Breaking News

ಆರಗಜ್ಞಾನೇಂದ್ರಯವರ ಹೇಳಿಕೆಯನ್ನ ಕಾಂಗ್ರೆಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಕ್ಷಮೆ ಕೇಳಬೇಕು- ವಿಶ್ವನಾಥ್ ಮಾಲಿ ಪಾಟೀಲ್

Congress strongly condemns Araga Gyanendra's statement and should apologize - Vishwanath Mali Patil








ಗಂಗಾವತಿ: ಕರ್ನಾಟಕ ಕಂಡ ಧೀಮಂತ ನಾಯಕರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಅರಣ್ಯ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಧ್ಯಕ್ಷರಾದ ಈಶ್ವರ್ ಖಂಡ್ರೆ ಅವರ ಮೈ ಬಣ್ಣದ ಮತ್ತು ಅವರ ಶೈಲಿಯ ಬಗ್ಗೆ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ ಅವರ ಹೇಳಿಕೆ ಮಹಾ ಮಾನವತಾವಾದಿ ಬಸವಣ್ಣನವರ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿದೆ, ಇಲ್ಲಿಯವರೆಗೂ ಬಿಜೆಪಿಯ ಯಾವ ನಾಯಕರು ಅವರ ಹೇಳಿಕೆಯನ್ನು ವಿರೋಧಿಸಿಲ್ಲ ಬಿಜೆಪಿಯವರ ಆಂತರ್ಯದೊಳಗೆ ಅಡಗಿರುವ ಶೋಷಿತರ ಬಗೆಗಿನ ಅಸಹನೆಯ ಮಾತನ್ನು ಪ್ರತಿಬಿಂಬಿಸುತ್ತಿದೆ. ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ಧಿಯೇ ಹೊರತು ಉತ್ತರ ಕರ್ನಾಟಕ ಜನರಲ್ಲ. ದೇಶದ ಹಿರಿಯ ದಲಿತ ನಾಯಕರಾದ ಖರ್ಗೆ ಮತ್ತು ವೀರಶೈವ ಸಮಾಜದ ನಾಯಕರಾದ ಖಂಡ್ರೆ ಅವರಿಗೆ ಮಾಡಿದ ಅವಮಾನವಲ್ಲ ಬಿಸಿಲು ನಾಡಿನ ಕಲ್ಯಾಣ ಕರ್ನಾಟಕ ಭಾಗದ ಸಮಸ್ತ ಜನತೆಗೆ ಮಾಡಿದ ಅವಮಾನ ಆರಗ ಜ್ಞಾನೇಂದ್ರಯವರ ಹೇಳಿಕೆಯನ್ನ ಕಾಂಗ್ರೆಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಅವರು ಕಲ್ಯಾಣ ಕರ್ನಾಟಕ ಆಗದ ಜನರ ಕ್ಷಮೆ ಕೇಳಬೇಕು ಇಲ್ಲವಾದರೆ ನಮ್ಮ ನಾಯಕರೊಂದಿಗೆ ಚರ್ಚಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವಿಶ್ವನಾಥ್ ಮಾಲಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಜಾಹೀರಾತು

About Mallikarjun

Check Also

ಕುಕನೂರು ವ್ಯಾಪ್ತಿಯಲ್ಲಿ ರವಿವಾರ ವಿದ್ಯುತ್ ವ್ಯತಯ,,

Power outage in Kukanur area on Sunday. ಕುಕನೂರು : ದಿನಾಂಕ: 22.12.2024 ರ ಭಾನುವಾರ ದಂದು ಕುಕನೂರ …

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.