Maharshi Valmiki Jayanti celebration at Bandi Harlapura Gram Panchayat
ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಗ್ರಾಮ ಪಂಚಾಯತಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು, ಭಾರತದ ಆದಿಕವಿ ಎಂದು ಗುರುತಿಸಲ್ಪಟ್ಟ ವಾಲ್ಮೀಕಿ ಹುಟ್ಟಿದ ದಿನ. ಭಾರತೀಯರು ಅತ್ಯಂತ ಗೌರವಿಸುವ ಮಹಾಕಾವ್ಯ ರಾಮಾಯಣವನ್ನು ಬರೆದ ಕವಿ ವಾಲ್ಮೀಕಿಯ ಹುಟ್ಟಿದ ದಿನವನ್ನು ಒಂದು ರಾಷ್ಟೀಯ ದಿನವಾಗಿ ಆಚರಿಸುತ್ತಿರುವುದು, ಕವಿಗೆ ಸಂದ ಗೌರವವೆನ್ನಬಹುದು. 24,000 ಸಂಸ್ಕೃತ ಶ್ಲೋಕಗಳಿರುವ ಒಂದು ಬೃಹತ್ ಗ್ರಂಥವನ್ನು ಯಾವುದೇ ಹಿಂದಿನ ಮಾದರಿಯ ಆಸರೆಯಿಲ್ಲದೆ ತಾನೇ ಸೃಷ್ಟಿಸಿದ ಕಾವ್ಯ ಪ್ರಕಾರದಲ್ಲಿ ಬರೆದ ವಾಲ್ಮೀಕಿಯ ವಿದ್ವತ್ತಿಗೆ ಖಂಡಿತವಾಗಿ ನಮಿಸಬೇಕಾಗಿದೆ. ಸರದಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಗಂಗಮ್ಮ ಓಬಳೇಶ್, ಗ್ರಾಮ ಪಂಚಾಯತ ಸದ್ಯಸರು ದಸ್ತಗಿರ್ ತಂದೆ ಸಲಾಂ ಸಾಬ್, ಸರ್ವರಲಿ, ಹನುಮಂತಪ್ಪ ಕಾಟ್ರಳ್ಳಿ, ಲಕ್ಷ್ಮವ್ವ ಕನಕಪ್ಪ ಮುಂಡರಗಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು,