Lakshmi Venkateswara Chariotsava and Bunny festival held in association.

ಕೊಪ್ಪಳ : ವಿಜಯ ದಶಮಿಯ ಪ್ರಯುಕ್ತ ದಶಮಿಯಂದು ಮಹಾಮಾಯ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಹಾ ರಥೋತ್ಸವವು ಶನಿವಾರ ಸಾಯಂಕಾಲ 7 ಗಂಟೆಗೆ ನೆರೆದ ನೂರಾರು ಭಕ್ತಾಧಿಗಳ ಜಯಘೋಷದೊಂದಿಗೆ ವಿಜೃಂಬಣೆಯಿಂದ ಜರುಗಿತು.
ಶುಕ್ರವಾರದಂದು ಜರುಗಿದ ಮಹಾಮಾಯ ದೇವಿಯರಥೋತ್ಸವದ ನಂತರ ಪ್ರತಿ ವರ್ಷದ ಪದ್ದತಿಯಂತೆ ಮಾರನೇ ದಿನ ಶನಿವಾರದಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಹಾರಥೋತ್ಸವದಲ್ಲಿ ಶ್ರೀ ಭಾರತಿ ಭಜನಾ ಮಂಡಳಿ, ಶ್ರೀ ಶಾರದಾ ಭಜನಾ ಮಂಡಳಿ ಇವರ ಭಜನಾ ಸೇವೆಯೊಂದಿಗೆ ಸಾಂಗವಾಗಿ ಜರುಗಿತು.
ನೂರಾರು ಭಕ್ತಾಧಿಗಳು ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು.
ನಂತರದಲ್ಲಿ ಮಹಾಮಾಯ ದೇವಸ್ಥಾನದಿಂದ ಶ್ರೀ ದೇವಿಯ ಪಾಲಕಿಯೊಂದಿಗೆ ಪಾದಗಟ್ಟಿಗೆ ಆಗಮಿಸಿ ಮಹಾಮಾಯದೇವಿ ಸಿಮೋಲ್ಲಂಘನ, ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ಈ ವೇಳೆ ಕಿರಿಯರು ಹಿರಿಯರಿಗೆ ಬನ್ನಿ ಸಮರ್ಪಿಸಿದರು. ಪರಸ್ಪರ ಬನ್ನಿ ನೀಡಿ ನಿಮ್ಮ ಜೀವನ ಬಂಗಾರವಾಗಲಿ ಎಂದು ಬನ್ನಿಪತ್ರಿಯನ್ನು ವಿನಿಮಯ ಮಾಡಿಕೊಂಡರು.
Kalyanasiri Kannada News Live 24×7 | News Karnataka
