Breaking News

ಶ್ರೀ ದೇವಿ ಪುರಾಣ ಪ್ರವಚನಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು.

Sri Devi Purana discourse program was held in grand style.

ಜಾಹೀರಾತು

ಮಸ್ಕಿ:-ಶ್ರೀ ದೇವಿ ಮಠದಲ್ಲಿ ಅಕ್ಟೋಬ‌ರ್ 3ರಿಂದ 15ರವರೆಗೆ ದಸರಾ ಮಹೋತ್ಸವದ 37ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಅಂಗವಾಗಿ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಶೃದ್ಧಾಭಕ್ತಿಯೊಂದಿಗೆ ಜರುಗಲಿವೆ ಎಂದು ಶ್ರೀ ದೇವಿ ಮಠದ ಶಿವರಾಜಯ್ಯ ಸ್ವಾಮಿಯವರು ತಿಳಿಸಿದರು.

ತಾಲೂಕಿನ ಮಲ್ಕಾಪುರ ಗ್ರಾಮದಲ್ಲಿ 37ನೇ ವರ್ಷದ ಶ್ರೀ ದೇವಿ ಪುರಾಣ ಪ್ರವಚನ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಅಕ್ಟೋಬರ್ 3 ರಂದು ಶ್ರೀದೇವಿ ಮಠದಲ್ಲಿ ಘಟಸ್ಥಾಪನೆಯಿಂದ ಪ್ರಾರಂಭಗೊಂಡು, ಅ 15 ರ ವರೆಗೆ ನಿತ್ಯವೂ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಶಾಂಭವಿ ,ಮಹಾನಂದಿಶ್ವರ, ಶ್ರೀಚಕ್ರ , ನಾಗದೇವತೆ ಹಾಗೂ ವಿಘ್ನೇಶ್ವರ ಮೂರ್ತಿಗೆ ರುದ್ರಾಭಿಷೇಕ ಮತ್ತು ಮಹಾಮಂಗಳಾರತಿ ವಿವಿಧ ಕಾರ್ಯಕ್ರಮಗಳು ಜರುಗಿದವು ಹಾಗೂ ಪ್ರತಿದಿನವೂ ಭಕ್ತಾದಿಗಳಿಂದ
ಪುರಾಣ ಪ್ರವಚನ ನಂತರ ಪ್ರತಿ ದಿನ ರಾತ್ರಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ನಂತರ ಮಂಗಳವಾರದಂದು ಶ್ರೀದೇವಿ ಮಠದ ಶರಣಮ್ಮ ಅಮ್ಮನವರು ಹಾಗೂ ತೋರಣದಿನ್ನಿಯ ಶ್ರೀ ಏಳು ಮಕ್ಕಳ ತಾಯಿಯ ಮುಖ್ಯಾರ್ಚಕರಾದ ಶ್ರೀ ವೀರೇಶ ತಾತನವರ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಆರಂಭಗೊಂಡು ಊರಿನ ಪ್ರಮುಖ ಬೀದಿಯಲ್ಲಿ ಶ್ರೀದೇವಿಯ ಉತ್ಸವಮೂರ್ತಿ, ವೀರಭದ್ರ ದೇವರ ಭಾವಚಿತ್ರ ,ವೀರೇಶ ಚರಿತೆ ಹಾಗೂ ಶ್ರೀ ದೇವಿ ಮಹಾತ್ಮೆ ಯನ್ನು ಹೊತ್ತ ಪಲ್ಲಕ್ಕಿ ಮೆರವಣಿಗೆ, ಪುರವಂತಿಕೆ ಸೇವೆ, ನಂದಿ ಕೋಲು ಸೇವೆ ಬಹಳ ವಿಜೃಂಭಣೆಯಿಂದ ನೋಡುಗರ ಕಣ್ಮನ ಸೆಳೆದವು.ಇಡೀ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿತು.
ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಹಾಗೂ ಗ್ರಾಮದ ಸರ್ವರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಾಯಿಯ ಕೃಪೆಗೆ ಪಾತ್ರರಾದರು.

About Mallikarjun

Check Also

ಶರಣ ಸಾಹಿತ್ಯ ಪರಿಷತ್ತೊ ಅಥವಾ ಸನಾತನ ಸಂಸ್ಥೆಯೊ

Sharan Sahitya Parishad or Sanatan Sanstha ಈಸಾಂದರ್ಭಿಕ ಚಿತ್ರರಮಣ ಶ್ರೀ ಸಂಸ್ಥೆಯ ಅಧ್ಯಕ್ಷರು ಹಾಗು ಅಖಿಲ ಭಾರತ ಶರಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.