Breaking News

ಆನೆಗುಂದಿಯಲ್ಲಿ ಹೈಟೆಕ್ ಮಾದರಿಯ ರುದ್ರಭೂಮಿಉದ್ಘಾಟನೆ

ಗಂಗಾವತಿ: ಆನೆಗುಂದಿಯಲ್ಲಿ ನರೇಗಾ ಹಾಗೂ ೧೫ನೇ ಹಣಕಾಸಿನ ಯೋಜನೆ ಅಡಿಯಲ್ಲಿ ಶ್ರೀಮತಿ ಲಲಿತಾರಾಣಿರವರ ಮಾರ್ಗದರ್ಶನದಲ್ಲಿ ಹೈಟೆಕ್ ಆಗಿ ನಿರ್ಮಾಣಗೊಂಡಿರುವ ರುದ್ರಭೂಮಿಗೆ ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಯವರಿAದ ಚಿತಾಗಾರದ ಸಹಕಾರ ನೀಡಿದ್ದು, ಈ ರುದ್ರಭೂಮಿಯ ಉದ್ಘಾಟನೆ ಕಾರ್ಯಕ್ರಮ ಜುಲೈ-೦೧ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಿತು ಎಂದು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಕೆ. ಮಹಾದೇವಿ ತಿಮ್ಮಪ್ಪ ಬಾಳೆಕಾಯಿ ತಿಳಿಸಿದರು.
ಗ್ರಾಮದ ಹಿರಿಯರು ಹಾಗೂ ರುದ್ರಭೂಮಿಯ ಹೋರಾಟಗಾರರಾದ ಶ್ರೀ ನಿಜಲಿಂಗಪ್ಪರವರೊAದಿಗೆ ಜಂಟಿಯಾಗಿ ರುದ್ರಭೂಮಿಯ ಉದ್ಘಾಟನೆ ಮಾಡಿ ಮಾತನಾಡಿದರು. ನಮ್ಮ ಆನೆಗುಂದಿಯ ಹಿರಿಯರು ಹಾಗೂ ಹೋರಾಟಗಾರರಾದ ಶ್ರೀ ನಿಜಲಿಂಗಪ್ಪ ಅವರು ಆನೆಗುಂದಿಯಲ್ಲಿ ಎರಡು ಎಕರೆ ರುದ್ರಭೂಮಿಗೆ ಜಾಗ ಬೇಕೆಂದು ೧೯೯೨ ರಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ, ಅವರ ಕನಸು ಈಗ ನನಸಾಗಲಿದೆ, ಈ ರುದ್ರಭೂಮಿಯ ಕಾಮಗಾರಿ ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳ್ಳಲು ಆನೆಗುಂದಿ ಗ್ರಾಮ ಪಂಚಾಯತ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಆನೆಗುಂದಿಯ ಎಲ್ಲಾ ಸಮಾಜದ ಗುರು ಹಿರಿಯರು ಇವರೆಲ್ಲ ಸಹಕಾರ ಮುಖ್ಯ ಕಾರಣವಾಗಿದೆ ಎಂದರು ತಿಳಿಸಿದರು.
ಈ ಸಂದರ್ಭದಲ್ಲಿ ಚಿತ್ರನಟ ಹಾಗೂ ಕಾಂಗ್ರೆಸ್ ಮುಖಂಡ ವಿಷ್ಣುತೀರ್ಥ ಜೋಶಿ, ಆನೆಗೂದಿಯ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ತಿರುಕಪ್ಪ ಆನೆಗುಂದಿ, ತಿಮ್ಮಪ್ಪ ಬಾಳೆಕಾಯಿ, ಗುರಪ್ಪ, ಹೊನ್ನಪ್ಪ ನಾಯಕ್, ಯುವರಾಜ್ ಕಡೆಬಾಗಿಲು, ನೂರ್, ಗ್ರಾಮಪಂಚಾಯತ್ ಸದಸ್ಯ ಶೇಖರ್, ರಮೇಶ ಕಲಾಲ್, ನಾಗಪ್ಪ ಮೆಟ್ರಿ, ಟಿ. ಚಂದ್ರು, ಆನೆಗುಂದಿಯ ಗ್ರಾಮದ ಗುರುಹಿರಿಯರು, ಸಮಸ್ತ ಎಲ್ಲಾ ಸಮಾಜದ ಮುಖಂಡರು, ಸಂಘ ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಜಾಹೀರಾತು

About Mallikarjun

Check Also

screenshot 2025 08 30 17 22 30 42 e307a3f9df9f380ebaf106e1dc980bb6.jpg

ರಾಜ್ಯ ಮಟ್ಟದ ಖಾದಿ ಮೇಳಕ್ಕೆ ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಓ ಭೇಟಿ

Koppal District Magistrate and G.P. CEO visit state-level Khadi Mela ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.