Breaking News

ದಲಿತರಿಗೆ ಮಂಜೂರು ಮಾಡಿದ ಭೂಮಿಯ ಪಹಣಿಯಲ್ಲಿ ಹೆಸರು ಸೇರಿಸಲು ಒತ್ತಾಯಿಸಿ ಮನವಿ ಸಲ್ಲಿಕೆ.

Submission of petition demanding inclusion of name in Pahani of land allotted to Dalits.

ಜಾಹೀರಾತು

ಕೂಡ್ಲಿಗಿ:ತಾಲೂಕಿನ ಜಂಗಮ ಸೋವೇನಹಳ್ಳಿ ಗ್ರಾಮದ ದಲಿತ ಚಲವಾದಿ ಪಕೀರಪ್ಪ ಅವರಿಗೆ ಮಂಜೂರು ಮಾಡಿದ್ದ ಸರ್ಕಾರಿ ಭೂಮಿಯ ಪಹಣಿಯಲ್ಲಿ ಅವರ ಹೆಸರು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿಯ ಸದಸ್ಯರು ಮಂಗಳವಾರ ತಹಸೀಲ್ದಾರ್ ಎಂ.ರೇಣುಕಾ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಶಿವಪುರ ಗ್ರಾಮದ ಸರ್ವೆ ನಂ 17ರಲ್ಲಿ ಹಿಂದೆ 3 ಎಕರೆ ಭೂಮಿಯನ್ನು 1999ರಲ್ಲಿ ಕೂಡ್ಲಿಗಿ ತಹಸೀಲ್ದಾರರು ಪಕೀರಪ್ಪ ಅವರಿಗೆ ಮಂಜೂರು ಮಾಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಅವರೆ ಸಾಗುವಳಿ ಮಾಡುತ್ತ ಬಂದಿದ್ದಾರೆ. ಅಲ್ಲದೆ ಪಹಣಿಯಲ್ಲಿ ತಮ್ಮ ಹೆಸರನ್ನು ಸೇರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅನೇಕ ಬಾರಿ ಅರ್ಜಿ ಸಲ್ಲಿಸುತ್ತ ಬಂದಿದ್ದರು ಅಧಿಕಾರಿಗಳು ಯಾವುದೇ ಕಿಮ್ಮತ್ತು ನೀಡದೇ, 2018ರಲ್ಲಿನಡೆದ ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸರ್ವೆ 17ರಲ್ಲಿ 2 ಎಕರೆ 15 ಗುಂಟೆ ಜಮೀನನ್ನು ನಂದಿ ಕೊಟ್ರೇಶಪ್ಪ ಎನ್ನುವವರಿಗೆ ಮಂಜೂರು ಮಾಡಿದ್ದಾರೆ. ಆದರೆ ಚಲವಾದಿ ಪಕೀರಪ್ಪ ಅವರ ಹೆಸರನ್ನು ಸೇರ್ಪಡೆ ಮಾಡುವಂತೆ ಅನೇಕ ಬಾರಿ ಮನವಿ ಮಾಡಿದ್ದರು. ಪಕ್ಕೀರಪ್ಪ ಮರಣದ ನಂತರವೂ ಅವರ ಪತ್ನಿ ಬಸಮ್ಮ ಅವರು ತಮ್ಮ ಹೆಸರು ಸೇರ್ಪಡೆ ಮಾಡುವಂತೆ ಮನವಿ ಮಾಡಿ, ಬೇರೆಯವರಿಗೆ ಭೂಮಿ ಮಂಜೂರು ಮಾಡಿದ್ದರ ವಿರುದ್ದ ನ್ಯಾಯಾಲಯದ ತಡೆಯಜ್ಞೆಯನ್ನು ತಂದಿದ್ದರು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದಾರೆ. ಇದರಿಂದ ದಲಿತ ಮಹಿಳೆ ಚಲವಾದಿ ಬಸಮ್ಮ ಅನ್ಯಾಯಕ್ಕೆ ಒಳಗಾಗಿದ್ದಾರೆ. ಇದನ್ನು ಸರಿ ಪಡಿಸಲು ತಕ್ಷಣ ಅಧಿಕಾರಿಗಳು ಸವರ್ಣಿಯರಿಗೆ ಮಂಜೂರು ಮಾಡಿದ ಭೂಮಿಯನ್ನು ರದ್ದು ಮಾಡಿ, ಪಹಣಿಯಲ್ಲಿ ಬಸಮ್ಮ ಅವರ ಹೆಸರನ್ನು ಸೇರ್ಪಡೆ ಮಾಡಬೇಕು. ಅದೇ ರೀತಿ ಒಮ್ಮೆ ದಲಿತರಿಗೆ ಮಂಜೂರಾದ ಭೂಮಿಯನ್ನು ಮತ್ತೊಬ್ಬರಿಗೆ ಮಂಜೂರು ಮಾಡಿ ಗೊಂದಲ ಸೃಷ್ಟಿಸಿದ ಅಧಿಕಾರಿಗಳು ಹಾಗೂ ಮೇಲ್ವರ್ಗದದವರ ಮೇಲೆ ಪರಿಶಿಷ್ಟ ಜಾತಿ, ಪಂಗಡದ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತಹಸೀಲ್ದಾರ್ ಎಂ. ರೇಣುಕಾ ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ನಂದಿಹಾಳ್, ಜಿಲ್ಲಾ ಕಾರ್ಯಧ್ಯಕ್ಷ ಹನುಮೇಶ್ ಕಟ್ಟಿಮನಿ, ಚಲವಾದಿ ಬಸಮ್ಮ, ತಾಲೂಕು ಅಧ್ಯಕ್ಷ ನಾಗರಾಜ, ಮಲ್ಲಿಕಾರ್ಜುನ ಸ್ವಾಮಿ, ಸಿ.ಎಂ. ಬಸಮ್ಮ, ತಳವಾರ ಬಸವರಾಜ, ಸಿ.ಎಂ. ನಾಗಯ್ಯ, ಸಿ.ಎಂ. ಸಂಗಯ್ಯ, ಎಸ್. ಈರಣ್ಣ, ಶಂಕ್ರಿ ಶಿವಾನಂದಪ್ಪ, ಸಿ.ಎಂ. ಮಲ್ಲಿಕಾರ್ಜುನಯ್ಯ, ವಡೇರಹಳ್ಲಿ ಶರಣಪ್ಪ ಭಾಗಿಯಾಗಿದ್ದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.