Breaking News

ಗಂಗಾವತಿ:ಕಲ್ಯಾಣ ಕ್ರಾಂತಿ ಸಂಸ್ಮರಣೆ ಸಮಾರೋಪಸಮಾರಂಭಮತ್ತುಬಸವಧರ್ಮವಿಜಯೋತ್ಸವಕಾರ್ಯಕ್ರಮ

Gangavati: Kalyan Kranti commemoration ceremony and Basavadharma victory ceremony

ಜಾಹೀರಾತು

ಗಂಗಾವತಿ:ಹನ್ನೆರಡನೆಯ ಶತಮಾನಕ್ಕಿಂತ ಮೊದಲು ಈ ನಾಡಿನಲ್ಲಿ ಸಾಮಾಜಿಕ ಧರ‍್ಮಿಕ ರಾಜಕೀಯ ಕ್ಷೇತ್ರಗಳಲ್ಲಿ ಅಸಮಾನತೆ ಶೋಷಣೆ ಮೂಢನಂಬಿಕೆ ಅಸ್ಪೃಶ್ಯತೆ ಕಂದಚಾರ ತಾಂಡವಾಡುತಿದ್ದ ಕಾಲ.ಎಂದು ನಿವೃತ್ತಿ ಪ್ರಾಚಾರ್ಯ ಬಿ ಸಿ ಐಗೊಳು ಹೇಳಿದರು.

ನಗರದ ರಾಷ್ಟ್ರೀಯ ಬಸವದಳದವರು ಬಸವಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕಲ್ಯಾಣಕ್ರಾಂತಿಸಂಸ್ಮರಣೆಸಮಾರೋಪಸಮಾರಂಭಮತ್ತುಬಸವಧರ್ಮವಿಜಯೋತ್ಸವಕಾರ್ಯಕ್ರಮ ಉದ್ದೇಶಿಸಿದ್ದ ಮಾತನಾಡುತ್ತ ನುಭವ ಮಂಟಪದ ನುಡಿಗಳೇ ವಚನಗಳಾದವು.

ಈ ವಚನಗಳಲ್ಲಿ ಜೀವನ ಸಾರವನ್ನು ಹಿಡಿದಿಟ್ಟಿದ್ದಾರೆ. ವಚನಗಳಲ್ಲಿ ಶೋಷಣೆಯ ದನಿ ಇದೆ.
ಬಂಡಾಯದ ಕಹಳೆ ಊದಿದ್ದಾರೆ.ಮಾನವೀಯ ಮೌಲ್ಯಗಳಿವೆ.ಮೂಢನಂಬಿಕೆ ವಿರುದ್ಧ ತೊಡೆ ತಟ್ಟಿದ್ದಾರೆ.
ಧರ‍್ಮಿಕ ಕ್ಷೇತ್ರಗಳಲ್ಲಿ ಇರುವ ಕತ್ತಲೆಗೆ ಬೆಳಕು ನೀಡಿವೆ.
ದೇವರು ರ‍್ಮದ ಹೆಸರಿನಲ್ಲಿ ಮಾಡುವ ಶೋಷಣೆಯನ್ನು ಖಂಡಿಸಿವೆ. ವೇದ ಉಪನಿಷತ್ ಶಾಸ್ತ್ರ ಪುರಾಣಗಳನ್ನು ತಿರಸ್ಕರಿಸಿದ್ದಾರೆ. ಗುಡಿ ಗುಂಡಾರ ಬಹುದೇವತಾ ಆರಾಧನೆ ಇವುಗಳನ್ನು ನಿರಾಕರಿಸಿದ್ದಾರೆ.ಶರಣರು ಸಕಲ ಜೀವಾತ್ಮರಿಗೂ ಲೇಸನೇ ಬಯಸಿದ್ದಾರೆ.

ಇದು ಸಹಜವಾಗಿಯೇ ಸಮಾಜದಲ್ಲಿ ಶ್ರೇಣೀಕೃತ ಸಮಾಜವನ್ನು ನಿರ‍್ಮಿಸಿಕೊಂಡು ಧಾರ್ಮಿಕ ಕ್ಷೇತ್ರವನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿಕೊಂಡು ಜನರಲ್ಲಿ ಭಯ ಮತ್ತು ಮೌಢ್ಯ ಬಿತ್ತಿ ಸುಖ ಜೀವನಕ್ಕೆ ದಾರಿ ಮಾಡಿಕೊಂಡಿದ್ದ ಪುರೋಹಿತ ಶಾಹಿ ವರ್ಗ ಕ್ಕೆ ಇದು ನುಂಗಲಾರದ ತುತ್ತಾಯಿತು.

ಈ ಶರಣ ಚಳುವಳಿ ಬಗ್ಗು ಬಡಿಲು ಕಾಯುತಿದ್ದ . ಕೆಳವರ್ಗದ ಲ್ಲಿ ಹುಟ್ಟಿದ ಹರಳಯ್ಯ ಮತ್ತು ಬ್ರಾಹ್ಮಣರಾಗಿ ಹುಟ್ಟಿದ ಮಧುವರಸರು ಲಿಂಗ ದೀಕ್ಷೆ ಪಡೆದು ಲಿಂಗಾಯತರ‍್ಮ ದೀಕ್ಷೆ ಪಡೆದುಕೊಂಡು ಲಿಂಗಾಯತರಾಗಿ ತಮ್ಮ ಮಕ್ಕಳಿಗೆ ಕಲ್ಯಾಣ ಮಹೋತ್ಸವ ಆಚರಿಸಿಕೊಂಡರು. ತಮ್ಮ ಅಸ್ತಿತ್ವದ ಉಳಿವಿಗಾಗಿ ಕಾದು ಕುಳಿತಿದ್ದ ಪುರೋಹಿತ ಶಾಹಿ ವರ್ಗ.ಇದನ್ನು ಅಂರ್ಜಾತಿ ವಿವಾಹ ಎಂದು ಗುಲ್ಲೆಬ್ಬಿಸಿತು

ಪರಿಣಾಮ ಬಸವಣ್ಣನವರನ್ನು ಗಡಿ ಪಾರು ಮಾಡಲಾಯಿತು. ಮಧುವರಸ ಹರಳಯ್ಯ ದಂಪತಿಗಳಿಗೆ ಎಳೆಹೊಟ್ಟೆ ಶಿಕ್ಷೆ ವಿಧಿಸಲಾಯಿತು.ಶರಣರ ಅನುಭವದ ನುಡಿಗಳಾದ ವಚನ ರಾಶಿ ಸುಟ್ಟು ಕರಕಲಾಯಿತು. ಮಡಿವಾಳಮಾಚಯ್ಯಅಕ್ಕನಾಗಮ್ಮಚನ್ನಬಸವಣ್ಣನವರ ನೇತೃತ್ವದಲ್ಲಿ ಎಚ್ಚೆತ್ತ ಶರಣರು ಅಳಿದುಳಿದ ವಚನ ರಾಶಿಯನ್ನು ಕಟ್ಟಿಕೊಂಡು ವೀರ ಗಚ್ಚೆ ಹಾಕಿಕೊಂಡು ಕೈಯಲ್ಲಿ ಕತ್ತಿ ಹಿಡಿದುಕೊಂಡು ಸೈನ್ಯದ ಜೊತೆಗೆ ಕಾದಾಡುತ್ತಾ ಹುಬ್ಬಳ್ಳಿ ಮರ‍್ಗವಾಗಿ ಉಳಿವಿ ತಲುಪಿ ಶರಣರ ವಚನಗಳನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದರು. ಶರಣರ ಅನುಭವ ಅನುಭಾವದ ಆಧ್ಯಾತ್ಮಿಕ ಸಂಜೀವಿನಿ ನುಡಿಗಳಾದ ವಚನ ಸಾಹಿತ್ಯ ರಕ್ಷಣೆಗೆ ಸಾವಿರಾರು ಶರಣರ ತ್ಯಾಗ ಬಲಿದಾನಗಳಿಂದ ಉಳಿದಿದೆ ಎಂದು ಎಷ್ಟೋ ಜನರಿಗೆ ತಿಳಿಯದಿರುವುದು ದುರಂತವೇ

ಸರಿ.ಈಗ ನಮ್ಮ ಕೈಯಲ್ಲಿ ಇರುವ ವಚನ ಸಾಹಿತ್ಯವನ್ನು ನಾವೂ ಸಹ ಓದಿ ನಮ್ಮ ಸಹೋದರ ಸಹೋದರಿಯರಿಗೆ ಮುಟ್ಟಿಸುವ ಮಹತ್ವದ ಜವಬ್ದಾರಿ ನಮ್ಮ ಮೇಲೆ ಇದೆ. ಇಂಥಹ ಜವಾಬ್ದಾರಿ ಪ್ರಾಮಾಣಿಕವಾಗಿ ರಚಿಸಿದ ವಚನ ಸಾಹಿತ್ಯ ರಕ್ಷಣೆಗೆ ತಮ್ಮ ಜೀವವನ್ನೇ ಮುಡುಪಿಟ್ಟ ಶರಣರನ್ನು ಸ್ಮರಿಸಿಕೊಂಡು ಮಹಾನವಮಿ ಹಾಗೂ ವಚನ ವಿಜಯೋತ್ಸವ ಆಚರಿಸೋಣ. ಮತ್ತು ರಾಷ್ಟ್ರೀಯ ಬಸವ ದಳ ಕಲ್ಯಾಣ ಕ್ರಾಂತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವವುದನ್ನು ಮೆಚ್ಚುಗೆ ವ್ಯಕ್ತ ಪಡಿಸಿದರು.

ನಗರದಲ್ಲಿ 9 ದಿನಗಳಕಾಲ ಶರಣರ ಮನೆಯಲ್ಲಿ ಶರಣರ ಮನ ಮುಟ್ಟುವ ಹಾಗೆ 12 ಶತಮಾನದಲ್ಲಿ ನಡೆದ (ಕಲ್ಯಾಣ ಕ್ರಾಂತಿ) ಕುಹಕಿಗಳ ಕುತಂತ್ರಕ್ಕೆ ಬಲಿಯಾದ ಶರಣ ಶರಣಿಯರ ನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮಜರುಗಿತು. ಇಂದು ಶನಿವಾರ ಬಸವ ಮಂಟಪದಲ್ಲಿ ಹತ್ತನೇ ದಿನ ಹರಳಯ್ಯ ತಂದೆ, ಕಲ್ಯಾಣಮ್ಮತಾಯಿಲಾವಣ್ಯತಾಯಿ,ಮದುವರಸರು,ಶೀಲವಂತ ಶರಣರ ಮತ್ತು ಕಲ್ಯಾಣ ಕ್ರಾಂತಿಯಲ್ಲಿ ವಿಜಯ ಸಾಧಿಸಿದ ಶರಣ ಚೇತನಗಳ ಕುರಿತು ಪೂಜೆ, ಪ್ರಾರ್ಥನೆ ಮತ್ತು ಅನುಭಾವ ನೆರವೇರಿತು. ಧ್ವಜಾರೋಹಣ ,ಕಾರ್ಯಕ್ರಮ ಹೆಚ್ ಮಲ್ಲಿಕಾರ್ಜುನ ನೆರವೇರಿಸಿದರು, ಪ್ರಾಸ್ತಾವಿಕ ವಾಗಿ ಗೌರವ ಅಧ್ಯಕ್ಷ ಕೆ.ಪಂಪಣ್ಣ ಮಾತನಾಡಿದರು, ಕಾರ್ಯಕ್ರಮ ದ ಅಧ್ಯಕ್ಷತೆ ದಿಲೀಪ್ ಕುಮಾರ್ ವಂದಾಲರವರು ವಹಿಸಿದ್ದರು, ಸ್ವಾಗತ ಬಸವ ಜ್ಯೋತಿ,ನಿರೂಪಣೆ ವೀರೇಶ ಅಸರಡ್ಡಿ,ಶರಣು ಸಮರ್ಪಣೆ ವಿನಯ ಕುಮಾರ್ ಅಂಗಡಿ, ಬಸವ ಕೇಂದ್ರದ ಅಧ್ಯಕ್ಷರು ಕೆ ಬಸವರಾಜ, ಕೆ ವೀರೇಶಪ್ಪ, ಚನ್ನಬಸಮ್ಮ ಕಂಪ್ಲಿ, ರಾಯಮ್ಮ ಕೆ, ಮಂಜುನಾಥ ದೇವರಮನಿ, ನಾಗರಾಜ ಅಂಗಡಿ, ಶೇಖರಗೌಡ. ತಲೇಕಾನ ,ಹೆಚ್.ಲಷ್ಕ್ಮಿ ಮತ್ತು ರಾಷ್ಟ್ರೀಯ ಬಸವ ದಳದ ಸದಸ್ಯರು ಮತ್ತು ಬಸವ ಭಕ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.



About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.