Breaking News

ಕಾಣೆಯಾದ ಮನುಷ್ಯನ ಪತ್ತೆ ಕುರಿತು ಮಾಹಿತಿ ತಿಳಿಸಲು ಪೊಲೀಸ್ ಪ್ರಕಟಣೆ…!

Police announcement to provide information the missing man…!

ಜಾಹೀರಾತು

ಕಾಣೆಯಾದ ಮನುಷ್ಯನ ಚಹರೆ ಪಟ್ಟಿ ಭಾವಚಿತ್ರ,


ಗಂಗಾವತಿ: ದಿನಾಂಕ: 22-05-2024 ರಂದು ಪಿರ್ಯಾದಿದಾರರಾದ ಗಾಲಿಗಲ್ಲ ಬಾಲ ಮಾಶಮ್ಮ ಗಂಡಗಾಲಿಗಲ್ಲ ಬೊಜ್ಜಣ್ಣ ವಯಸ್ಸು 55 ವರ್ಷ, ಜಾ. ಮಾದಿಗ ಉ. ಕೂಲಿ ಕೆಲಸ ಸಾ. ಕೇತಪಲ್ಲಿ, ಹಾನಗಲ್ ಮಂಡಲ, ತಾ. ಕೊಲ್ಲಾಪುರ, ಜಿ. ವನಪರ್ತಿ (ತೆಲಂಗಾಣ ರಾಜ್ಯ) ರವರು ಠಾಣೆಗೆ ಹಾಜರಾಗಿ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಕರ್ನಾಟಕ ರಾಜ್ಯದ ಗಂಗಾವತಿಯಲ್ಲಿ ಆರ್.ಎನ್.ಎಸ್. ಕಂಪನಿಯಲ್ಲಿ ಕೆನಾಲ್ ಕೆಲಕ್ಕೆ ಸುಮಾರು 05 ತಿಂಗಳ ಹಿಂದೆ ನನ್ನ ಮಗ ಗಾಲಿಗಲ್ಲ ಮದು ಇವರು ಕೂಲಿ ಕೆಲಸಕ್ಕೆ ಬಂದಿದ್ದರು. ನನ್ನ ಮಗ ಬಂದ ನಂತರ ನಾನು ಈಗ್ಗೆ ಸುಮಾರು 02 ತಿಂಗಳ ಹಿಂದೆ ಅದೇ

ಕಂಪನಿಯಲ್ಲಿ ಕೂಲಿ ಕೆಲಸ ಮಾಡಲು ನಮ್ಮೂರಿನಿಂದ ಬಂದಿರುತ್ತವೆ. ನಾವು ಬಂದ ನಂತರ ಸುಮಾರು15 ದಿವಸ ಹಿಂದೆ ಅಂದರೆ ದಿನಾಂಕ. 09-05-2024 ರಂದು ನನ್ನಗಂಡ ಗಾಲಿಗಲ್ಲ ಬೋಜ್ಜಣ್ಣ ಈತನು ನಮಗೆ ಮಾತನಾಡಿಸಲು ಬಂದಿದ್ದನು. ನಂತರ ಸುಮ್ಮನೆ ಯಾಕೆ ಇರಬೇಕು ಅಂತಾ ಕಂಪನಿಯಲ್ಲಿ ರಾತ್ರಿ ಕೆಲಸಕ್ಕೆ ಹೋಗುತ್ತಿದ್ದನು. ದಿನಾಂಕ 12-05-2024 ರಂದು ರಾತ್ರಿ ಕಂಪನಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಿ ಬೆಳಿಗ್ಗೆ 6ಗಂಟೆಗೆ ಗಂಗಾವತಿಯ ಹಿರೇಜಂತಕಲದಲ್ಲಿ ಪಂಪಾ ವಿರುಪಾಕ್ಷೇಶ್ವರ ಗುಡಿ ಮುಂದೆ ಚಹಾ ಕುಡಿಯಲು ಹೋಗಿದ್ದು ಚಹಾ ಕುಡಿದು ಮನೆಗೆ ಬರದೆ ಕೆಲಕ್ಕೆ ಹೋಗದೇ ಕಾಣೆಯಾಗಿರುತ್ತಾನೆ. ವಯಸ್ಸು 60 ಎತ್ತರ 5’5, ಸಾದಾ ಕಪ್ಪು ಮೈ ಬಣ್ಣ. ದುಂಡು ಮುಖ,ಸದೃಡ ಮೈಕಟ್ಟು. ಧರಿಸಿರುವ ಉಡುಪು.ಮೈಮೇಲೆ ಬಿಳಿ ಅಂಗಿ, ಬಿಳಿ ಲುಂಗಿ ಮತ್ತು ಟವೇಲ್ ಧರಿಸಿರುತ್ತಾರೆ.
ಮಾತನಾಡುವ ಭಾಷೆ ತೆಲಗು
ಕೇತಪಲ್ಲಿ ಗ್ರಾಮ, ಪಾನಗಲ್ ಮಂಡಲ, ಕೊಲ್ಲಾಪುರ ತಾಲೂಕ, ವನಪರ್ತಿ ಜಿಲ್ಲಾ (ತೆಲಂಗಾಣ ರಾಜ್ಯ) ಈ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 81/2024 ಕಲಂ: ಮನುಷ್ಯ ಕಾಣೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ನಗರ ಠಾಣೆ ಪೊಲೀಸ್ ಇಲಾಖೆ ತನಿಖೆ ಕೈಕೊಂಡಿದ್ದು.ಸದರಿ ಕಾಣೆಯಾದ ಮನುಷ್ಯನ ಪತ್ತೆ ಕುರಿತು ಮಾಹಿತಿ ದೊರೆತಲ್ಲಿ ಈ ಕೆಳಗಿನ ವಿಳಾಸಕ್ಕೆ ತಿಳಿಸಲು ಕೋರಲಾಗಿದೆ.

ಎಸ್.ಪಿ. ಕೊಪ್ಪಳ, 2.08539-230111.
ಡಿವೈಎಸ್‌ಪಿ ಗಂಗಾವತಿ. 08533-230853.9480803721.
ಪೊಲೀಸ್ ಇನ್ಸಪೆಕ್ಟರ್, ನಗರ ಪೊಲೀಸ್ ಠಾಣೆ ಗಂಗಾವತಿ. . 08533-230633. 9480803752.

About Mallikarjun

Check Also

ಜ್ಞಾನಾಕ್ಷಿರಾಜರಾಜೇಶ್ವರಿ ಮ್ಯೂಸಿಕ್ ವಿಡಿಯೋ ಆಲ್ಬಮ್ ಶೀರ್ಷಿಕೆ ಅನಾವರಣ

Gnanakshi Rajarajeshwari Music Video Album Title Unveiled ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಸ್ಥಾನ, ಶ್ರೀ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.