Breaking News

ಪಟ್ಟಣ ಪಂಚಾಯಿತಿಗೆ ಸೇರಿದ ಸಿ ಎ ಸೈಟ್ ಗಳು ಅಕ್ರಮ ಒತ್ತುವರಿ ಸಾರ್ವಜನಿಕರು ,ಆರ್ ಟಿ ಐ ಕಾರ್ಯಕರ್ತರಿಂದ ತನಿಖೆಗ ಆಗ್ರಹ

CA sites belonging to town panchayat are illegally occupied by public, RTI activists demand investigation

ಜಾಹೀರಾತು

ಕೊಟ್ಟೂರು: ಪಟ್ಟಣ ಪಂಚಾಯಿತಿ ವತಿಯಿಂದ ಪ್ರತಿವರ್ಷ ಪ.ಜಾ./ಪ.ಪಂ. ಸಮುದಾಯದ ಬಡವಿದ್ಯಾರ್ಥಿಗಳಿಗೆ ನೀಡಬಹುದಾದ ವಿದ್ಯಾರ್ಥಿವೇತನವನ್ನು ಮತ್ತು ಸರ್ಕಾರದ ಹಲವು ಯೋಜನೆಗಳು  ಸಮರ್ಪಕವಾಗಿ ನಿರ್ವಹಿಸದೇ ದಿವ್ಯನಿರ್ಲಕ್ಷ್ಯ ವಹಿಸಿದ್ದಾರೆ. ಇವೆಲ್ಲಾ ಯೋಜನೆಗಳ ಬಗ್ಗೆ ಸೂಕ್ತವಾಗಿ ತನಿಖೆ ನಡೆಸಿಲು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈಗ ಮುಖ್ಯಾಧಿಕಾರಿಯಾಗಿರುವ ನಸುರುಲ್ಲಾ ಅವರು ಜನಪ್ರತಿನಿಧಿಗಳನ್ನು ಗಂಟೆಗಟ್ಟಲೇ ತಮ್ಮ ಕಛೇರಿಯ ಒಳಗೆ ಕುಳ್ಳಿರಿಸಿಕೊಂಡು ಕಾಲಹರಣ ಮಾಡುತ್ತಾ, ಜನರ ಸಮಸ್ಯೆಗಳನ್ನು ಕೇಳುವ ಗೋಜಿಗೇ ಹೋಗುತ್ತಿಲ್ಲ. ಹೀಗೇ ಮುಂದುವರಿದರೆ ಪಟ್ಟಣದ ಸಾರ್ವಜನಿಕರ ಮೂಲಭೂತ ಸಮಸ್ಯೆಗಳನ್ನು ಕೇಳುವವರು ಯಾರು? ಎಂಬ ಪ್ರಶ್ನೆ ಬಂದಿದೆ ಎಂದರು.

ಕೊಟ್ಟೂರು ವಾಣಿಜ್ಯ ಕೇಂದ್ರವಾಗಿದ್ದು, ಇತ್ತೀಚೆಗೆ ಅತೀ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ಅಲ್ಲದೇ ಬಹಳಷ್ಟು ಕೃಷಿ ಜಮೀನುಗಳು ಕೃಷಿಯೇತರ ಜಮೀನು, ವಾಣಿಜ್ಯ, ವಸತಿ ನಿವೇಶನಗಳಾಗಿ ಪರಿವರ್ತನೆಯಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಸರ್ಕಾರದ ನಿಯಮಾವಳಿಗಳು ಸರಿಯಾಗಿ ಪಾಲನೆಯಾಗುತ್ತಿಲ್ಲ. ನಿವೇಶನದ ವಿನ್ಯಾಸದಲ್ಲಿ ಸರಿಯಾದ ರಸ್ತೆ ಸಂಪರ್ಕ ಇರುವುದಿಲ್ಲ, ಅಕ್ರಮ ರಸ್ತೆ ಒತ್ತುವರಿ ಅಕ್ರಮ ವಾಣಿಜ್ಯ ಕಟ್ಟಡಗಳ ನಿರ್ಮಾಣ, ಸಂಪೂರ್ಣ ಅಭಿವೃದ್ಧಿ ಇಲ್ಲದೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನಿಯಮಾವಳಿಯನ್ನು  ಉಲ್ಲಂಘನೆ ಮಾಡಿ ಡೋರ್ ನಂ., ಫಾರಂ ನಂ. ೩ ನೀಡಿರುವುದರ ಹಿಂದೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಸಿ.ಎ. ಸೈಟ್‌ಗಳಲ್ಲಿ ಅಕ್ರಮ ಕಬ್ಜಾ ನಡೆದಿದೆ ಎಂದು ಸ್ಥಳೀಯರು, ಸಂಘಟನೆಯವರಿಗೆ ಮತ್ತು ಮೇಲಾಧಿಕಾರಿಗಳಿಗೆ ದೂರು ನೀಡಿದ್ದೂರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರಿಗಳು ಬೇಲಿಯೇ ಎದ್ದು ಹೊಲ ಮೇದಂತಾಗಿದೆ

ಮೇಲಾಧಿಕಾರಿಗಳಿಗೆ ಕಣ್ಣಿಗೆ ಕಂಡೂ ಕಾಣದಂತೆ ಕುಳಿತಿರುವುದರ ಹಿಂದೆ ಬಲವಾದ ಕಾರಣವಂತೂ ಇದ್ದೇ ಇದೆ ಎಂದು ಜನಸಾಮಾನ್ಯರಿಗೂ ತಿಳಿಯುತ್ತದೆ. ಕೂಡಲೇ ಮೇಲಾಧಿಕಾರಿಗಳು ಪಟ್ಟಣ ಪಂಚಾಯಿತಿಯ ಎಲ್ಲ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆದರೆ ಅಕ್ರಮಗಳೆಲ್ಲಾ ಹೊರಗೆ ಬರುವುದು ನಿಶ್ಚಿತ ಎಂದು ಎನ್ ಎಫ್ ಐ ಡಬ್ಲ್ಯೂ  ರೇಣುಕಮ್ಮ , ಆರ್ ಟಿ ಐ ಕಾರ್ಯಕರ್ತ ಅಂಜನಿ, ಚಂದ್ರಶೇಖರ್ ,ಅವರು ಒತ್ತಾಯಿಸಿದರು.

About Mallikarjun

Check Also

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಸ್ವಾಗತಾರ್ಹ: ಸಚಿವ ಬೋಸರಾಜು ಹರ್ಷ

Naming after Maharshi Valmiki for Raichur University is welcome: Minister Bosaraju Harsha ಬೆಂಗಳೂರು ಅಕ್ಟೋಬರ್‌ 17: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.