Breaking News

ಹಳೆಗೊಂಡಬಾಳ ಗ್ರಾಮದೊಳಗೆ ನುಗ್ಗಿದ ಹಿರೇಹಳ್ಳದ ನೀರು: ಆತಂಕದಲ್ಲಿಗ್ರಾಮಸ್ಥರು.

Hirehalla water seeped into Halegondabala village: Villagers are worried.

ಜಾಹೀರಾತು
ಜಾಹೀರಾತು

ಕೊಪ್ಪಳ: ತಾಲೂಕಿನ ಹಿರೇಹಳ್ಳ ಡ್ಯಾಂನ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಬಾರಿ ಮಳೆಯಿಂದ ಹಿರೇಹಳ್ಳದ ಡ್ಯಾಂ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಬಿಟ್ಟ ಪರಿಣಾಮ ಹಳೆಗೊಂಡಬಾಳ ಗ್ರಾಮದ ಒಳಗೆ ನೀರು ನುಗ್ಗಿದ್ದು, ಗ್ರಾಮ ಜಲಾವೃತವಾಗಿದೆ.

ಹಿರೇಹಳ್ಳ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು, ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ಎಲ್ಲಾ ಕ್ರಷ್ಟ್ ಗೇಟ್ ತೆರೆದು18,886 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ. ನದಿಪಾತ್ರದ ಸಾರ್ವಜನಿಕರು ಸುರಕ್ಷಿತ ಸ್ಥಳದಲ್ಲಿರಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ನದಿ‌ಪಾತ್ರದಲ್ಲಿ ಬರುವ ಹಳೆಗೊಂಡಬಾಳ ಗ್ರಾಮಕ್ಕೆ ನೀರು ಹೊಕ್ಕು ಊರೆಲ್ಲ ಜಲಾವೃತವಾಗಿ, ಜನ ಜೀವನ ಅಸ್ಥವ್ಯಸ್ಥವಾಗಿದೆ. ಜಲಾಶಯದ ನೀರು ಗ್ರಾಮದೊಳಗೆ ಬಂದಿದುವುದರಿಂದ ವಿಷಜಂತುಗಳು ಊರೊಳಗೆ ಬಂದಿದೆ, ಜನ ಜಾನುವಾರುಗಳು ಓಡಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ, ಎಂದು ಗ್ರಾಮಸ್ಥರು ಬದಲಾವಣೆ ಪತ್ರಿಕೆಗೆ ತಮ್ಮ ಅಳಲು ತೋಡಿಕೊಂಡರು.

About Mallikarjun

Check Also

ತಿಂಗಳುಗಳು ಕಳೆಯುತ್ತಾ ಬಂದರೂ ಸಂಘಟನೆಯವರ ದೂರಿಗೆ ಸ್ಪಂದಿಸದ ಗಂಗಾವತಿ ನಗರಸಭೆಯ ಪೌರಾಯುಕ್ತರು.

The Gangavathi Municipal Commissioner has not responded to the organization’s complaint even after months have …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.