Breaking News

ತಾಯಿ ಹೆಸರಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಪಿಡಿಓ ಚಾಲನೆ

PDO launched a tree campaign in the name of mother

ಜಾಹೀರಾತು

ಪ್ರತಿ ಮನೆ ಮನೆಯಲ್ಲಿ ಗಿಡ ಬೆಳೆಸಿ

ಕುಕನೂರ : ಆಧುನಿಕತೆ ಹೆಚ್ಚಾಗಿ ಅದಕ್ಕೆ ತಕ್ಕಂತೆ ಜನಸಂಖ್ಯೆ ಹೆಚ್ಚಾಗುತ್ತಿದ್ದು ಅದರಿಂದ ಮನೆಗಳು ಕಾರ್ಖಾನೆಗಳು ಹೆಚ್ಚಾಗಿ ಗಿಡ ಮರಗಳ ಮಾರಣಹೋಮ ನಡೆಯುತ್ತಿದೆ ಇದರಿಂದ ವಾತಾವರಣದಲ್ಲಿ ವ್ಯತಿರಿಕ್ತವಾಗುತ್ತಿದೆ ಎಂದು ಪಿಡಿಓ ಅಡಿವೆಪ್ಪ ಯಡಿಯಾಪೂರ ಹೇಳಿದರು.

ತಾಲೂಕಿನ ಯರೇಹಂಚಿನಾಳ ಗ್ರಾ.ಪಂ ವ್ಯಾಪ್ತಿಯ ಸಿದ್ನೇಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರ 2 ರಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಸಿ ನೆಟ್ಟು ಅವರು ಮಾತನಾಡಿದರು.

ಮರಗಳು ನಮ್ಮನ್ನು ರಕ್ಷಿಸುವ ತಾಯಿ ಇದ್ದ ಹಾಗೆ ಸಸಿಗಳು ಬೆಳೆದು ಮರವಾಗಬೇಕಾದರೆ ಅವುಗಳಿಗೆ ಪೋಷಣೆ ಅವಶ್ಯಕ ಅದಕ್ಕಾಗಿ ತಾಯಿ ಯಾವ ರೀತಿ ಮಕ್ಕಳನ್ನು ನೋಡಿಕೊಳ್ಳುತ್ತಾಳೆಯೋ ಅದೇ ರೀತಿ ಸಸಿಗಳನ್ನು ಶಾಲಾ ವಿಧ್ಯಾರ್ಥಿಗಳು ಒಂದೊಂದು ಗಿಡವನ್ನು ದತ್ತು ತೆಗೆದುಕೊಂಡು ಪೋಷಣೆ ಮಾಡಬೇಕು.
ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ಸಾಕಷ್ಟು ಸಸಿಗಳನ್ನು ನಡೆಸುತ್ತಾರೆ ಆದರೆ ಸರಿಯಾದ ಪೋಷಣೆ ಇಲ್ಲದೇ ಸಸಿಗಳು ಬೆಳೆಯದೆ ಕುಂಟಿತವಾಗುತ್ತಿವೆ ಅದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳು ಪ್ರತಿಯೋಬ್ಬರೂ ಸಹ ಮರಗಳನ್ನು ಬೆಳೆಸಬೇಕು ಎನ್ನುವ ಉದ್ದೇಶದಿಂದ ತಾಯಿಯ ಹೆಸರಿನಲ್ಲಿ ಮರ ನೆಡಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ನೀಡಿದ್ದು ಅದರಂತೆ ಎಲ್ಲರೂ ಕಾರ್ಯಪ್ರವೃತ್ತರಾಗಿ ಎಂದರು.

ಈ ವೇಳೆ ಗ್ರಾ.ಪಂ ಉಪಾಧ್ಯಕ್ಷ ಶರಣಯ್ಯ ಹಿರೇಮಠ. ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ವಿರೇಶ್ವರಯ್ಯ ಲಕ್ಜಲಕಟ್ಟಿ.ಕರವಸೂಲಿಗಾರರಾದ ಶರಬಣ್ಣ ಕೋಳೂರ. ಈರಣ್ಣ ಇಟಗಿ ಸೇರಿದಂತೆ ಇನ್ನೀತರರು ಹಾಜರಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.