Breaking News

ಗಂಡಬೊಮ್ಮನಹಳ್ಳಿ ಸೆಲ್ಫಿ ತೆಗೆಯಲು ಹೋಗಿ ಯುವಕ ಸಾವು..!

Gandabommanahalli, a young man died while taking a selfie..!

ಜಾಹೀರಾತು

ಗುಡೇಕೋಟೆ: ಸೆಲ್ಫಿ ಫೋಟೋ ತೆಗೆಯಲು ಹೋಗಿ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಮೃತ ವ್ಯಕ್ತಿಯನ್ನು ಕೂಡ್ಲಿಗಿ ತಾಲೂಕಿನ ಕೆ.ದಿಬ್ಬದಹಳ್ಳಿ ಗ್ರಾಮದ ಗ್ರಾ ಪಂ ಸದಸ್ಯ ಪಾಲಯ್ಯ ನವರ ಮಗ ಚೇತನ್ ಕುಮಾರ್ (21) ಎಂದು ತಿಳಿದು ಬಂದಿದೆ. ಈತ ತನ್ನ ಕುಟುಂಬದವರ ಜೊತೆ ಕೋಡಿ ಬಿದ್ದ ಕೆರೆಯನ್ನು ನೋಡಲು ತೆರಳಿದಾಗ ಇಬ್ಬರು ಸ್ನೇಹಿತರೊಂದಿಗೆ ತುಂಬಿದ ಕೆರೆ ಕೋಡಿ ಬಳಿ ಫೋಟೋ ತೆಗೆದುಕೊಳ್ಳಲು ಹೋದಾಗ ಅಕಸ್ಮಾತ್ ಕಾಲು ಜಾರಿ ಚೇತನ್ ಕುಮಾರ್ ಕೆಳಗಡೆ ಬಿದ್ದಿದ್ದಾನೆ. ಆತನನ್ನು ಉಳಿಸಿಕೊಳ್ಳಲು ಅಲ್ಲಿರುವವರು ಪ್ರಯತ್ನ ಮಾಡಿದರೂ ಸಹ ಏನು ಪ್ರಯೋಜನವಾಗಿಲ್ಲ ನೀರಿನ ರಭಸಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

ಸೆಲ್ಫಿ ಹುಚ್ಚಿಗೆ ಯುವ ಜನತೆ ಬದುಕು ಬಲಿ!?

ಇತ್ತೀಚೆಗೆ ಸೆಲ್ಫಿ ಹಾಗೂ ಇನ್ಸ್ಟಾಗ್ರಾಮ್ ವಿಡಿಯೋಗಾಗಿ ಯುವಜನತೆ ಹುಚ್ಚಾಟ ಆಡುವ ಘಟನೆ ಪ್ರತಿದಿನ ಒಂದಲ್ಲ ಒಂದು ಕಡೆ ದಾಖಲಾಗುತ್ತಿದೆ. ಈ ಬಗ್ಗೆ ಪೋಷಕರು ಹಾಗೂ ಜನತೆ ಎಚ್ಚರಿಕೆ ವಹಿಸಬೇಕಿದೆ. ಒಂದು ಸೆಲ್ಫಿ ಅಥವಾ ಒಂದು ಇನ್ಸ್ಟಾಗ್ರಾಮ್ ವಿಡಿಯೋ ಬದುಕಲ್ಲ. ಹಾಗಾಗಿ ಈ ಬಗ್ಗೆ ಪೋಷಕರು, ಪೊಲೀಸ್ ಇಲಾಖೆ ಹಾಗೂ ಇತರ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಬೇಕಿದೆ. ಕೆರೆ ಕಟ್ಟೆ ಹಳ್ಳ ಪ್ರದೇಶಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ ಸೆಲ್ಫಿ ತೆಗೆಯುವ ಹುಚ್ಚು ಇತ್ತೀಚಿಗೆ ಇನ್ನಷ್ಟು ಹೆಚ್ಚಾಗುತ್ತಿದ್ದು, ಇದರಿಂದಾಗಿ ಜೀವ ಜೀವನ ಎರಡು ಹಾಳಾಗುತ್ತಿದೆ. ಇದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಶಾಸಕರು ಮುಖಂಡರು ಬೇಟಿ ಸಾಂತ್ವನ.

ವಿಷಯ ತಿಳಿಯುತ್ತಿದ್ದಂತೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ರವರು ರಾತ್ರಿ ಕೆ.ದಿಬ್ಬದಹಳ್ಳಿ ಗ್ರಾಮಕ್ಕೆ ಮೃತ ಕುಟುಂಬಕ್ಕೆ ದೈರ್ಯ ತುಂಬಿ ಸಾಂತ್ವನ ಹೇಳಿ ಸಮಾಧಾನ ಹೇಳಿ ಈ ಕೂಡಲೇ ಸರ್ಕಾರದಿಂದ ಬರುವ ಪರಿಹಾರವನ್ನು ಒದಗಿಸಿ ಕೊಡುವುದಾಗಿ ತಿಳಿಸಿದರು.ಇತ್ತೀಚೆಗೆ ಕುಮತಿ ಗ್ರಾಮದಲ್ಲಿ ತುಂಬಿದ ಚಿನ್ನಹಗರಿ ಹಳ್ಳದಲ್ಲಿ ಈಜಲು ಹೋಗಿ 3 ಮಕ್ಕಳು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಮನಸ್ಸಿಗೆ ತುಂಬಾ ದುಃಖವಾಗಿದೆ ಎಂದರು.ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು,ಕೆರೆ, ಕಟ್ಟೆ, ಹಳ್ಳಗಳು ಮೈತುಂಬಿ ಹರಿಯುತ್ತಿರುವುದರಿಂದ ಸಾರ್ವಜನಿಕರು,ತಮ್ಮ ತಮ್ಮ ಮಕ್ಕಳನ್ನು, ಹೆಣ್ಣುಮಕ್ಕಳು ಬಟ್ಟೆ ಒಗೆಯಲು, ಇತರೆ ಕೆಲಸಗಳಿಗೆ ಹೋಗುವ ಮುನ್ನ ಮುನ್ನೆಚ್ಚರಿಕೆಯಿಂದರಬೇಕು.ಹಾಗೆ ಹರಿಯುವ ನೀರಿನ ಸಮೀಪಕ್ಕೆ ಯಾರು ಸಹ ಹೋಗಬಾರದು ಎಂದು ತಾಲೂಕಿನ ಜನತೆಗೆ ಶಾಸಕರು ಮನವಿ ಮಾಡಿದರು.

ಈ ವೇಳೆ ಗ್ರಾ ಪಂ ಅಧ್ಯಕ್ಷೆ ಓಬಮ್ಮ, ಉಪಾಧ್ಯಕ್ಷ ಆರ್.ಬಸವರಾಜ್,ಮಾಜಿ ತಾಪಂ ಸದಸ್ಯ ರೈಲ್ವೇ ವೆಂಕಟೇಶ್,ಸಣ್ಣ ಚೆನ್ನಪ್ಪ, ದೊಡ್ಡ ಚೆನ್ನಪ್ಪ, ವಕೀಲ ಪಾಪಣ್ಣ,ಗುಂಡಮುಣಗು ಮಂಜಣ್ಣ, ಪೋಲೀಸ್ ಆಂಜನೇಯ,ನಡುವಲಹಳ್ಳಿ ಕುಮಾರಸ್ವಾಮಿ, ಸ್ಥಳಿಯ ಗ್ರಾ ಪಂ ಎಲ್ಲಾ ಸದಸ್ಯರು, ಊರಿನ ಮುಖಂಡರು, ಉಪಸ್ಥಿತರಿದ್ದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.