Breaking News

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ: ಬಸವರಾಜ ತೆನ್ನಳ್ಳಿ,

Celebrate Kittur Rani Chennamma Jayanti meaningfully: Basavaraja Thennalli

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಯಲಬುರ್ಗಾ ಪಟ್ಟಣದಲ್ಲಿ ಇದೇ ಅ.23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದದೆಂದು ತಹಶೀಲ್ದಾರ ಬಸವರಾಜ ತೆನ್ನಳ್ಳಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಇದೇ ತಿಂಗಳ 23 ರಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸುವ ಸಂಬಂಧ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸಮಾಜದ ಮುಖಂಡರ ಸಮ್ಮತಿಯಂತೆ ಅಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಬಯಲು ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.

ಸರ್ಕಾರದ ಶಿಷ್ಟಾಚಾರದ ಅನುಸಾರ ಜಯಂತಿ ಕಾರ್ಯಕ್ರಮ ಆಯೋಜಿಸ ಲಾಗುವುದು, ಕಿತ್ತೂರು ರಾಣಿ ಚೆನ್ನಮ್ಮ ಅವರ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿ ಸಲಾಗುವುದು ಮತ್ತು ಇದೇ 18 ನೇ ತಾರೀಖಿನ ದಿನದಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ತಾಲೂಕಿನ ಬಂಡಿ ಗ್ರಾಮದ ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸಿ ನಂತರ ಸಂಗನಾಳ ಗ್ರಾಮಕ್ಕೆ ಸಂಚರಿಸಲಿದೆ.

ಶಾಸಕರು, ಜನಪ್ರತಿನಿಧಿಗಳು, ಕನ್ನಡಪರ, ರೈತ ಹಾಗೂ ಕಾರ್ಮಿಕ ಸಂಘಟನೆಗಳು, ವಿದ್ಯಾಸಂಸ್ಥೆಗಳು, ಎನ್.ಸಿ.ಸಿ ಎನ್.ಎಸ್.ಎಸ್. ಸ್ಕೌಟ್ಸ್ ಮತ್ತು ಗೈಡ್ಸ್ ರೋಟರಿ ಲಯನ್ಸ್ ಕ್ಲಬ್, ರೆಡ್ ಕ್ರಾಸ್, ಸ್ತ್ರೀ ಶಕ್ತಿ ಸಂಘಗಳು ಸೇರಿದಂತೆ ಸಂಘ-ಸಂಸ್ಥೆಗಳು ಹಾಗೂ ಸಾರ್ವ ಜನಿಕರನ್ನು ಜೊತೆಗೂಡಿಸಿಕೊಂಡು ಕನ್ನಡ ರಥವನ್ನು ಗೌರವಯುತವಾಗಿ ಸ್ವಾಗತಿಸಲು ತಿರ್ಮಾನಿಸಲಾಯಿತು.

ತಾಲ್ಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತಿನ ಅಧ್ಯಕ್ಷರು ಪದಾಧಿಕಾ- ರಿಗಳನ್ನು, ಕನ್ನಡಪರ ಸಂಘಟನೆಗಳು, ಶಾಲಾ- ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು ರಥ ವನ್ನು ಬರಮಾಡಿಕೊಂಡು ನಂತರ ಗಡಿ ಭಾಗದಲ್ಲಿ ಬೀಳ್ಕೊಡುವ ವರೆಗೆ ಹಾಗೂ ಸಂಚರಿಸುವಾಗ ಮತ್ತು ವಾಸ್ತವ್ಯದ ಸ್ಥಳದಲ್ಲಿ ಸೂಕ್ತ ಪೋಲಿಸ್ ಭದ್ರತೆಯನ್ನು ವ್ಯವಸ್ಥೆ ಮಾಡಲು ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಪಟ್ಟಣ ಪಂಚಾಯತ ಸದಸ್ಯ ಅಂದಯ್ಯ ಕಳ್ಳಿಮಠ, ಸದಸ್ಯರುಗಳಾದ ಅಮರೇಶ ಹುಬ್ಬಳ್ಳಿ,ರೇವಣೇಪ್ಪ ಹಿರೇ ಕುರಬರ, ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಕೆ.ಜಿ.ಪಲ್ಲೇದ, ಅಧಿಕಾ- ರಿಗಳಾದ ಗ್ರೇಡ್ 2 ತಹಶೀಲ್ದಾರ ವೀರುಪಣ್ಣ ಹೋರಪೇಟೆ, ದೇವರಡ್ಡಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಬಾಲದಂಡಪ್ಪ ತಳವಾರ ನೌಕರ ಸಂಘದ ತಾಲೂಕ ಅಧ್ಯಕ್ಷ ವಾಯ್.ಜಿ.ಪಾಟೀಲ್, ಬಸವರಾಜ ಗೋಗೇರಿ,ವೀರಭದ್ರಪ್ಪ ಮಾಹಂತೇಶ ಅಂಗಡಿ, ಗಾಣೀಗೇರ,ಪ್ರೇಮಾ ಹೆಚ್.ಡಿ. ಮಂಜುನಾಥ ನಂದಾಪೂರ ಹಿರೇಮಠ, ಶಿವಪುತ್ರಪ್ಪ, ಶಿವಕುಮಾರ ಪಡಗಣ್ಣವರ, ಶಿವಕುಮಾರ ಎಂ.ಮಳಿಮಠ, ಶೇಖರಪ್ಪ ಉಪ್ಪಾರ, ಮುಖಂಡರುಗಳಾದ ವೀರಣ್ಣ ಉಳ್ಳಾಗಡ್ಡಿ,ರಾಜಶೇಖರ ನಿಂಗೋಜಿ, ಶರಣಪ್ಪ ರಾಂಪೂರ.ಶರಣಪ್ಪ ಗಾಂಜಿ, ಡಾ.ಶಿವನಗೌಡ ದಾನರಡ್ಡಿ, ಶರಣಪ್ಪ ಗೋಣಿ, ಕನ್ನಡ ಪರ ಸಂಘಟನೆಯ ಮುಖಂಡರುಗಳಾದ ರಾಜಶೇಖರ ಶ್ಯಾಗೋಟಿ, ಶಂಕರ ಮೂಲಿಮನಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಪಾಲ್ಗೋಂಡಿದ್ದರು.

About Mallikarjun

Check Also

ಹಂಪಸದುರ್ಗಾ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ

Inspection of Hampasadurga lake dredging work ಕೂಲಿಕಾರರು ಮೇಜರ್ ಮೆಂಟ್ ಪ್ರಕಾರ ಕೆಲಸ ನಿರ್ವಹಿಸಲಿ ತಾ.ಪಂ. ಸಹಾಯಕ ನಿರ್ದೇಶಕರಾದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.