Breaking News

ವೀರಶೈವ ಸಮಾಜವು ಮತ್ತೊಂದು ಸಮಾಜಕ್ಕೆ ಮಾದರಿಯಾಗಬೇಕು -ಶಂಕರ್ ಬಿದರಿ ಅಭಿಮತ

Veerashaiva society should be a model for other societies – Shankar Bidari Abhimata

ಜಾಹೀರಾತು


ವರದಿ : ಬಂಗಾರಪ್ಪ ,ಸಿ.


ಹನೂರು :ಸಂಘಟನೆ ಎಂದರೆ ಎಲ್ಲಾ ನಮ್ಮ ಜನಾಂಗದವರಿಗೆ ರಕ್ಷಣೆ ನೀಡಬೇಕು ಸಮಾಜದಲ್ಲಿ ಬದಲಾವಣೆ ತರಬೇಕು,ನಾವು ಬೇರೊಬ್ಬರಿಗೆ ಮಾದರಿಯಾಗುವಂತ ಕೆಲಸ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಶ್ರೀ ಯುತ ಶಂಕರ್ ಬಿದರಿಯವರು ತಿಳಿಸಿದರು .
ಹನೂರು ಪಟ್ಟಣದ ಚಿಕ್ಕಮಠದಲ್ಲಿ ಮಾತನಾಡಿದ ಅವರು ಮೊದಲು ಮಕ್ಕಳುಗಳನ್ನು

ಆರೋಗ್ಯವಂತರಾಗಿ ,ಆರ್ಥಿಕ ವಂತರಾಗಿ ,ಸ್ಥಿತಿವಂತರಾಗಿ ಸಂಘಟಿತರಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲು ಪ್ರಯತ್ನಿಸಿ ,ನಾವು ಎಲ್ಲಿಯವರೆಗೂ ಸಂಘಟನೆ ಮಾಡುವುದಿಲ್ಲವೊ ನಮಗೆ ನಷ್ಟ, ನಮ್ಮ ಶಕ್ತಿಯು ಬೆರೆಯವರಿಗೆ ಗೊತ್ತಾದರೆ ಯಾರು ಸಮಾಜದ ಹತ್ತಿರ ಸುಳಿಯಲ್ಲ ಹಣಕ್ಕಾಗಿ ನಮ್ಮತನವನ್ನು ಮರೆತ್ತಿದ್ದೆವೆ ,ಇದರಲ್ಲಿ ಇರುವವರೆಲ್ಲ ವೀರಶೈವ ಲಿಂಗಾಯಿತರು . ಸಮಾಜ ರಕ್ಷಣೆ ಮಾಡಲು ನಾವೆ ಬೆವರು ಸುರಿಸಬೇಕು ಮುಂದಿನ ಪೀಳಿಗೆಗೆ ಸಂಬಂಧಿಸಿದಂತೆ ದುಡಿಯಬೇಕು , ಹಿರಿಯರು ಮಾಡಿದ ಕೆಲಸದಿಂದಾಗಿ ನಾವು ಜಾತಿಯ ಹೆಸರನ್ನು ಎದೆ ತಟ್ಟಿ ಹೇಳುತ್ತಿದ್ದೆವೆ . ಈ ತಾಲ್ಲೂಕು ಜನರಲ್ಲಿ ಮನೆಗೊಬ್ಬರಂತೆ ಇನ್ನೂರೈವತ್ತು ರೂಪಾಯಿ ನೀಡಬೇಕು ತಾಲ್ಲೂಕು ಅಧ್ಯಕ್ಷರು ಅವರನ್ನು ಸಂಪರ್ಕ ಸಾದಿಸಿ ಸದಸ್ಯರನ್ನಾಗಿ ಮಾಡಿದರೆ ಅದು ಹತ್ತು ಸಾವಿರ ಜನರನ್ನು ಕೊಟ್ಟಾಂತಾಗುತ್ತದೆ .

ಮುಂದಿನ ದಿನಗಳಲ್ಲಿ ಬಸವ ಜಯಂತಿ ಮಾಡುವಾಗ ಬಸವಣ್ಣನವರ ಪ್ರತಿಮೆಯಿಂದೆ ಕನಿಷ್ಟ ಹತ್ತು ಸಾವಿರ ಜನವಿರಬೇಕು ಆಗ ಮಾತ್ರ
ಸಂಘಟನೆಯ ಶಕ್ತಿಯನ್ನು ಬೆರೋಬ್ಬರು ನೋಡಲು ಸಾದ್ಯ .
ಎರಡನೆ ವಿಷಯವು ಸಂಘದ ಸದಸ್ಯರು ಪದಾಧಿಕಾರಿಗಳು ಕಾಣಿಕೆಯನ್ನು ಸಂಗ್ರಹ ಮಾಡುವಾಗ ನಮ್ಮ ಪ್ರಮುಖರು ವರ್ಷದ ಸಂಪಾದನೆಯಲ್ಲಿ ಎರಡು ಪರ್ಶೇಂಟ್ ಹಾಕಬೇಕಾಗಿದೆ .
ಸಮಾಜದ ಬಂದುಗಳು ನಮಗೆ ಒಂದು ಪರ್ಶೇಂಟ್ ನೀಡಬೇಕು
ಸಿಖ್ ಸಮಾಜದಾಗೆ ,ಜೈನ್ ಸಮಾಜವು ಬಹಳ ಕಡಿಮೆಯಿದೆ ಆದರು ಅವರು ಬಲಿಷ್ಠರು .
ನೀವು
ಆಯಾ ತಾಲ್ಲೂಕಿನಲ್ಲಿ ಸಂಗ್ರಹವಾದ ಹಣದ ಎಂಬತ್ತು ಭಾಗವನ್ನು ಸ್ಥಳಿಯವಾಗಿ , ಏಳು ಭಾಗವನ್ನು ,ಆಯಾ ಜಿಲ್ಲೆಗಾಗಿ ,ಇನ್ನೂಳಿದ ಏಳು ಭಾಗವನ್ನು ರಾಜ್ಯಕ್ಕೆ ನೀಡಲಾಗುವುದು ,ಇನ್ನು ಐದು ವರ್ಷಗಳ ಒಳಗಾಗಿ ಸಂಘಕ್ಕೆ ಹತ್ತು ಕೋಟಿ ಹಣ ನೀಡಬೇಕು ಮೂಲ ಧನವನ್ನು ಯಾರು ಮುಟ್ಟಬಾರದು, ಸಮಾಜದಲ್ಲಿ ಬಂದಂತಹ ಹಣವನ್ನು ವಿದ್ಯಾರ್ಥಿಗಳು ಉಪಯೊಗಕ್ಕಾಗಿ .
ಕಾರ್ಯ ಸಮಿತಿಯ ಕೆಲಸ ಗಳು : ಪ್ರತಿ ಹಳ್ಳಿಯ ಜನಾಂಗದವರನ್ನು ಗುರುತಿಸಿ ಮಾಡಿಸಬೇಕು . ಹಲವಾರು ಸಮಿತಿಗಳನ್ನು ವಿವಿಧ ಕಾರ್ಯ ಮಾಡಬೇಕು . ಮೂಲ ಭೂತ ಸಮಸ್ಯೆಗಳು ಸೇರಿದಂತೆ ಇತ್ಯಾದಿಗಳು .
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಬೇಕು .
ನ್ಯಾಯ ಸಮಿತಿಯನ್ನು ಮಾಬೇಕು ಇದರಿಂದ ಕೊರ್ಟುಗಳಿಗೆ ದಂಡವನ್ನು ನಮ್ಮವರು ಕಟ್ಟದಿರುವಂತೆ ತಿರ್ಮಾನಿಸಬೇಕು . ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯದಾಗೆ ನೋಡಿಕೊಳ್ಳಬೇಕು. ಗೌರವಸ್ಥ ಸಮಾಜದ ಬಂದುಗಳು ಪೋಲಿಸ್ ಠಾಣೆಗಳು ಹಾಗೂ ನ್ಯಾಯಲಯದ ಮುಂದೆ ನಿಲ್ಲಬಾರದು , ಮಕ್ಕಳ ವಿದ್ಯಾಬ್ಯಾಸ ಹೆಚ್ಚಿನ ಪ್ರಮಾಣದಲ್ಲಿವೆ ದೊರೆಯುವಂತೆ ಮಾಡಲಿ ಅವರು ಗೌರವ ತರುವಂತೆ ಮಾಡಲಿ . ಎರಡು ಸಾವಿರದ ಇಪ್ಪತ್ತೋಂಬತ್ತನೆ ಇಸವಿಯಲ್ಲಿ ಆಯಾ ಜಿಲ್ಲಾ ಘಟಕಕ್ಕೆ ಸ್ವಂತ ಕಛೇರಿ ಮಾಡವುದು . ಹಾಗೂ ಸಮಾಜ ಜಿಲ್ಲಾ ಕೇಂದ್ರದಲ್ಲಿ ಉದ್ಯೋಗ ಮಾರ್ಗದರ್ಶನ ಕೇಂದ್ರ ತೆರೆಯುತ್ತೆವೆ . ಯಾವುದೇ ಸಮಾಜಕ್ಕೆ ಕಠಿಣ ಪರಿಶ್ರಮ ಮುಖ್ಯ ವಾಗುತ್ತದೆ ಜಗತ್ತಿನ ದೊಡ್ಡ ಶಕ್ತಿ ನೈತಿಕ ಶಕ್ತಿಯು ಬಹಳ ಮುಖ್ಯವಾಗಿರುತ್ತದೆ , ನಮ್ಮ ಸಮಾಜದಲ್ಲಿ ಎರಡು ಭಾಗವಾಗಿದೆ ಅದನ್ನೆಲ್ಲ ಒಂದು ಮಾಡೋಣ ನಮ್ಮ ಶಕ್ತಿಯು ಸಂಘಟನೆಯಲ್ಲಿದೆ , ಪ್ರತಿ ತಾಲ್ಲೂಕಿಗೆ ಎರಡು ಬಾರಿ ಬೇಟಿ ನೀಡುತ್ತೆನೆ . ಈಗಾಗಲೇ ನಮಗೆ ಚಾಮರಾಜನಗರ ಜಿಲ್ಲಾದ್ಯಕ್ಷರು ಮನವಿ ಮಾಡಿದ್ದಾರೆ ಅದರಲ್ಲಿ ಗಡಿಗ್ರಾಮ ಆಲಾಂಬಾಡಿಗೆ ವಿದ್ಯುತ್ ವ್ಯವಸ್ಥೆ ,ಸ್ಥಳಿಯರಾದ ಬೇಡಗಂಪಣ ಜನಾಂಗದವರಿಗೆ ಎಸ್ ಟಿ ಸಮುದಾಯಕ್ಕೆ ಸೇರಿಸುವುದು . ಹಾಗೂ ಸಮಾಜಕ್ಕೆ ಶ್ರಮವಹಿಸುವುದು . ನಮ್ಮ ಸಮಾಜದಲ್ಲಿ ಹೆಚ್ಚು ನಾಯಕರಿದ್ದಾರೆ ಅವರಿಗೂ ಮುಂದಿನ ದಿನಗಳಲ್ಲಿ ಅವಕಾಶ ನೀಡೋಣ ಎಂದು ತಿಳಿಸಿದರು .

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಶಾಸಕಿ ಹಾಗೂ ಅ ಭಾ ವೀ ಮಹಾಸಭಾದ ಮಹಿಳಾ ಉಪಾಧ್ಯಕ್ಷರಾದ ಪರಿಮಳ ನಾಗಪ್ಪ ಮಾತನಾಡಿ . ಈಗಾಗಲೇ ನಮ್ಮ ಭಾಗದಲ್ಲಿ ಸೇವೆಮಾಡಿ ಉತ್ತಮ ಕಾರ್ಯ ಮಾಡಿ ಉನ್ನತ ಮಟ್ಟಕ್ಕೆರಿರುವ ನಮ್ಮಲ್ಲಿ ಒಗ್ಗಟ್ಟಿಲ್ಲ ಸಮಾಜಕ್ಕೆ ಆದರೆ ನಾವೇಲ್ಲರು ಶ್ರಮಿಸುತ್ತಿದ್ದೆವೆ, ಬಿದರಿ ಯವರ ನಿರ್ದೇಶನವನ್ನು ಬಳಸಿಕೊಂಡು ,ಪ್ರತಿಯೋಬ್ಬರು ಒಗ್ಗಾಟ್ಟಗೊಣ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾದರೆ ನಮ್ಮ ಮಕ್ಕಳಿಗೆ ಒಳ್ಲೆಯದಾಗುತ್ತದೆ ಎಂದು ಸಮಾಜದ ಮುಖಂಡರಿಗೆ ತಿಳಿಸಿದರು .
ಇದೇ ಸಮಯದಲ್ಲಿ ರಾಷ್ರಿಯ ಮಹಿಳಾ ಮುಖಂಡರಾದ ರೂಪ , ಮುಖಂಡರುಗಳಾದ ಪ್ರಿತನ್ ನಾಗಪ್ಪ ,ಹನೂರು ಮೂರ್ತಿ ,ಪೊನ್ನಾಚಿ ಮಹಾದೇವಸ್ವಾಮಿ , ಮೂಡ್ಲೂಪುರ ನಂದೀಶ್ ,ತಾಲ್ಲೂಕು ಅಧ್ಯಕ್ಷರಾದ ಸೋಮಶೇಖರ್ ಮೂರ್ತಿ , ಕಾರ್ಯದರ್ಶಿ ಗಳಾದ ಮಂಗಲ ಕುಮಾರ್, ನಿರ್ದೇಶಕರುಗಳಾದ ವಿನೋದ್ ,ಮಂಗಲ ಕುಮಾರ್ ,ನಾಗೇಂದ್ರ‌, ಮುರುಡೇಶ್ವರ ಸ್ವಾಮಿ ,‌ಉದ್ನೂರು ಪ್ರಸಾದ್ ,ಕೆಂದ್ರ ಸಮಿತಿ ಸದಸ್ಯರಾದ ಎನ್ರಿಚ್ ಮಹಾದೇವಸ್ವಾಮಿ ,ಹನೂರು ಬಾಬು ,ಲೋಕೇಶ್ ,ಬುಲೆಟ್ ಬಸವರಾಜು , ಪ್ರಿಂಟಿಗ್ ಜಗದೀಶ್ ,ಕಣ್ಣೂರು ಬಸವರಾಜಪ್ಪ ,ಉಪಾಧ್ಯಕ್ಷರಾದ ಮಾದೇಶ್ , ಜಡೆಸ್ವಾಮಿ ,ಪ್ರಭುಸ್ವಾಮಿ‌, ಪ್ರತೀಭ,ರಾಣಿ, ಮಮತ ,ನಾಗನತ್ತ ಗುರುಮಲ್ಲಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ: ಜಿಲ್ಲಾಧಿಕಾರಿ ನಿತೀಶ್ ಕೆ.

Let’s celebrate Diwali in an eco-friendly way: District Collector Nitish K. ರಾಯಚೂರು,ಅ.18,:- ಪ್ರತಿ ವರ್ಷದಂತೆ ಈ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.