Breaking News

ತುಂಗಭದ್ರಾತುಂಗಭದ್ರಾ ಎಡದಂಡೆ 69 ನೇ ಮೈಲಿನ ಕೆಳಭಾಗದ ಉಪ ಕಾಲುವೆಗಳಲ್ಲಿ ಸಮರ್ಪಕ ನೀರಿನ ಹರಿವಿನ ಬಗ್ಗೆ ಕ್ರಮ ಕೈಗೊಳ್ಳಿ: ಸಚಿವ ಎನ್‌ ಎಸ್‌ ಭೋಸರಾಜು

Take action on adequate water flow in sub-canals downstream of TungabhadraTungabhadra left bank 69th mile: Minister NS Bhosaraju

ಜಾಹೀರಾತು


ಬೆಂಗಳೂರು ಅ. 09 : ತುಂಗಭದ್ರಾ ಎಡದಂಡೆ 69 ನೇ ಮೈಲಿನ ಕೆಳಭಾಗದ ಉಪ ಕಾಲುವೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಕಾರಣ, ಸಿರವಾರ ಹಾಗೂ ರಾಯಚೂರು ವಿಭಾಗದ ರೈತರಿಗೆ ಆಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಸೂಚಿಸಿದರು.
ಇಂದು ಕರ್ನಾಟಕ ರಾಜ್ಯ ನೀರಾವರಿ ನಿಗಮದ ಕಚೇರಿಯಲ್ಲಿ ಮಾನ್ಯ ಮಾನ್ವಿ ಶಾಸಕರಾದ ಹಂಪಯ್ಯ ನಾಯಕ, ಕೆಎನ್‌ಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರು ರಾಜೇಶ್‌ ಅಮ್ಮಿನಬಾವಿ, ಮುಖ್ಯ ಅಭಿಯಂತರರು ಹಾಗೂ ಅಧಿಕಾರಿಗಳೊಂದಿಗೆ ವಿಸ್ತ್ರುತ ಸಭೆ ನಡೆಸಿ ನೀರಿನ ಹರಿವಿನ ವಿಷಯಗಳ ಬಗ್ಗೆ ಚರ್ಚಿಸಿದರು.
ಸಿರವಾರ ಹಾಗೂ ರಾಯಚೂರು ವಿಭಾಗದಲ್ಲಿರುವ ತುಂಗಭದ್ರಾ ಎಡದಂಡೆ ಕಾಲುವೆ 69 ನೇ ಮೈಲಿನ ಉಪಕಾಲುವೆಗಳಲ್ಲಿ ನೀರಿನ ಹರಿವು ಬಹಳ ಕಡಿಮೆಯಾಗಿದೆ. ಇದರಿಂದ ಈ ಭಾಗದ ರೈತರಿಗೆ ಬಹಳ ಅನಾನುಕೂಲವಾಗುತ್ತಿದೆ. ಸರಿಯಾದ ಮಟ್ಟದಲ್ಲಿ ಹಾಗೂ ಪ್ರಮಾಣದಲ್ಲಿ ನೀರು ಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ. ಇದರಿಂದ ಈ ಭಾಗದ ರೈತರು ತನ್ನ ಕೃಷಿ ಚಟುವಟಿಕೆಯನ್ನು ನಡೆಸಲು ಸಾಧ್ಯವಾಗಲಿದೆ ಎಂದು ಸಚಿವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಅಧಿಕಾರಿಗಳು ನಿಗದಿತ ನೀರಿನ ಹರಿವಿನ ಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಉಪಕಾಲುವೆಗಳಲ್ಲಿ ನೀರು ಹರಿಸಲು ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆಯೂ ಇದೇ ಸಂಧರ್ಭದಲ್ಲಿ ಸಚಿವರು ಸೂಚಿಸಿದರು.

About Mallikarjun

Check Also

ಹಿರೇ ಬೇರಿಗೆಯಲ್ಲಿ ಸ್ಮಾರಕಗಳ ಹೊಸ ಶೋಧ:

New discovery of monuments at Hire Berege: ಸಿಂಧನೂರು,ಅ20: ಭಾರತ ದೇಶದ ಅನೇಕ ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.