Breaking News

ಅಂತು ಬಂದಾಯ್ತು ಕುಕನೂರ ಮುಂಡರಗಿ ರಸ್ತೆ ಸಂಚಾರ,,

Kukanur Mundargi road traffic has arrived.

ಜಾಹೀರಾತು

ಕೊಪ್ಪಳ : ಈ ರಸ್ತೆಗಳು ಸಾರಿಗೆ ವಾಹನಗಳು ಓಡಾಡುವ ಹಾಗೂ ಖಾಸಗಿ ವಾಹನಗಳು ಓಡಾಡುವ ರಸ್ತೆಗಳೋ ಅಥವಾ ಯಾವುದೋ ಬಂಡಿ ಜಾಡಿನ ಮಾರ್ಗಗಳೋ ಎನ್ನುವದನ್ನ ಜನ ಪ್ರತಿನಿಧಿಗಳೇ ಹೇಳಬೇಕು,,

ಹೌದು,, ಈ ರೀತಿಯಾಗಿ ಒಂದು ಯಕ್ಷ ಪ್ರಶ್ನೇ ಮೂಡದೇ ಇರಲಾದು,,,

ಇದರ ಕತೆ ಹಾಗೂ ವ್ಯಥೆಯನ್ನ ಒಮ್ಮೇ ನೋಡೋಣ ಬನ್ನಿ,,,

ಈ ಹಳ್ಳ ಹಿಡಿದ ರಸ್ತೆಗಳಿರೋದು ಕುಕನೂರ ಹಾಗೂ ಕೊಪ್ಪಳ ತಾಲೂಕಿಗೆ ಒಳ ಪಡುವ ರಸ್ತೆಗಳು,,,

ಅಂದ್ರೇ ಕುಕನೂರಿನಿಂದ ಕವಲೂರು, ಮುರ್ಲಾಪೂರ, ಘರಡ್ಡಿಹಾಳ ಮಾರ್ಗವಾಗಿ ಮುಂಡರಗಿಗೆ ಸಂಪರ್ಕ ಕಲ್ಪಿಸೋ ರಸ್ತೆಗಳು,,,

ಈ ಗ್ರಾಮಗಳು ಬರೋದು ಕೊಪ್ಪಳ ಜಿಲ್ಲಾ ಗಡಿಗಳಲ್ಲಿ,,,

ಸುಮಾರು ಹತ್ತರಿಂದ ಹದಿನೈದು ವರ್ಷಗಳಿಂದ ಈ ಕಿತ್ತೋದು ರಸ್ತೆಗಳಲ್ಲೇ ಇಲ್ಲಿನ ಜನತೆಯ ಪಯಣ,,,

ಹೇಳೋರಿಲ್ಲಾ ಕೇಳೋರಿಲ್ಲಾ ಎನ್ನೋ ಹಾಗಾಗಿದೆ ಜನತೆ ಗೋಳು,,,

ತಲೆ ಕೆಟ್ಟು ಕೆಎಸ್ಆರ್ ಟಿಸಿ ಬಸ್ ಪ್ರಯಾಣ ಬಂದ್ ಮಾಡಿದ ಕುಕನೂರ ಸಾರಿಗೆ ಘಟಕ,,,

ಹೌದು ಸ್ವಾಮಿ ಇಂತ ರಸ್ತೆಲಿ ಓಡಾಡಿದರೇ ನಮ್ಮ ಜೀವಕ್ಕೆ ಗ್ಯಾರಂಟಿ ಇಲ್ಲಾ ಅಂತದ್ರಲ್ಲಿ ಜನಗಳಿಗೆ ಹೇಗೆ ಗ್ಯಾರಂಟಿ ಕೋಡಕಾಗುತ್ತೇ ಅಂಥ ಹೆಸರು ಹೇಳ್ದೇ,,ಹೇಳ್ತಾ ಇರೋ ಸಾರಿಗೆ ನೌಕರ,,,

ಈ ರಸ್ತೆಲಿ ಓಡಾಡ್ತ ಇರೋ ಸಾರಿಗೆ ವಾಹನಗಳು ಪ್ರತಿ ದಿನ ಕಿರಿ, ಕಿರಿ ಮಳೆಯಿಂದ ರಸ್ತೆಯಲ್ಲಿ ಎರೆಮಣ್ಣು ಗಾಲಿಗೆ ಹತ್ತಿ ಉರುಳದೇ ಇರುವ ಚಕ್ರಗಳು, ಮಡು ನಿಂತ ನೀರು, ಎರಡ ದಿನಕ್ಕೊಮ್ಮೆ ವಾಹನಗಳು ರಿಪೇರಿ,,

ರಸ್ತೆಗಳು ಹದಗೆಟ್ಟದರಿಂದ ಬಸ್ ಸಂಚಾರ ನಿಷೇದ,,,

ಶಾಲಾ ಕಾಲೇಜಿನ ನೂರಾರು ವಿದ್ಯಾರ್ಥಿಗಳಿಗೆ ಕುಕನೂರು ಸಾರಿಗೆ ಘಟಕವೇ ಆಸರೆ,,,

ಮಳೆ ಬಂದ ಹಿನ್ನೇಲೆಯಲ್ಲಿ ಕೆಸರು ಗದ್ದೆಗಳಂತಾದ ರಸ್ತೆಗಳು, ಇದರಿಂದ ಸಾರಿಗೆ ಬಸ್ ರದ್ದು, ಖಾಸಗಿ ವಾಹನಗಳನ್ನು ಆಶ್ರಯಿಸಿದ ವಿದ್ಯಾರ್ಥಿಗಳು,,,

ಈ ರಸ್ತೆಗಳಲ್ಲಿ ಇಲ್ಲಿಯವರೆಗೂ ಲೆಕ್ಕವಿಲ್ಲದಷ್ಟು ಅವಘಡ, ಅನಾಹುತ ಸಂಭವಿಸಿದರು ಮೂಕ ಪ್ರೇಕ್ಷಕರಂತೆ ನೋಡ್ತಾ ಕುಳಿತ ಜನಪ್ರತಿನಿಧಿಗಳು,,,

ಇದೆ ರಸ್ತೆಲಿ ನೂರಾರು ಬಾರಿ ಓಡಾಡಿದ್ರು ದುರಸ್ತಿಗೆ ಮುಂದಾಗದ ಶಾಸಕರು ಸಾರ್ವಜನಿಕರ ಆರೋಪ,,

ಈ ರಸ್ತೆಗಳಲ್ಲಿ ಸರಕಾರಿ ವಾಹನವಲ್ಲದೇ, ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು, ಸಾರ್ವಜನಿಕ ಓಡಾಟಗಳಿಗೆ ದಿನ ನಿತ್ಯ ನರಕ ಯಾತನೆ ಅನುಭವಿಸ್ತಾ ಇರೋ ಪ್ರಯಾಣಿಕರು,,,

ಈ ಕೂಡಲೇ ಕೊಪ್ಪಳ, ಕುಕನೂರು ತಾಲೂಕಿನ ಜನ ಪ್ರತಿನಿಧಿಗಳು ರಸ್ತೆಗಳನ್ನು ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ಸುಗಮ ರಸ್ತೆಗಳನ್ನು ನಿರ್ಮಾಣ ಮಾಡಲು ಮುಂದಾಗದಿದ್ದಲ್ಲಿ ಸಾರ್ವಜನಿಕರೊಂದಿಗೆ ವಿದ್ಯಾರ್ಥಿಗಳು ಕೂಡಿ ಬೆಳಗಟ್ಟಿ ರಾಜ್ಯ ಹೆದ್ದಾರಿಯಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ,,,,

ವರದಿ : ಪಂಚಯ್ಯ ಹಿರೇಮಠ,,

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.