Sharannavaratri celebrations at Mahamaya temple
ಅ. 11ರಂದು ಕುಕನೂರು ಮಹಾಮಾಯ(ದ್ಯಾಮವ್ವ) ದೇವಿ ಜಾತ್ರಾ ಮಹೋತ್ಸವ,,,
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ (ಕುಕನೂರು) : ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಮಹಾಮಾಯಾ ದೇವಿ ಶರನ್ನವರಾತ್ರಿ ಉತ್ಸವವು ಇದೇ ಸ್ವಸ್ತಿಶ್ರೀ ಮನೃಪ ಶಾಲಿವಾಹನ ಶಕೆ 1946ನೇ ಕ್ರೋಧಿನಾಮ ಸಂವತ್ಸರ, ಆಶ್ವಿಜ, ಶುದ್ಧ, ಪ್ರತಿಪದದಿಂದ ಮಹಾನವಮಿ ಪರ್ಯಂತವಾಗಿ ಶರನ್ನವರಾತ್ರಿ ಉತ್ಸವವು ಸಕಲ ಪೂಜಾಧಿಗಳು ಹಾಗೂ ದೇವತಾ ವಾಹನ ಉತ್ಸವಗಳು 03-10-2024 ಗುರುವಾರ ದಿಂದ ಪ್ರಾರಂಭವಾಗಿ ದಿನಾಂಕ: 12-10-2024 ಶನಿವಾರ ವಿಜಯದಶಮಿ ಬನ್ನಿಹಬ್ಬ (ಬನ್ನಿ ಮುಡಿಯುವುದು) ದವರೆಗೆ ನಡೆಯಲಿವೆ.
ಪ್ರತಿ ದಿನ ಬೆಳಿಗ್ಗೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ, ಅಲಂಕಾರ ಪೂಜಾ, ವಾಹನೋತ್ಸವ, ಮಂತ್ರಪುಷ್ಪ, ಅಷ್ಟಾವಧಾನ ಸೇವಾ ಹಾಗೂ ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಲಿದ್ದು ಈ ಉತ್ಸವ ಕಾರ್ಯಕ್ರಮದಲ್ಲಿ ಸಕಲ ಸಧ್ಬಕ್ತಾಧಿಗಳು ಪಾಲ್ಗೊಂಡು, ಶ್ರೀ ಮಹಾಮಾಯಾ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಉಭಯ ಧರ್ಮಾಧಿಕಾರಿಗಳಾದ ವಲ್ಲಭರಾವ್ ರಂಗರಾಯಗೌಡ ದೇಸಾಯಿ ಸಿದ್ನೆಕೊಪ್ಪ ಹಾಗೂ ಬಂಡೇರಾಯಗೌಡ ಗುರುರಾಯಗೌಡ ದೇಸಾಯಿ ಮಾಳೇಕೊಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ: 11-10-2024 ಶುಕ್ರವಾರ ನವಮಿಯಂದು ಶ್ರೀ ಮಹಾಮಾಯ ದೇವಿಯ ಮಹಾರಥೋತ್ಸವ ಹಾಗೂ ದಿನಾಂಕ 12-10-2024 ಶನಿವಾರ ದಶಮಿಯಂದು ವಿಜಯದಶಮಿ (ಬನ್ನಿಹಬ್ಬ) ಕಾರ್ಯಕ್ರಮವಿರುವುದು.
ಈ ಉತ್ಸವದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿವರ್ಗ ಮತ್ತು ಕುಕನೂರು ಗ್ರಾಮದ ಸಮಸ್ತ ಭಕ್ತಾದಿಗಳು ಹಾಗೂ ಗುರು-ಹಿರಿಯರು ಶ್ರೀ ದೇವಿಯ ಜಾತ್ರಾ ಮಹೋತ್ಸವವನ್ನು ವ್ಯವಸ್ಥಿತವಾಗಿ ವಿಜೃಂಭಣೆಯಿಂದ ಸಂಪನ್ನಗೊಳಿಸಲು ಕಾರ್ಯನಿರ್ವಹಿಸಬೇಕೆಂದು ಪ್ರಕಟಣೆ ಮೂಲಕ ಕೋರಿದ್ದಾರೆ.
ಸೂಚನೆ : ಪರಸ್ಥಳದಿಂದ ಬರುವ ಭಕ್ತಾದಿಗಳಿಗೆ ಎಲ್ಲಾ ತರಹದ ಅನುಕೂಲತೆಗಳಾದ ಶುದ್ಧ ಕುಡಿಯುವ ನೀರು, ನವಮಿಯಂದು ಮಹಾಪ್ರಸಾದ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.