
ಗಂಗಾವತಿ, ಜು.13: ಭಾರತ ವಿಕಾಸ ಪರಿಷತ್ತು ಕಳೆದ ಹಲವು ದಶಕದಿಂದ ಸಾಮಾಜಿಕ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ, ಮಹಿಳಾ ಸಬಲೀಕರಣ, ಆರೋಗ್ಯ, ಪರಿಸರದಂತ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ನಗರಠಾಣೆಯ ಪಿಐ ಪ್ರಕಾಶ ಮಾಳೆ ಹೇಳಿದರು.
ಭಾರತ ವಿಕಾಸ್ ಪರಿಷತ್ತಿನ 63ನೇ ಸಂಸ್ಥಾನ ದಿನಾಚರಣೆ ಅಂಗವಾಗಿ ಸಂಘಟನೆಯ ಉತ್ತರ ಪ್ರಾಂತ್ಯದ ಗಂಗಾವತಿ ತಾಲ್ಲೂಕು ಘಟಕದಿಂದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವನ ಮಹೋತ್ಸವಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಲ್ಲಿ ಸಾಮಾನ್ಯ ಜ್ಞಾನ ವೃದ್ಧಿಸುವ, ಮಹಿಳೆಯರಲ್ಲಿ ಆತ್ಮವಿಶ್ವಾಸ ವೃದ್ಧಿಸುವಂತಹ ಹತ್ತಾರು ಕಾರ್ಯಕ್ರಮಗಳನ್ನು ಭಾರ ವಿಕಾಸ ಪರಿಷತ್ ಮಾಡುತ್ತಿರುವುದು ಶ್ಲಾಘನೀಯ. ಮುಖ್ಯವಾಗಿ ಎಲ್ಲರೂ ಪರಿಸರದ ಬಗ್ಗೆ ಕಾಳಜಿ ಇರಬೇಕು ಎಂದು ಕರೆ ನೀಡಿದರು.
ಭಾರತೀಯ ಜೀವ ವಿಮಾ ನಿಗಮದ ಗಂಗಾವತಿ ಶಾಖೆಯ ಉಪ ವ್ಯವಸ್ಥಾಪಕ ವಿಶ್ವನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಅಕ್ಕಿ ಆನಂದ್, ರಾಜಶೇಖರ್ ಹೇರೂರು, ಅವನಿ ಮೂಥಾ, ಡಾ. ಶಿವಕುಮಾರ, ಚಂದ್ರಕಲಾ ಐಲಿ, ಜಂಬಣ್ಣ ಐಲಿ, ಗಿರಿಧರ ಜೂರಟಗಿ, ಯೋಗೇಶ ಮೂಥಾ, ಕಂಚಿಕಾ, ಸುಲೋಚನಾ, ಗುರುಪ್ರಸಾದ್ ಇದ್ದರು.


