Breaking News

ರಾಜಿ ರಹಿತ ಮನೋಭಾವದ ಉಗ್ರಪ್ಪ ಶೋಷಿತರ ಧ್ವನಿ-ಮುಖ್ಯಮಂತ್ರಿ ಸಿದ್ದರಾಮಯ್ಯ

Chief Minister Siddaramaiah is the voice of the oppressed, an uncompromising extremist

ಜಾಹೀರಾತು

ಸಮರ್ಥ ಜನನಾಯಕ ವಿ.ಎಸ್.ಉಗ್ರಪ್ಪ” ಪುಸ್ತಕ ಬಿಡುಗಡೆ

ಬೆಂಗಳೂರು ,ಅಕ್ಟೋಬರ್ 06: ಸಂವಿಧಾನ,ಕಾನೂನಿನ ಸ್ಪಷ್ಟ ಮತ್ತು ಆಳವಾದ ಜ್ಞಾನ ಹೊಂದಿರುವ ವಿ.ಎಸ್.ಉಗ್ರಪ್ಪ ವಿಧಾನ ಪರಿಷತ್ತು ಹಾಗೂ ಲೋಕಸಭೆಯಲ್ಲಿ ಶೋಷಿತರ ಧ್ವನಿಯಾಗಿ ಸಮರ್ಥವಾಗಿ ಕಾರ್ಯನಿರ್ವಸಿ,ಸಂವಿಧಾನದ ಆಶಯಗಳ ಸಾಕಾರಕ್ಕೆ ಶ್ರಮಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುಲ್ಬರ್ಗಾ ವಿವಿ ಕಲಬುರ್ಗಿ, ಮಾನ್ವಿಯ ಬೈಲಮರ್ಚೇಡ ಗ್ರಾಮದ ಅಮೂಲ್ಯ ಪ್ರಕಾಶನವು ಭಾರತ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಸಮರ್ಥ ನಾಯಕ ವಿ.ಎಸ್.ಉಗ್ರಪ್ಪ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು,

ಚಿಕ್ಕವಯಸ್ಸಿನಲ್ಲೇ ರಾಜಕೀಯ ಪ್ರವೇಶಿಸಿದ ವಿ.ಎಸ್. ಉಗ್ರಪ್ಪ, ವಿದ್ಯಾರ್ಥಿ ದೆಸೆಯಲ್ಲಿಯೇ ಜೈಲುವಾಸ ಅನುಭವಿಸಿದರು.ವಿಧಾನಪರಿಷತ್ ಹಾಗೂ ಲೋಕಸಭಾ ಸದಸ್ಯರಾಗಿ ಉಗ್ರಪ್ಪನವರು ಧ್ವನಿ ಇಲ್ಲದವರ ಧ್ವನಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ,ಸಂವಿಧಾನ ಆಶಯಗಳ ಸಾಕಾರಕ್ಕೆ ಶ್ರಮಿಸಿದ್ದಾರೆ.ಜಯಪ್ರಕಾಶ್ ನಾರಾಯಣರ ಸಂಪೂರ್ಣ ಕ್ರಾಂತಿಯ ಪ್ರಭಾವಕ್ಕೊಳಗಾಗಿ ರಾಜಕಾರಣಕ್ಕೆ ಧುಮುಕಿದವರು.ಕಾನೂನು ತಜ್ಞರಾಗಿರುವ ಉಗ್ರಪ್ಪ ಪಕ್ಷದ ಅನೇಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು,ಕೊಡುಗೆ ನೀಡುತ್ತಿದ್ದಾರೆ. ತಾವು ನಂಬಿರುವ ತತ್ವ,ಸಿದ್ಧಾಂತಗಳನ್ನು ಅವರು ಎಂದಿಗೂ ಬಿಟ್ಟು ಕೊಟ್ಟಿಲ್ಲ.ರಾಜಿ ರಹಿತ ಮನೋಭಾವ ಅವರದ್ದಾಗಿದೆ.ರಾಜಕೀಯದ ಸೋಲು ,ಗೆಲುವುಗಳನ್ನು ಸಮಚಿತ್ತದಿಂದ ಅವರು ಸ್ವೀಕರಿಸಿದ್ದಾರೆ.ಅವರಿಗೆ ಇನ್ನೂ ಸಾಕಷ್ಟು ರಾಜಕೀಯ ಸ್ಥಾನಮಾನಗಳು ಸಿಗಬೇಕಾಗಿದೆ.ಅಂತಹ ಅವಕಾಶಗಳು ಸಿಗಲಿ ಎಂದು ಆಶಿಸುತ್ತೇನೆ ಹಾಗೂ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ .ಪಿಹೆಚ್‌ಡಿ ಪ್ರಬಂಧವಾಗಿರುವ “ಸಮರ್ಥ ಜನನಾಯಕ ವಿ.ಎಸ್ .ಉಗ್ರಪ್ಪ” ಕೃತಿಯು ಯುವಕರಿಗೆ ಮಾರ್ಗದರ್ಶನ ನೀಡಲಿದೆ ಎಂದರು.

ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಮಾತನಾಡಿ,ವಿ.ಎಸ್.ಉಗ್ರಪ್ಪ ಒಬ್ಬ ಸಮಯಪ್ರಜ್ಞೆಯ ರಾಜಕಾರಣಿ, ರಾಜಕಾರಣದಲ್ಲಿ ಮಾತಿನ ಗುಂಡುಗಳನ್ನು ವಿಧಾನಮಂಡಲದ ಒಳಗೆ ಮತ್ತು ಹೊರಗೆ ಸಾಕಷ್ಟು ಬಾರಿ ಅವರು ಸಿಡಿಸಿದ್ದಾರೆ.ಪಕ್ಷದ ಯಶಸ್ಸಿಗೆ ಅವರು ಬಹಳಷ್ಟು ಶ್ರಮಿಸಿದ್ದಾರೆ.

ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ,ಪರಿಶಿಷ್ಟ ಪಂಗಡದ ಅಪರೂಪದ ರಾಜಕಾರಣಿ ವಿ.ಎಸ್‌.ಉಗ್ರಪ್ಪನವರು ಸಮಾಜ,ಮಹಿಳೆ,ಶಿಕ್ಷಣ ಮೊದಲಾದ ವಿಚಾರಗಳ ಬಗ್ಗೆ ಹೊಂದಿರುವ ನಿಲುವುಗಳ ಕುರಿತ ಕೃತಿ ಪಿಹೆಚ್‌ಡಿ ಪ್ರಬಂಧವಾಗಿರುವುದು ಸಂತಸದ ಸಂಗತಿ,ಅನ್ಯಾಯವನ್ನು ಪ್ರತಿರೋಧಿಸುವ ವ್ಯಕ್ತಿತ್ವ ಉಗ್ರಪ್ಪ ಅವರದಾಗಿದೆ,ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಕೂಡ ಅನುಭವಿಸಿದ ರಾಜಕಾರಣಿಯಾಗಿದ್ದಾರೆ ಎಂದರು.

ಮಾಜಿ ಸಚಿವ ಪಿ‌.ಜಿ‌.ಆರ್.ಸಿಂಧ್ಯಾ ಮಾತನಾಡಿ, ದೇವರಾಜ ಅರಸು ಅವರಂತೆಯೇ ಸಾಮಾಜಿಕ ಕಾಳಜಿ ಹೊಂದಿರುವ ಸಿದ್ದರಾಮಯ್ಯ ಅವರ ವಿರುದ್ಧ ಕೂಡ ವ್ಯವಸ್ಥಿತ ರಾಜಕೀಯ ಪಿತೂರಿ ನಡೆಯುತ್ತಿದೆ,ಅವರು ಧೃತಿಗೆಡಬಾರದು ಎಂದರು.ಚಂದ್ರಶೇಖರ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಾಲ್ಮೀಕಿ ನಾಯಕ ಜನಾಂಗವನ್ನು ಎಸ್.ಟಿ. ವರ್ಗಕ್ಕೆ ಸೇರಿಸಿದ ಶ್ರೇಯಸ್ಸು ಹೆಚ್.ಡಿ.ದೇವೇಗೌಡರಿಗೆ ಹಾಗೂ ವಿ.ಎಸ್.ಉಗ್ರಪ್ಪ ಅವರಿಗೆ ಸಲ್ಲಬೇಕು ಎಂದು ಅವರ ಪ್ರಯತ್ನ ಸ್ಮರಿಸಿದರು.

ನ್ಯಾ.ಹೆಚ್.ಎನ್.ನಾಗಮೋಹನದಾಸ್ ಮಾತನಾಡಿ,ಜಗತ್ತಿನ ಯಾವ ಕ್ರಾಂತಿಗಳೂ ತರಲಾರದಷ್ಟು ಬದಲಾವಣೆಗಳನ್ನು ಪುಸ್ತಕಗಳು ತಂದಿವೆ.ಇಂದು ಹೊರಬಂದಿರುವ ಪುಸ್ತಕ ಬೆಳಕಿನ ದೀಪವಾಗಿ ಸಮಾಜವನ್ನು ಮುನ್ನಡೆಸಲಿ ಎಂದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ರಾಜಕೀಯ ಬದುಕಿನಲ್ಲಿ ಎಂದಿಗೂ ಭ್ರಷ್ಟಾಚಾರ ಮಾಡಬಾರದು ಎಂಬ ಧ್ಯೇಯವನ್ನು ಸಿದ್ಧಗಂಗಾ ಮಠದ ವಿದ್ಯಾರ್ಥಿಯಾಗಿ ಹಾಗೂ ವಕೀಲನಾಗಿ ರೂಢಿಸಿಕೊಂಡಿದ್ದೇನೆ.ತುರ್ತು ಪರಿಸ್ಥಿತಿ ಸಂದರ್ಭದ ಜೈಲು ವಾಸದಲ್ಲಿ ದೇಶದ ಅನೇಕ ಜನನಾಯಕರಿಂದ ಸಿಕ್ಕ ರಾಜಕೀಯ ತರಬೇತಿಯಿಂದಾಗಿ ಮೌಲ್ಯಾಧಾರಿತ ರಾಜಕೀಯ,ಕಾಳಜಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು ಎಂದು ನೆನಪುಗಳ ಮೆಲುಕು ಹಾಕಿದರು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ,ಹೆಚ್.ಎಂ.ರೇವಣ್ಣ,ವಿ.ಎಸ್.ಉಗ್ರಪ್ಪ,ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ,ಗುಲ್ಬರ್ಗ ವಿ.ವಿ.ಕುಲಪತಿ ಡಾ.ದಯಾನಂದ ಅಗಸರ್,ಪ್ರೊ.ಗೋಮತಿದೇವಿ,ಡಾ.ಗೂರು ಶ್ರೀರಾಮುಲು,ಡಾ.ಚಂದ್ರಕಾಂತ ಯಾತನೂರ,ಡಾ.ವಿರೇಶನಾಯಕ ಬೈಲಮರ್ಚೇಡ,ಡಾ.ಮಂಜುಳಾ ಉಗ್ರಪ್ಪ ,ವಾಲ್ಮೀಕಿ ಆತ್ಮಾನಂದ ಸ್ವಾಮೀಜಿ,ಕೊಪ್ಪಳದ ಚುಕ್ಕನಕಲ್ ರಾಮಣ್ಣ ಮತ್ತಿತರರು ವೇದಿಕೆಯಲ್ಲಿದ್ದರು.

ಸಮರ್ಥನಂ ಅಂಗವಿಕಲ ಸಂಸ್ಥೆಯ ವಿಶೇಷ ಚೇತನರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಭಾನುಮತಿ ನಿರೂಪಿಸಿದರು.

About Mallikarjun

Check Also

ವಿಶೇಷ ಚೇತನರಿಗೆ  ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ ಹೊಲಿಗೆ,  ಹಾಗೂ ಹೊಲಿಗೆ, ಬಡಗಿತನ, ಧೋಬಿ ವೃತ್ತಿಯ ಉಪಕರಣಗಳ ವಿತರಣೆ

Distribution of motorized three-wheelers and sewing, carpentry, and laundry tools to the specially-abled ಜಮಖಂಡಿ 05-01 …

Leave a Reply

Your email address will not be published. Required fields are marked *