Breaking News

ಮಾನ್ವಿ ಮತ್ತು ಸಿರವಾರ ಅಂದಾಜು 450 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ

Chief Minister laid foundation stones for various development works at an estimated cost of Rs 450 crores at Manvi and Sirwara

ಜಾಹೀರಾತು

ಮಾನ್ವಿ ಮತ್ತು ಸಿರವಾರ ಅಂದಾಜು 450 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ

ಮಾನ್ವಿ: ಪಟ್ಟಣದ ರಾಯಚೂರು ರಸ್ತೆಯಲ್ಲಿ ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ ಶಾಸಕ ಹಂಪಯ್ಯನಾಯಕರವರು ಅಂದಾಜು 450 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ನನ್ನಿಂದ ಭೂಮಿ ಪೂಜೆ ಮಾಡಿಸಿದ್ದಾರೆ ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾನ್ವಿ ತಾಲೂಕು ಹಾಗೂ ಸಿರವಾರ ತಾಲೂಕುಗಳಲ್ಲಿ 592 ಕಾಮಗಾರಿಗಳಿಗೆ 42 ಕೋಟಿ424 ಕೋಟಿ 46 ಲಕ್ಷ ಕಾಮಗಾರಿಗಳಿಗೆ ಶಂಕುಸ್ಥಾಪನೆ, 45 ಕಾಮಗಾರಿಗಳು 458 ಕೋಟಿ 42 ಲಕ್ಷ ಕಾಮಗಾರಿಗಳ ಉದ್ಘಾಟನೆ ಮಾಡಲಾಗಿದೆ ಈ ಭಾಗದಲ್ಲಿ ಆರ್ಥಿಕ ಅಭಿವೃದ್ದಿಗಾಗಿ ಸಿಂಧನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಿಂಧನೂರಿನಿAದ ಮಾನ್ವಿ ಹಾಗೂ ಮಾನ್ವಿಯಿಂದ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಲ್ಮಲ ವರೆಗೆ ಒಟ್ಟು 78 ಕಿ.ಮಿ. 1695 ಕೋಟಿ ಮೋತ್ತದಲ್ಲಿ 4ಪಥದ ರಸ್ತೆಯನ್ನು ನಿರ್ಮಾಣ ಮಾಡುವುದಕ್ಕೆ ಮಂಜೂರಾತಿ ನೀಡಿ ಇಂದು ನಾನು ಭೂಮಿ ಪೂಜೆ ಮಾಡಿ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಯನ್ನು ನಾನೇ ಉದ್ಘಾಟಿಸುತ್ತೇನೆ ನಮ್ಮ ಸರಕಾರ ಅಭಿವೃದ್ದಿ ಪರ ಬಡವರ ಪರವಾಗಿರುವ ಸರಕಾರವಾಗಿದ್ದು ರಾಜ್ಯದಲ್ಲಿನ ಬಿ.ಜೆ.ಪಿ. ಮತ್ತು ಜೆ.ಡಿಎಸ್ ಪಕ್ಷಗಳು ರಾಜ್ಯದಲ್ಲಿ ಗ್ಯಾರಂಟಿಗಳ ಜಾರಿಯಾದ ನಂತರ ರಾಜ್ಯ ಸರಕಾರದ ಖಜಾನೆ ಖಾಲಿಯಾಗಿ ದಿವಾಳಿಯಾಗುತ್ತದೆ ಎಂದು ಸುಳ್ಳು ಪ್ರಚಾರ ನಡೆಸುತ್ತಿದ್ದು ನಮ್ಮಲ್ಲಿ ದುಡ್ಡಿಲ್ಲದೆ ಇದ್ದಲ್ಲಿ ಮಾನ್ವಿ ಕ್ಷೇತ್ರದಲ್ಲಿ ಮಾಡುವುದಕ್ಕೆ ಹೇಗೆ ಸಾಧ್ಯವಾಗುತಿತ್ತು ಎಂದು ಪ್ರಶ್ನಿಸಿದರು.
ರಾಜ್ಯದ ಲೋಕಪಯೋಗಿ ಸಚಿವರಾದ ಸತೀಶ ಜರಕಿಹೊಳ್ಳಿ ಮಾತನಾಡಿ ಮುಖ್ಯಮಂತ್ರಿಗಳು ನಮ್ಮ ಇಲಾಖೆಗೆ ಹಾಗೂ ಪ.ಜಾತಿ,ಪ.ಪಂಗಡ ಸಮುದಾಯಗಳ ಅಭಿವೃದ್ದಿಗಾಗಿ ಹಾಗೂ ಲೋಕೋಪಯೊಗಿ ಇಲಾಖೆಗೆ ವಿಶೇಷ ಅನುದಾನವನ್ನು ನೀಡಿದ್ದಾರೆ. 1695 ಕೋಟಿ ಮೋತ್ತದಲ್ಲಿ 4ಪಥದ ರಸ್ತೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಈ ರಸ್ತೆಯಿಂದ ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗುತ್ತದೆ ಹಾಗೂ ಈ ಭಾಗ ಅಭಿವೃದ್ದಿಗೆ ಅನುಕೂಲವಾಗುತ್ತದೆ. ತಾಲೂಕಿನಲ್ಲಿ ನಮ್ಮ ಇಲಾಖೆಯಿಂದ ಮುಖ್ಯ ರಸ್ತೆಯಿಂದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ದಿ ಸೇತುವೆಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಮುಖ್ಯಮಂತ್ರಿಗಳು 5ಗ್ಯಾರಂಟಿಗಳಿಗೆ 60ಸಾವಿರ ಕೋಟಿ ನೀಡಿದ್ದು ಈ ಐದು ಗ್ಯಾರಂಟಿಗಳು ಮುಂದೆಯು ಮುಂದುವರೆಯಲಿವೇ ರಾಜ್ಯದ ಅಭಿವೃದ್ದಿಯನ್ನು ಸಹಿಸದೆ ಇರುವ ಹಾಗೂ ಬಡವರಿಗೆ ಗ್ಯಾರಂಟಿ ಯೋಜನೆಗಳು ತಲುಪಬಾರದು ಎನ್ನುವ ಉದ್ದೇಶದಿಂದ ಜನರ ಗಮನವನ್ನು ಬೇರೆಕಡೆ ಸೇಳೆಯುವುದಕ್ಕೆ ಬಿಜೆಪಿ,ಜೆಡಿಎಸ್ ಪಕ್ಷಗಳು ಕೂಡಿ ಕೊಂಡು ಮುಂದಾಗಿವೆ ಎಂದು ಅರೋಪಿಸಿದರು.
ಕೆ.ಕೆ.ಆರ್.ಡಿ.ಬಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವತಿಯಿಂದ 9.5 ಕೋಟಿ ವೆಚ್ಚದ ನೂತನ ವೇಗದೂತ ಬಸ್ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ, 3ಕೋಟಿ 33 ಲಕ್ಷ ವೆಚ್ಚದಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ನಿರ್ಮಾಣ, ಮಾನ್ವಿ ಪಟ್ಟಣದಲ್ಲಿ 4 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ, ಸರಕಾರಿ ಯೂನಾನಿ ಆಸ್ಪತ್ರೆ ಕಟ್ಟಡ ನಿರ್ಮಾಣ 1ಕೋಟಿ ಸಂಕುಸ್ಥಾಪನೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿವತಿಯಿಂದ 1ಕೋಟಿ 20ಲಕ್ಷ ವೆಚ್ಚದಲ್ಲಿ ಮಾನ್ವಿ ಮತ್ತು ಸಿರವಾರ ತಾಲೂಕುಗಳ ಅಂಗನವಾಡಿ ಕಟ್ಟಡಗಳ ನಿರ್ಮಾಣ,ಸಿರವಾರ ಪಟ್ಟಣದಲ್ಲಿ 479ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು. ಕವಿತಾಳ ಪಟ್ಟಣದಲ್ಲಿ 65 ಲಕ್ಷ ವೆಚ್ಚದಲ್ಲಿ ಮಾದರಿ ಕಲ್ಯಾಣ ವಾಚನಾಲಯ ಉದ್ಘಾಟನೆ, ಮಾನ್ವಿ ಪಟ್ಟಣದಲ್ಲಿ ಡಾ.ಬಿ.ಆರ್ .ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಉದ್ಘಾಟನೆ, ಹಿಂದುಳಿದ ವರ್ಗಗಳ ಮೇಟ್ರಿಕ್ ಪೂರ್ವ ವಸತಿ ನಿಲಯ ಕಟ್ಟಡ ಉದ್ಘಾಟನೆ, ಜಲಜೀವನ ಮಿಷನ್ ಯೋಜನೆ ಯಡಿಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಒಟ್ಟು 765 ಕೋಟಿ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.ಮಾನ್ವಿ ಮತ್ತು ಸಿರವಾರ ತಾಲೂಕುಗಳಲ್ಲಿನ ವಿವಿಧ ಗ್ರಾಮಗಳಲ್ಲಿನ 6 ಕೋಟಿ 52ಲಕ್ಷ ವೆಚ್ಚದಲ್ಲಿ ವಿವಿಧ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ್, ರಾಜ್ಯ ಸಚಿವರಾದ ಎನ್.ಎಸ್.ಬೋಸರಾಜು, ಹೆಚ್.ಸಿ. ಮಹಾದೇವಪ್ಪ,ಕೆ.ಹೆಚ್.ಮುನಿಯಪ್ಪ, ಶಿವರಾಜ ತಂಗಡಗಿ. ಮಾನ್ವಿ ಶಾಸಕರಾದ ಹಂಪಯ್ಯನಾಯಕ, ಶಾಸಕರಾದ ಹಂಪನಗೌಡ ಬಾದರ್ಲಿ,ಬಸವನಗೌಡ ತುರುವಿಹಾಳ್, ಬಸವನಗೌಡ ದದ್ದಲ್, ಮಾಗಡಿ ಶಾಸಕ ಬಾಲಕೃಷ್ಣ, ವಿಧಾನಪರೀಷತ್ ಸದಸ್ಯರಾದ ಎ. ವಸಂತಕುಮಾರ,ಶರಣಪ್ರಕಾಶ ಪಾಟೀಲ್ ಬಯ್ಯಾಪುರ್,ಬಸವನಗೌಡ ಬಾದರ್ಲಿ, ರಾಜ್ಯ ಕುರುಬರ ಸಂಘದ ರಾಜ್ಯಧ್ಯಕ್ಷರಾದ ಎಂ.ಈರಣ, ಪುರಸಭೆ ಅಧ್ಯಕ್ಷರಾದ ಲಕ್ಷ್ಮೀ ವಿರೇಶ, ಉಪಾಧ್ಯಕ್ಷರಾದ ಮೀನಾಕ್ಷ್ಮೀ ರಾಮಕೃಷ್ಣ, ಪುರಸಭೆ ಹಿರಿಯ ಸದಸ್ಯರಾದ ಲಕ್ಷ್ಮೀ ದೇವಿ ನಾಯಕ ಮುಖಂಡರಾದ ರವಿಬೋಸರಾಜು, ಅಕ್ಬರ್ ಸಾಬ್, ಕೆ.ಬಸವಂತಪ್ಪ, ಶಾಂತಪ್ಪ, ಅಕ್ಬರ್‌ಸಾಬ್, ಬಿ.ಕೆ.ಅಮರೇಶಪ್ಪ. ಬಾಲಸ್ವಾಮಿಕೋಡ್ಲಿ ಸೇರಿದಂತೆ ಇನ್ನಿತರರು ಇದ್ದರು. ಮಾನ್ವಿ ಮತ್ತು ಸಿರವಾರ ತಾಲೂಕುಗಳ ಕಾಂಗ್ರೇಸ್ ಮುಖಂಡರು,ಜನಪ್ರತಿನಿಧಿಗಳು, ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.