Breaking News

ವೀರ ಬ್ರಹ್ಮೇಂದ್ರ ಸ್ವಾಮಿ ಧರ್ಮಶಾಲೆ ಹಾಗೂ ಹಾಗೂ ಅಂಜನಾದ್ರಿ ಆಶ್ರಮ ದಲ್ಲಿ ಗುರು ಪೂರ್ಣಿಮೆ ಕಾರ್ಯಕ್ರಮ

Guru Purnima Program at Veera Brahmendra Swami Dharamshala and Anjanadri Ashram

ಜಾಹೀರಾತು

ಬೆಂಗಳೂರು ಗ್ರಾಮಾಂತರ ತಿಪ್ಪಗೊಂಡನಹಳ್ಳಿయ ಸಿಂಗದಾಸನಲ್ಲಿ ಗ್ರಾಮದಲ್ಲಿ ಇರುವಂತಹ ವೀರ ಬ್ರಹ್ಮೇಂದ್ರ ಸ್ವಾಮಿ ಧರ್ಮಶಾಲೆ ಹಾಗೂ ಹಾಗೂ ಅಂಜನಾದ್ರಿ ಆಶ್ರಮ ದಲ್ಲಿ ನಡೆದಿರುವ గురు పూర్ణిమ ಹಬ್ಬಧ ಪ್ರಯುಕ್ತವಾಗಿ ಕೆಲವು ಪೂಜಾ ಕ್ರಮಗಳು ಹಾಗೂ ಗುರುಪೂಜೆ ಯನ್ನು ನಡೆಸಲಾಗಿದೆ. ಇದರೊಂದಿಗೆ ಕರ್ನಾಟಕ ಸರ್ಕಾರ ರಚನೆ ಮಾಡಿರುವಂತಹ ವಿಶ್ವ ಬ್ರಾಹ್ಮಣ ಕುಲಸಸ್ತ್ರ ಅಧ್ಯಯನದ ಕಮಿಟಿಯ ಅಧಿಕಾರಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿ ಅವರೊಂದಿಗೆ ಶ್ರೀಯುತ ವೇದಬ್ರಹ್ಮಶ್ರೀ ಆಚಾರ್ಯ ಟಿ ಮೋಹನರಾವ್ ಶರ್ಮ ಗುರುಗಳು ವಿಶ್ವಕರ್ಮ ಪರಮಾತ್ಮನ ಕುರಿತು ವೇದಗಳಲ್ಲಿ ಇರುವಂತಹ ವಿವರಗಳೊಂದಿಗೆ ನಿರೂಪಣೆ ಮಾಡುತ್ತಾ ಶಾಸ್ತ್ರೀಯ ದಾಖಲೆಗಳೊಂದಿಗೆ ಉಪನ್ಯಾಸ ಮಾಡಿರುತ್ತಾರೆ. ಇದೇ ಹಾದಿಯಲ್ಲಿ ವಿಶ್ವಕರ್ಮ ಸೃಷ್ಟಿಯ ಕುರಿತು ಆ ಸೃಷ್ಟಿಯಲ್ಲಿ ಭೂಮಿಯ ರಚನೆ ಹೇಗೆ ಮಾಡಿದ್ದಾರೆ ಮತ್ತು ಸೃಷ್ಟಿ ಯಜ್ಞ ಮಾಡುತ್ತಾ 33 ಕೋಟಿ ದೇವತೆಗಳನ್ನು ಹೇಗೆ ಸೃಷ್ಟಿ ಮಾಡಿರುತ್ತಾರೆ ವಿವರಗಳನ್ನು ಈ ರೀತಿ ಅವರ ಭಾಷಣದಲ್ಲಿ ಹೇಳಿದ್ದಾರೆ.


ಇದಕ್ಕೆ ಆಧಾರ ಕೃಷ್ಣಯಜುರ್ವೇದದ ಎರಡನೇ ಕಾಂಡ ಒಂದನೇ ಪ್ರಶ್ನೆದ ಐದನೇ ಅನುವಾಕದ ಮಂತ್ರಗಳು ಆಧಾರವಾಗಿರುತ್ತದೆ (ಕೃಷ್ಣ ಯಜುರ್ವೇದ ೭:೧:೫)
ಸೃಷ್ಟಿಗೆ ಮೊದಲು ವಿಶ್ವಕರ್ಮ ನಿರಾಕಾರವಾಗಿದ್ದು ಮೊದಲಿಗೆ ಜಾಲವನ್ನು ಸೃಷ್ಟಿ ಮಾಡಿ ನಂತರ ತಾನು ವಾಯು ರೂಪವನ್ನು ಧರಿಸಿ ಜಲದಲ್ಲಿ ಪ್ರವೇಶ ಮಾಡಿ ನಾಲ್ಕು ಕಡೆ ಹುಡುಕಾಡಿ ಭೂಮಿಯನ್ನ ಕಂಡುಹಿಡಿದು ಆ ಭೂಮಿಯನ್ನ ಹೊರತರುವ ಸಲುವಾಗಿ ವರಹ ರೂಪವನ್ನು ಧರಿಸಿ ತನ್ನ ಕೋರೆಹಲ್ಲುಗಳಿಂದ ಆ ಭೂಮಿಯನ್ನು ಜಲದ ಉಪರಿತಲ ದಲ್ಲಿ ಸ್ಥಾಪನೆ ಮಾಡಿ ಆ ಭೂಮಿ ಮೇಲೆ ಇರುವಂತಹ ಜಲವನ್ನು ತನ್ನ ಕೈಗಳಿಂದ ಒರೆಸಿ
ನಿವಾಸ ಯೋಗ್ಯವಾಗಿ ಮಾಡುತ್ತಾರೆ. ನಂತರ ಸೃಷ್ಟಿಯಜ್ಞವನ್ನು ಪ್ರಾರಂಭ ಮಾಡಿ ಆ ಯಜ್ಞದಿಂದ 33 ( ಮುವ್ವತ್ತು ಮೂರು) ಕೋಟಿ ದೇವತೆಗಳನ್ನು ಸೃಷ್ಟಿ ಮಾಡುತ್ತಾರೆ . 33 ಕೋಟಿ ದೇವತೆಗಳೆಂದರೆ ಅಷ್ಟ ವಾಸುಗಳು ಏಕಾದಶ ರುದ್ರರು ದ್ವಾದಶ ಆದಿತ್ಯರು ಇವರೆಲ್ಲರ ಮೇಲೆ ಒಬ್ಬ ರಾಜ ಇಂದ್ರನು ಅವರನ್ನು ನಿಯಂತ್ರಿಸುವ ಒಬ್ಬ ಪ್ರಜಾಪತಿಯನ್ನು ಸೃಷ್ಟಿ ಮಾಡ್ತಾರೆ. ಇವರೇ 33 ಕೋಟಿ ದೇವತೆಗಳು . ಹೇಗಂದರೆ ಅಷ್ಟ ವಸುಗಳು ಎಂಟು ಜನ , ಏಕಾದಶ ರುದ್ರರು ಹನ್ನೊಂದು ಜನ , ದ್ವಾದಶ ಆದಿತ್ಯರು ಎಂದರೆ ಹನ್ನೆರಡು ಜನ ಇವರ ಪೈಕಿ ಒಬ್ಬ ರಾಜನು ಇಂದ್ರ , ಅವರನ್ನು ನಿಯಂತ್ರಿಸುವ ಒಬ್ಬ ಪ್ರಜಾಪತಿಯನ್ನು ಕೂಡಿದರೆ 33 ಸಂಖ್ಯೆ ಯ ವರ್ಗದೇವತೆಯರು ಆಗುತ್ತಾರೆ.
ವೈದಿಕ ಪರಿಭಾಷೆಯಲ್ಲಿ ಒಂದು ಕೋಟಿ ಎಂದರೆ ಒಂದು ವರ್ಗ ಎಂಬ ಅರ್ಥ ಬರುತ್ತದೆ. ಈ ರೀತಿ ಎಲ್ಲ ದೇವತೆಗಳನ್ನು ಸೃಷ್ಟಿ ಮಾಡಿ ಅವರಿಗೆ ನಾಮಕರಣ ಮಾಡಿ ಅವರವರು ಮಾಡಬೇಕಾಗಿರುವ ಕರ್ತವ್ಯಗಳನ್ನು ವಿಶ್ವಕರ್ಮ ಪರಮಾತ್ಮಉಪದೇಶ ಮಾಡುತ್ತಾರೆ. ಈ ರೀತಿ ಎಲ್ಲಾ ದೇವತೆಗಳನ್ನು ಹಾಗೂ ಎಲ್ಲಾ ಜೀವಜಾಲವನ್ನು ಮತ್ತು ಗ್ರಹಗಳು ನಕ್ಷತ್ರಗಳು ಇಡೀ ಗೆಲಾಕ್ಷಿಯನ್ನೇ ಸೃಷ್ಟಿ ಮಾಡಿರುವ ಪರಮಾತ್ಮ ವಿಶ್ವಕರ್ಮನನ್ನ ಸೃಷ್ಟಿಕರ್ತ , ಪಿತಾಮಹ , ದಾತ, ವಿಧಾತ ಎಂಬ ಹೆಸರುಗಳಿಂದ ವೇದಗಳಲ್ಲಿ ಕರಿಯಲ್ಪಟ್ಟಿದ್ದಾರೆ. ಪುರುಷ ಸೂಕ್ತದ ಪ್ರಕಾರ ಪುರುಷಸೂಕ್ತ ದಲ್ಲಿರುವಂತಹ ಪುರುಷನು ವಿಶ್ವಕರ್ಮನೇ ಆಗಿರುವುದನ್ನು ಅದೇ ಸೂಕ್ತದಲ್ಲಿರುವಂತಹ ಮಾಹಿತಿಯನ್ನು ಹೇಳುತ್ತಾ ಆಚಾರ್ಯ ಮೋಹನ್ ರಾವ್ ಶರ್ಮ ಗುರುಗಳು ತುಂಬಾ ವಿವರವಾಗಿ ಮನದಟ್ಟು ಮಾಡಿಸಿದ್ದಾರೆ. ಪುರುಷಸೂಕ್ತದಲ್ಲಿ ಇರುವಂತಹ ಇನ್ನೊಂದು ಮಂತ್ರದ ವಿವರಣ (ಬ್ರಾಹ್ಮಣೋಶ್ಯ ಮುಖಮಾಸೀತ್ ………ಶೂದ್ರಃ)ದಿಂದ ಆ ಪುರುಷನಾದ ವಿಶ್ವಕರ್ಮನ ಮುಖದಿಂದ ಹುಟ್ಟಿದವರು ಬ್ರಾಹ್ಮಣರೆಂದು ಆ ಬ್ರಾಹ್ಮಣರೇ ಈಗಿನ ವಿಶ್ವಕರ್ಮ ವಂಶಸ್ಥರೆಂದು , ಅವರನ್ನೇ ವೈಶ್ವಕರ್ಮಣರು, ವಿಶ್ವಬ್ರಾಹ್ಮಣರು ,ವಿಶ್ವಕರ್ಮ ಬ್ರಾಹ್ಮಣರು , ಶಿಲ್ಪಿ ಬ್ರಾಹ್ಮಣರೆಂದು ಹಾಗೂ ಜನಪದ ದ ಆಡು ಭಾಷೆಯಂತೆ ವಿಶ್ವಕರ್ಮರು , ಬಡಿಗೇರರು ,ಪತ್ತಾರರು ,ಕಮ್ಮಾರರು, ಸುತಾರರು ,ಅರ್ಕಶಾಲಿ ,ಪಾಂಚಾಲರು ,ಬಡಿಗೇರರು ಸ್ವರ್ಣಕಾರರು ಶಿಲ್ಪಿಕಾರರು ಲೋಹಕಾರರು ಶಿಲ್ಪಿಗಳೆಂದು ನಮ್ಮ ಕರ್ನಾಟಕದ ರಾಜ್ಯದಲ್ಲಿ ಕರಿಯಲ್ಪಡುತ್ತಿದ್ದಾರೆ.
ಇದಕ್ಕೆ ಸೂಕ್ತವಾದ ಶಿಲ್ಪ ಶಾಸ್ತ್ರದಲ್ಲಿ ಹಾಗೂ ಆಗಮದಲ್ಲಿ ಬರುವಂತಹ ಒಂದು ಶ್ಲೋಕವನ್ನು ಕೂಡ ಹೇಳಿರುತ್ತಾರೆ.

ವಿಶ್ವಕರ್ಮ ಕೊಲೇ ಜಾತಃ ಗರ್ಭ ಬ್ರಾಹ್ಮಣ ನಿಶ್ಚಯಂ|
ಶೂದ್ರತ್ವ ನಾಸ್ತಿ ತದ್ಭೀಜೋ ಬ್ರಾಹ್ಮಣೋ ವೈಶ್ವಕರ್ಮಣಃ||

ಈ ಶ್ಲೋಕದಲ್ಲಿ ಹೇಳಿರುವಂತ ಆರ್ಥದ ಪ್ರಕಾರ ವಿಶ್ವಕರ್ಮ ವಂಶದಲ್ಲಿ ಹುಟ್ಟಿರುವ ಮಗು ತಾಯಿ ಗರ್ಭದಲ್ಲೇ ಬ್ರಾಹ್ಮಣಾಗುತ್ತಾನೆ ಇವರು ಶೂದ್ರನಾಗುವ ಅವಕಾಶ ಇರುವುದಿಲ್ಲ ಆ ಕೂಸು ವೈಶ್ವಕರ್ಮಣ ಬ್ರಾಹ್ಮಣನಾಗಿರುತ್ತಾನೆ ಎಂದು ಅರ್ಥ ಬರುತ್ತದೆ.

ವೇದಗಳ ಸಾಹಿತ್ಯದ ಅನುಸಾರ ಹಾಗೂ ವೇದದಲ್ಲಿ ಬರುವ ವಿಶ್ವಕರ್ಮ ವಂಶ ಪರಂಪರೆಯ ಅನುಸಾರ ಇವರೇ ಎಂದರೆ ವೈಶ್ವಕರ್ಮಣರೆ ನಿಜವಾದ ವೈದಿಕ ಬ್ರಾಹ್ಮಣರೆಂದು ಸವಿವರವಾಗಿ ಕುಲಶಾಸ್ತ್ರ ಅಧ್ಯಯನದ ಸರಕಾರದ ಅಧಿಕಾರಿಗಳಿಗೆ ಹೇಳಿರುತ್ತಾರೆ.
ಇದೇ ಸಂದರ್ಭದಲ್ಲಿ ಈ ವಿಶ್ವಕರ್ಮ ವಂಶದಲ್ಲಿ ಹುಟ್ಟಿರುವಂತಹ ಅವತಾರ ಪುರುಷರು ಮಹಿಮಾನ್ವಿತರು ಪವಾಡ ಪುರುಷರುಗಳ ಉಲ್ಲೇಖ ಮಾಡುವ ಸಲುವಾಗಿ ಜಗದ್ಗುರು ಆದಿ ಶಂಕರಚಾರ್ಯರು ,ವೀರ ಬ್ರಹ್ಮೇಂದ್ರ ಸ್ವಾಮಿಗಳು ,ಮೌನೇಶ್ವರ ಸ್ವಾಮಿಗಳು , ಶ್ರೀ ಕಾಲ ಹಸ್ತೇಂದ್ರ ಮುನಿಸ್ವಾಮಿಗಳು, ಮೈಸೂರು ಅರಮನೆಯ ರಾಜಗುರುಗಳಾದಂತಹ ಸಿದ್ದಲಿಂಗ ಸ್ವಾಮಿಗಳು ಮುಂತಾದ ಪವಾಡ ಪುರುಷರು ಕಲ್ಲುಗಳಿಗೆ ಜೀವ ಕೊಟ್ಟಿರುವಂತಹ ಜಕಣಾಚಾರ್ಯರು ಮುಂತಾದ ಸ್ಥಪತಿಗಳು
ವೈಶ್ವಕರ್ಮಣ ಪರಂಪರೆಯಲ್ಲಿ ಬಂದಿರುವಂತಹ ಚಕ್ರವರ್ತಿಗಳು ರಾಜರು ಅದಕ್ಕೆ ಸಂಬಂಧಪಟ್ಟಂತಹ ಇತಿಹಾಸಗಳೊಂದಿಗೆ ಆಧಾರ ಸಹಿತವಾಗಿ ವಿವರಿಸಿದ್ದಾರೆ. ಸ್ಥಪತಿ ಆಚಾರ್ಯ ಮೋಹರ ಶರ್ಮಾ ಅವರು ಇನ್ನೊಂದು ಗಂಭೀರವಾದ ಮಾತನ್ನು ಹೇಳುತ್ತಾರೆ ವೈಶ್ವಕರ್ಮಣರು ನಾಗರಿಕ ಸಮಾಜದ ನಿರ್ಮಾಣ ಸೃಜನಕಾರರಾಗಿರುವಂತಹ ರೂವಾರಿಗಲೆಂದು ಹಿಂದಿನ ಕಾಲದ ವಿಜ್ಞಾನಿಗಳೆಂದು ಪುಷ್ಪಕ ವಿಮಾನ ಗಳು ಹಾಗೂ ಆಂತರಿಕ್ಷಾ ಪರಿಶೋಧನಾ ನಡೆಸುವಂತಹ ಆಂತರಿಕ್ಷಾ ವಿಜ್ಞಾನಿಗಳಾಗಿಯೂ ಭೂಮಿಯ ಅಂತರ್ ಗರ್ಭದಲ್ಲಿ ಇರುವಂತಹ ಖನಿಜ ಸಂಪದ ಗಳನ್ನ, ರಸಾಯನಗಳನ್ನು ವಿವಿಧ ಬಗೆಯ ವಾಯುವು ಗಳನ್ನ,ಲೋಹಗಳನ್ನು ಶೋಧನೆ ಮಾಡಿ ಹೊರತೆಗಿಸಿ ಅವನ್ನು ಬಳಸಿ ಮನುಕುಲಕ್ಕೆ ನಾಗರಿಕ ಸಮಾಜಕ್ಕೆ ಬೇಕಾಗಿರುವಂತಹ ವಸ್ತುಗಳನ್ನು ವಾಸ್ತು ನಿರ್ಮಾಣಗಳನ್ನು ಯಂತ್ರಗಳನ್ನು ರಕ್ಷಣೆಗೆ ಬೇಕಾಗಿರುವಂತಹ ಆಯುಧಗಳನ್ನು ವಿವಿಧ ರೀತಿಯ ವಿಮಾನಗಳು ರಥಗಳು ವಾಹನಗಳು ಮೊದಲಾದ ಎಲ್ಲವನ್ನು ಕೂಡ ಸೃಷ್ಟಿ ಮಾಡಿರುವಂತಹ ವಿಶ್ವಕರ್ಮ ವಂಶಿಕರೇ ಹಿಂದಿನ ಕಾಲದ ನಿಜವಾದ ವಿಜ್ಞಾನಿಗಳು. ಇವರುಗಳು ವೇದಗಳಲ್ಲಿರುವಂತಹ ಜ್ಞಾನ ಹಾಗೂ ವಿಜ್ಞಾನಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿರುವಂತಹ ಶ್ರೇಷ್ಠವಾದ ದೇವತಾ ವಂಶಿಕರೆಂದು ವೈದಿಕ ಬ್ರಾಹ್ಮಣರೆಂದು ಮನುಕುಲದ ಆಚಾರ್ಯ ವರ್ಗದವರೆಂದು ಅಂದರೆ ಗುರು ಸ್ಥಾನದಲ್ಲಿ ಇರುವಂತವರು ಎಂದು ಎಲ್ಲರಿಗೂ ಭಗವಂತನನ್ನ ಕಲ್ಲು ಮರ ಮುಂತಾದ ಲೋಹಗಳ ಮಾಧ್ಯಮಗಳಲ್ಲಿ ಸಾರ್ವಜನಿಕರಕೆ ತೋರಿಸಿ ಕೊಟ್ಟಿರುವಂತಹ ಪರಮಾತ್ಮ ವಿಶ್ವಕರ್ಮ ಮುಖದಿಂದ ಉದ್ಭವ ಗೊಂಡಿರುವಂತಹ ಬ್ರಾಹ್ಮಣರೆಂದು ಆಧಾರ ಸಹಿತ ನಿರೂಪಣೆ ಮಾಡಿರುತ್ತಾರೆ. ಆದರಿಂದ ನಾವುಗಳು ಗ್ರಹಿಸುವುದೇನೆಂದರೆ ವಿಶ್ವಕರ್ಮ ವಂಶಸ್ಥರೇ ನಿಜವಾದ ಬ್ರಾಹ್ಮಣರೆಂದು ಇವರು ಸಾರ್ವಜನಿಕರಿಗೆ ವಿಜ್ಞಾನ ದಾಯಕ ವಾದಂತಹ ಆಸ್ತಿಯೆಂದು ಇವರನ್ನ ಕಾಪಾಡುವ ಹಾಗೂ ಮುಂದುಕು ತರುವ ಜವಾಬ್ದಾರಿ ಭಾರತ ದೇಶದ ಎಲ್ಲಾ ಸನಾತನ ಧರ್ಮದವರಿಗೂ ಇದೆ ಎಂಬುದನ್ನು ಮೋಹನ ರಾವ್ ಶರ್ಮ ಅವರು ಹೇಳಿದರು

ಈ ಶ್ರೀಗಳ ಉಪನ್ಯಾಸದ ನಂತರ ಅಖಿಲ ಭಾರತ ವಿರಾಟ್ ವಿಶ್ವಕರ್ಮ ಮಹಿಳಾ ಮತ್ತು ಯುವಜನ ಒಕ್ಕೂಟದ ಮಹಿಳಾ ಅಧ್ಯಕ್ಷರಾದಂತಹ ಶ್ರೀಮತಿ ಪದ್ಮಾವತಿ ಶುಭಾಷ್ ಅವ್ರು ಮಾತಾಡುತ್ತಾ ಶ್ರೀಗಲು ಹೇಳಿದ್ದೆಲ್ಲ ಅಕ್ಷರಸಹ ಅಮೂಲ್ಯವಾದಂತಹ ಇತಿಹಾಸದ ಕಟು ಸತ್ಯವಚನಗಳು ಎಂದೂ ಶ್ರೀಗಳು ಹೇಳಿದಎಲ್ಲವೂ ಕೂಡ ವೇದಗಳು ಶಾಸ್ತ್ರಗಳು ಆಧಾರವಾಗಿಯೇ ಹೇಳಿದ್ದಾರೆ ಇದಕ್ಕೆ ನಾವು ಕೂಡ ಬಲಪಡಿಸುತ್ತೇವೆ ಎಂದು ಹೇಳಿದ್ದಾರೆ ಮತ್ತು ಶ್ರೀಮತಿ ಪದ್ಮಾವತಿ ಯವರು ಮಾಡಿರುವಂತಹ ಸಂಘ ಸೇವೆಯನ್ನು ಅದೇ ರೀತಿ ಈ ಸಂಸ್ಥೆಯ ಅಧ್ಯಕ್ಷರಾಗಿ ವಿಶ್ವಕರ್ಮ ವಂಶ ಬ್ರಾಹ್ಮಣರ ಕುರಿತು ಕೆಲವು ಪ್ರಕಟಣೆಗಳು ಮತ್ತು ಶ್ರೀಗಳು ಬರೆದಿರುವಂತಹ ಕೆಲವು ಮುಖ್ಯವಾದ ಲೇಖನಗಳನ್ನು ವಾರ್ತಾಪತ್ರಿಕೆಗಳಿಗೆ ಸುದ್ದಿ ಮಾಡುತ್ತಾ ಸಮಾಜ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಕರ್ನಾಟಕ ಸರ್ಕಾರದ ಅಧಿಕಾರಿಗಳಾಗಿರುವಂತಹ ಕುಲಶಾಸ್ತ್ರದ ಅಧ್ಯಯನದ ತಂಡದೊಂದಿಗೆ ನೀವು ಸರ್ಕಾರಕ್ಕೆ ಕೊಡುವಂತಹ ವರದಿಯಲ್ಲಿ ಮುಂದಿನ ಪೀಳಿಗೆಗೆ ಕುಲಶಾಸ್ತ್ರದ ಅಧ್ಯಯನದ ಫಲವಾಗಿ ವಿಶ್ವಕರ್ಮ ವಂಶಸ್ಥರ ಜ್ಞಾನಿಗಳು ವಿಜ್ಞಾನಿಗಳು ಹಾಗೂ ವೈದಿಕ ದೇವತಾ ಪರಂಪರೆ ಇರುವಂತಹ ಬ್ರಾಹ್ಮಣರೆಂದು ನಿಜವಾದ ಉತ್ತಮವಾದ ವರದಿಪೂರ್ವಕ ವಿಚಾರವನ್ನು ನೀಡಬೇಕೆಂದು ಬಹಳ ಕಳಕಲೆಯಿಂದ ನಾವು ವಿನಂತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈಸಂದರ್ಭದಲ್ಲಿ ಡಿ.ದೇವರಾಜ್ ಅರಸು ಸಂಶೋಧನಾ ಸಂಸ್ಥೆ ಬೆಂಗಳೂರು.ಕುಲಶಾಸ್ತ್ರ ಅಧ್ಯಯನ ಪ್ರೋಫೇಸರ್ ಡಿ.ಸಿ. ನಂಜುಂಡ,ಕುಲ ಶಾಸ್ತ್ರದ ಅಧ್ಯಯನದ ಅಧಿಕಾರಿಗಳು.ಡಾ.ಮಹಾ ದೇವಪ್ಪ,ಡಾ.ಕ್ರಿಷ್ಣಮೂರ್ತಿ.ಭಾಗವಹಿಸಿದ್ದರು.

About Mallikarjun

Check Also

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಸ್ವಾಗತಾರ್ಹ: ಸಚಿವ ಬೋಸರಾಜು ಹರ್ಷ

Naming after Maharshi Valmiki for Raichur University is welcome: Minister Bosaraju Harsha ಬೆಂಗಳೂರು ಅಕ್ಟೋಬರ್‌ 17: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.