗಾರಿಕೆ, ಕೃಷಿ, ಅರಣ್ಯ), ಗ್ರಾಪಂ ಸಿಬ್ಬಂದಿಗಳಾದ ಡಿಇಓಗಳು, ಬಿಎಫ್ ಟಿಗಳು, ಗ್ರಾಮ ಕಾಯಕ ಮಿತ್ರರು ಇದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.