Breaking News

ವಿಶ್ವಕರ್ಮರು ಉದ್ಯಮಿಗಳಾಗಲು ಡಾ.ಬಿ.ಎಂ.ಉಮೇಶ್ ಕುಮಾರ್ ಕರೆಪಿಎಂ ವಿಶ್ವಕರ್ಮ ಯೋಜನೆ ಮಾಹಿತಿ ಶಿಬಿರ ಉದ್ಘಾಟನೆ

Dr. B. M. Umesh Kumar calls on Vishwakarma to become an entrepreneur
PM Vishwakarma Yojana information camp inaugurated


ಕೋಟೇಶ್ವರ (ಉಡುಪಿ ಜಿಲ್ಲೆ) : ಪಿಎಂ ವಿಶ್ವ ಕರ್ಮ ಯೋಜನೆ ಸೇರಿದಂತೆ ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಗಳನ್ನು ಸದ್ಬಳಕೆ ಮಾಡಿಕೊಂಡು “ವಿಶ್ವಕರ್ಮ ಸಮುದಾಯದವರು ಉದ್ಯಮಿಗಳಾಗಲು ಪ್ರಯತ್ನಿಸಬೇಕು” ಎಂದು ಸಹಕಾರ ರತ್ನ, ವಿಶ್ವಕರ್ಮ ನಾಡೋಜ ಡಾ.ಬಿ.ಎಂ.ಉಮೇಶ್ ಕುಮಾರ್ ಕರೆ ಕೊಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಆಯೋಜಿಸಿದ್ದ “ಪಿ.ಎಂ.ವಿಶ್ವಕರ್ಮ ಯೋಜನೆ ಮಾಹಿತಿ ಶಿಬಿರ”ದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಾಣುವುದು ಹೇಗೆ?” ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ ಡಾ. ಉಮೇಶ್ ಕುಮಾರ್ ಅವರು ಈ ಕರೆ ಕೊಟ್ಟರು.

“ನಾವು ಉದ್ಯಮಿಗಳಾಗಿ ಇನ್ನೊಬ್ಬರಿಗೆ ಉದ್ಯೋಗ ಕೊಡುವುದು ಅತ್ಯಂತ ಸ್ವಾಭಿಮಾನದ ಕೆಲಸಗಳಲ್ಲಿ ಒಂದು. ವಿಶ್ವಕರ್ಮರ ಪಂಚಕಸುಬುಗಳನ್ನು ಸಂರಕ್ಷಿಸಬೇಕು ಪ್ರತಿಯೊಬ್ಬ ವಿಶ್ವಕರ್ಮನೂ ತಮ್ಮ ಸಾಂಪ್ರದಾಯಿಕ ಕಸುಬಿನಲ್ಲಿ ಉದ್ಯಮವನ್ನು ಸ್ಥಾಪಿಸಬೇಕು ಎಂದು ನಾನು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತೇನೆ. ತಾವು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳಾದರೆ ಪಂಚ ಕಸುಬುಗಳ ಸಂರಕ್ಷಣೆ ಅತ್ಯಂತ ಸುಲಭ.”ಎಂದು ಉಮೇಶ್ ಕುಮಾರ್ ತಿಳಿಸಿದರು

About Mallikarjun

Check Also

ಗೊರ್ಲೆಕೊಪ್ಪಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ:ಮಹಿಳೆಯರ ಆಗ್ರಹ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗೊರ್ಲೆ ಕೊಪ್ಪ ಗ್ರಾಮದಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಮದ್ಯದ ಲೈಸೆನ್ಸ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.