ಕೊಪ್ಪಳ ; ಇಂದರಗಿ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು – ಮೈಲಾರಪ್ಪ ಡಿಎಸ್ಎಸ್. ಒತ್ತಾಯಿಸಿದರು.
ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಗ್ರಾಮದಲ್ಲಿನ ಗ್ರಾಮಸ್ಥರು, ಯುವಕರು, ಮಹಿಳೆಯರು ಕೂಡ ಕುಡಿತದ ದಾಸ್ಯಕ್ಕೆ ಒಳಗಾಗಿದ್ದಾರೆ. ಇದರಿಂದ ಇವರ ಬಡ ಕುಟುಂಬದವರ ಜೀವನ ತುಂಬಾ ಕಷ್ಟಕರ ವಾಗಿದ್ದು, ದಿನದಲ್ಲಿ ದುಡಿದ ಹಣವನ್ನು ಈ ಮದ್ಯದ ಅಂಗಡಿಗಳಿಗೆ ಇಡುವಂತಹ ದುಸ್ತಿತಿ ಬಂದಿದೆ.ಮತ್ತು ಊರಿನಲ್ಲಿ ತುಂಬಾ ಅನವಸ್ಯಕವಾಗಿ ಗಲಾಟೆಗಳು ನಡೆಯುತ್ತಿವೆ.
ಸಾಕಷ್ಟು ಸಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.ಅಕ್ರಮ ಮದ್ಯ ಮಾರಾಟ ನಿಯಂತ್ರಣ ಕೆಟ್ಟಿದೆ.ಇದರಿಂದ ಚಿಕ್ಕ ಮಕ್ಕಳು, ಶಾಲಾ ವಿದ್ಯಾರ್ಥಿಗಳು ಈ ಮದ್ಯ ದಾಸ್ಯಕ್ಕೆ ಬಲಿಯಾಗಿ ಚಿಕ್ಕ ವಯಸ್ಸಲ್ಲಿ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಅವರ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದರು.
ಇಲ್ಲಿನ ಮದ್ಯದ ಅಂಗಡಿಗಳು ಅಬಕಾರಿ ನಿಯಮಗಳನ್ನು ಮೀರಿ ತಮಗೆ ಇಷ್ಟ ಬಂದಂತೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದು , ಇದಕ್ಕೆ ಅಬಕಾರಿ ನಿರೀಕ್ಷಕರು ಸಾತ್ ಕೊಡುತ್ತಿದ್ದಾರೆ. ಇದರಿಂದ ಊರಿನಲ್ಲಿ ಮದ್ಯದ ಅಂಗಡಿಗಳು ಹೆಚ್ಚಾಗಿವೆ.
ಇಲ್ಲಿನ ಡಿಎಸ್ಎಸ್ ಸಂಘಟನೆಯ ಉಪಾಧ್ಯಕ್ಷರಾದ ಮೈಲಾರಪ್ಪ ಅವರ ನೇತೃತ್ವದಲ್ಲಿ ಸಾಕಷ್ಟು ಸಲಾ ಪ್ರತಿಭಟನೆ ನಡೆಸಲಾಗಿತ್ತು. ಆದಾಗ್ಯೂ ಸಹ ಮದ್ಯ ಮಾರಾಟ ಕಡಿಮೆ ಆಗಿಲ್ಲಾ. ಅಬಕಾರಿ ಅಧಿಕಾರಿಗಳು ಮತ್ತು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕೆಂದು ಇಂದು ಊರಿನ ಹಿರಿಯರು, ವಿವಿಧ ಸಂಘಟನೆಗಳ ಮುಖಂಡರು, ಯುವಕರು ಸೇರಿ ಒಂದೆಡೆ ಕುಳಿತು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಳು ಸಭೆ ಸೇರಿದ್ದರು.
ಈ ಸಭೆಯಲ್ಲಿ ಊರಿನ ಜನರ ಹಿತಾಸಕ್ತಿಗಾಗಿ ಮದ್ಯ ಮಾರಾಟ ನಿಷೇಧ ಮಾಡಬೇಕು.ಮದ್ಯವನ್ನು ಶಾಶ್ವತವಾಗಿ ಮುಕ್ತ ಮಾಡಬೇಕು, ಇನ್ನುಮುಂದೆ ಯಾವುದೇ ಮದ್ಯದ ಅಂಗಡಿಗಳು ಊರಿನಲ್ಲಿ ತೆರೆಯಬಾರದು ಎಂದು ಮತ್ತು ಮದ್ಯದ ಅಂಗಡಿಗಳು ತೆರೆದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಅವರನ್ನು ಊರಿನಿಂದ ಗಡಿಪಾರು ಮಾಡಲಾಗುವುದು ಎಂದು ತಿಳಿಸಿದರು. ಮತ್ತು ಊರಿನ ಪ್ರಮುಖರೆಲ್ಲರೂ ಸೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಇಂದರಗಿ ಇವರಿಗೆ ಸಲ್ಲಿಸಿದರು. ಇದರ ಜೊತೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ,ಮತ್ತು ಜಿಲ್ಲಾ ಅಬಕಾರಿ ನಿರೀಕ್ಷಕರು ಕೊಪ್ಪಳ, ಪ್ರತಿಗಳನ್ನು ಸಲ್ಲಿಸಿದರು.
ಈ ಸಭೆಯಲ್ಲಿ ಊರಿನ ಇಂದರಗಿ, ಹನುಮೇಶ್ ಡಿ ಎಸ್ ಎಸ್, ಶಿವಣ್ಣ ಭೀಮನೂರು, ಹುಚ್ಚಪ್ಪ ಹಿರೇ ಕುರುಬರ, ಈರಣ್ಣ ನರಸಾಪುರ್, ದೇವಪ್ಪ ಬೋವಿ, ಉಪಾಧ್ಯಕ್ಷರಾದ ಅಂಬರೀಶ್, ಕೊಪ್ಪಳ ಗವಿಸಿದ್ದಪ್ಪ ಕುಂಬಾರ್ ಕನಕಪ್ಪ, ಹೊಸಳ್ಳಿ ಪರಶುರಾಮ,ವಣಗೇರಿ ರಾಮಣ್ಣ, ಮೂಗುತಿ ಹನುಮಂತಪ್ಪ ಪೂಜೇರ್, ದಳಪತಿ ಪೂಜಾರ್ ಮತ್ತು ಗ್ರಾಮಸ್ಥರು ಉಪಸ್ಥಿದ್ದರು.