Breaking News

ಮಾನಕ ಗುಣಮಟ್ಟ ಅರಿವು ಸಭೆ

Standard Quality Awareness Meeting

ಜಾಹೀರಾತು


ಬೆಂಗಳೂರು: ಕರ್ನಾಟಕದಲ್ಲಿ ಗುಣಮಟ್ಟದ ಮಾನದಂಡಗಳ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಜುಲೈ 25 ಗುರುವಾರದಂದು ಬೆಂಗಳೂರು ಜಾಲಹಳ್ಳಿ ಕ್ರಾಸ್ ಬಳಿ ಇರುವ ಭಾರತೀಯ ಮಾನದಂಡ ಬ್ಯೂರೋದಲ್ಲಿ “ಮಾನಕ ಮಂಥನ” ನಡೆಯಿತು.

ವಿವಿಧ ವಲಯಗಳಲ್ಲಿ ಭಾರತೀಯ ಮಾನದಂಡಗಳ ಕುರಿತಂತೆ ಮಾಡಲಾಗಿರುವ ಬದಲಾವಣೆಗಳ ಬಗ್ಗೆ ಸಭೆಯಲ್ಲಿ ಬೆಳಕು ಚೆಲ್ಲಲಾಯಿತು. ಭಾರತೀಯ ಮಾನದಂಡಗಳ ಸಂಸ್ಥೆಯ ಅಂಗವಾದ ಭಾರತೀಯ ಮಾನದಂಡಗಳ ಬ್ಯೂರೋ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಮಾನದಂಡಗಳಾದ ಉತ್ಪನ್ನ ಪ್ರಮಾಣೀಕರಣ, ನೋಂದಣಿ, ಮುದ್ರೆ, ಪ್ರಯೋಗಾಲಯ ಪರೀಕ್ಷೆ ಮೊದಲಾದವುಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಎಲ್ಲಾ ಸಂಬಂಧಿತ ಪಾಲುದಾರರಿಗೆ ತಿಳಿಸಲಾಯಿತು. ಪ್ರಸ್ತಾಪಿತ ಮಾನದಂಡಗಳ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ ಮತ್ತು ಟೀಕೆಗಳನ್ನು ಆಹ್ವಾನಿಸಲಾಗಿದೆ.

ಬ್ಯೂರೋ ನಿರ್ದೇಶಕರಾದ ವಿಜ್ಞಾನಿ ವಿಜಯವೀರನ್. ಕೆ., ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

screenshot 2025 09 09 20 10 44 41 e307a3f9df9f380ebaf106e1dc980bb6.jpg

ಕಲ್ಯಾಣ ಕರ್ನಾಟಕದಲ್ಲಿ ಪ್ರತಿಭೆಗೆ ಕೊರತೆ ಇಲ್ಲ-ಧನರಾಜ್ ಈ.  

There is no shortage of talent in Kalyan Karnataka - Dhanraj E. ಗಂಗಾವತಿ:ಇತಿಹಾಸವನ್ನು ಅವಲೋಕಿಸಿದರೆ ಕರ್ನಾಟಕದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.