Breaking News

ತುಂಗಭದ್ರಾಜಲಾಶಯಕ್ಕೆ ಪ್ರವಾಸೋದ್ಯಮ ಸಚಿವರ ಭೇಟಿ: ಸ್ಟಾಪಲಾಗ್ ಅಳವಡಿಕೆ ಕಾರ್ಯ ವೀಕ್ಷಣೆ

Tourism Minister’s visit to Tungabhadra Reservoir: Observation of stopalog implementation work

ಜಾಹೀರಾತು

ಕೊಪ್ಪಳ, ಆಗಸ್ಟ್ 17 (ಕರ್ನಾಟಕ ವಾರ್ತೆ): ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ ಪಾಟೀಲ್ ಅವರು ಆಗಸ್ಟ್ 17ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು.
ಟಿ.ಬಿ.ಡ್ಯಾಮನ ಗೇಟ್ ನಂ.19ರ ಚೈನ್ ಲಿಂಕ್ ಕಡಿತವಾಗಿ ಗೇಟ್ ದುರಸ್ತಿ ಹಿನ್ನೆಲೆಯಲ್ಲಿ ನದಿಗೆ ನೀರು ಬಿಟ್ಟಿರುವುದನ್ನು ಸಚಿವರು ಇದೆ ವೇಳೆ ವೀಕ್ಷಣೆ ನಡೆಸಿದರು. ಬಳಿಕ ಡ್ಯಾಮನ್ ನಂ.19ರ ಗೇಟ್‌ಗೆ ಸ್ಟಾಪಲಾಗ್ ಅಳವಡಿಕೆ ಕಾರ್ಯದ ಬಗ್ಗೆ ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಹಳ ದೊಡ್ಡ ಪ್ರದೇಶಕ್ಕೆ ನೀರಾವರಿ ಯೋಜನೆ ಹೊಂದಿರುವAತಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹೊಂದಿದ ಒಂದು ಅಧ್ಬುತವಾದ ಸೃಷ್ಟಿ ತುಂಗಭದ್ರಾ ಜಲಾಶಯವಾಗಿದೆ. ಆದರೆ ಏನೋ ದುರ್ದೈವ ಆಕಸ್ಮಿಕ ಘಟನೆಯಿಂದಾಗಿ ಜಲಾಶಯದ ಕ್ರಸ್ಟ್ ಗೇಟ್ 19 ಚೈನ್ ಲಿಂಕ್ ಕಟ್ಟಾದ ಹಿನ್ನಲೆಯಲ್ಲಿ ನೀರು ತುಂಬಾ ರಭಸವಾಗಿ ನೀರು ಹರಿಯುತ್ತಿರುವುದರಿಂದ ಸುಮಾರು 30 ಟಿಎಂಸಿ ನೀರು ಹರಿದು ಹೋಗಿದೆ. ಸ್ಟಾಪ್ ಲಾಗ್ ಗೇಟನ್ನು ಅಳವಡಿಸಲು ಸತತ ಪ್ರಯತ್ನಗಳು ನೆಡಿದಿದ್ದು, ಕರ್ನಾಟಕದ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಇಂಜೀನಿಯರಗಳ ತಂಡ ಸ್ಥಳದಲ್ಲಿಯೇ ಇದ್ದಾರೆ. ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ಹಂತದ ಕಾರ್ಯಚರಣೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಒಂದು ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದ್ದು, ಇನ್ನೂ ಎರಡು ಸ್ಟಾಪ್ ಲಾಗ್ ಗೇಟ್ ಗಳಿಗಾಗಿ ಜೆ.ಎಸ್.ಡಬ್ಲೂ ನಿಂದ ಉಳಿದ ಭಾಗಗಳು ಬರುತ್ತವೆ. ಇನ್ನೂ ಎರಡು ದಿನಗಳಲ್ಲಿ ಅವುಗಳನ್ನು ಯಶಸ್ವಿಯಾಗಿ ಜೋಡಣೆಗೊಂಡರೆ ಉತ್ತಮ ಸುದ್ದಿ ಸಿಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಮರೇಗೌಡ ಪಾಟೀಲ ಬಯ್ಯಾಪೂರ, ಜನಾರ್ಧನ ಹುಲಿಗಿ, ಗಣ್ಯರಾದ ಕೆ.ಕಾಳಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.